ರಣವೀರ್ ಸಿಂಗ್ ಬಳಿಯ ಇರುವ ಕಾರುಗಳ ಮೊತ್ತವೇ ಎಷ್ಟು ಕೋಟಿಗಳು ಗೊತ್ತೇ?
First Published | Jul 6, 2022, 6:28 PM ISTನಟ ರಣವೀರ್ ಸಿಂಗ್ (Ranveer Singh) ಅವರಿಗೆ 37 ವರ್ಷಗಳ ಸಂಭ್ರಮ . ಜುಲೈ 6, 1985 ರಂದು ಜನಿಸಿದ ರಣವೀರ್ ಸಿಂಗ್ ಇಂದು ಬಾಲಿವುಡ್‌ನ ಟಾಪ್ ಸ್ಟಾರ್‌ಗಳಲ್ಲಿ ಒಬ್ಬರು. ಆದರೆ ಇಲ್ಲಿಗೆ ಬರಲು ಕಷ್ಟಪಟ್ಟಿದ್ದಾರೆ. 2011ರಲ್ಲಿ ತಾನು ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದೆ ಎಂದು ರಣವೀರ್ ಸಂಭಾಷಣೆಯೊಂದರಲ್ಲಿ ಹೇಳಿದ್ದರು. ಆದರೆ, ಇಂದಿನ ದಿನಗಳಲ್ಲಿ ಐಷಾರಾಮಿ ಜೀವನ ನಡೆಸುತ್ತಿದ್ದಾರೆ. ವರದಿಗಳ ಪ್ರಕಾರ, ಅವರು 300 ಕೋಟಿಗೂ ಹೆಚ್ಚು ಆಸ್ತಿ ಹೊಂದಿದ್ದಾರೆ. ಅವರ ಐಷಾರಾಮಿ ಕಾರುಗಳ ಸಂಗ್ರಹವನ್ನು ನೋಡಿದರೆ ಆಶ್ಚರ್ಯವಾಗಬಹುದು. ರಣವೀರ್‌ನ ಅವರ ಕಾರುಗಳ ಕಲೆಕ್ಷನ್ ವಿವರ ಇಲ್ಲಿದೆ. ಅದರ ಬೆಲೆ 12 ಲಕ್ಷದಿಂದ 3.29 ಕೋಟಿರೂ ವರೆಗೆ ಇದೆ.