ಕ್ರಿಕೆಟರ್ ಕೃಷ್ಣಮಾಚಾರಿ ಶ್ರೀಕಾಂತ್ ಪಾತ್ರವನ್ನು ನಟ ಜೀವಾ ನಟಿಸಿದ್ದಾರೆ : '83' ಚಿತ್ರ ಡಿಸೆಂಬರ್ 24 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗುತ್ತಿದೆ. ಹಿಂದಿ, ತಮಿಳು, ತೆಲುಗು, ಮಲಯಾಳಂ ಮತ್ತು ಕನ್ನಡ ಭಾಷೆಗಳಲ್ಲಿ ಚಿತ್ರ ಬಿಡುಗಡೆಯಾಗಲಿದೆ. ಇದರೊಂದಿಗೆ 3ಡಿಯಲ್ಲಿಯೂ ಬಿಡುಗಡೆಯಾಗಲಿದೆ.
ರವಿಶಾಸ್ತ್ರಿ ಪಾತ್ರವನ್ನು ನಟ ದೈರ್ಯ್ ಕರ್ವಾ ಮಾಡಲಿದ್ದಾರೆ: ದೇಶದ ಅತಿದೊಡ್ಡ ಸ್ಪೋರ್ಟ್ಸ್ ಡ್ರಾಮಾ ಎಂದು ಪರಿಗಣಿಸಲ್ಪಟ್ಟ '83' ಸಿನಿಮಾವು ಹಿಂದಿ, ತಮಿಳು ಮತ್ತು ತೆಲುಗು ಭಾಷೆಗಳಲ್ಲಿ 10 ಏಪ್ರಿಲ್ 2020 ರಂದು ಬಿಡುಗಡೆಯಾಗಬೇಕಿತ್ತು. ಆದರೆ ಕೊರೊನಾ ಕಾರಣ ಅದರ ದಿನಾಂಕವನ್ನು ಮುಂದೂಡುತ್ತಲೇ ಬಂದಿತ್ತು
ನಟ ಆದಿನಾಥ್ ಕೊಠಾರೆ ದಿಲೀಪ್ ವೆಂಗ್‌ಸರ್ಕರ್ ಪಾತ್ರದಲ್ಲಿ : ರಣವೀರ್ ಸಿಂಗ್ ಮತ್ತು ದೀಪಿಕಾ ಪಡುಕೋಣೆ ವಿವಾಹದ ನಂತರ 83 ಚಿತ್ರವು ಜೊತೆಯಾಗಿ ತೆರೆಯ ಮೇಲಿನ ಮೊದಲ ಚಲನಚಿತ್ರವಾಗಿದೆ. ಇದರಲ್ಲಿ ರಣವೀರ್ ಕಪಿಲ್ ದೇವ್ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಅವರ ಪತ್ನಿ ರೋಮಿ ಭಾಟಿಯಾ ಪಾತ್ರದಲ್ಲಿ ದೀಪಿಕಾ ಕಾಣಿಸಿಕೊಳ್ಳಲಿದ್ದಾರೆ.
ವಿಕೆಟ್ ಕೀಪರ್ ಸೈಯದ್ ಕಿರ್ಮಾನಿ ಆಗಿ ನಟ ಸಾಹಿಲ್ ಖಟ್ಟರ್: ರಣವೀರ್ ಸಿಂಗ್ ಮತ್ತು ದೀಪಿಕಾ ಪಡುಕೋಣೆ ಅವರ ಈ ಸಿನಿಮಾವು 1983 ರ ಕ್ರಿಕೆಟ್ ವಿಶ್ವಕಪ್‌ನಲ್ಲಿ ಭಾರತ ಗೆದ್ದ ಕಥೆಯನ್ನು ಆಧರಿಸಿದೆ. ಆಗ ಕಪಿಲ್ ದೇವ್ ಭಾರತ ಕ್ರಿಕೆಟ್ ತಂಡದ ನಾಯಕರಾಗಿದ್ದರು. ರಣವೀರ್ ಸಿಂಗ್ ಅವರ ಈ ಸಿನಿಮಾದ ಮೂಲಕ ವಿಶ್ವಕಪ್‌ನ ನೆನಪುಗಳನ್ನು ಮರುಕಳಿಸಲಿದೆ.
ಬೌಲರ್ ಬಲ್ವಿಂದರ್ ಸಿಂಗ್ ಸಂಧು ಪಾತ್ರದಲ್ಲಿ ಆಮಿ ವಿರ್ಕ್ ಕಾಣಿಸಿಕೊಳ್ಳಲಿದ್ದಾರೆ: ವಿದೇಶಿ ನೆಲದಲ್ಲಿ ತಮ್ಮ ದೇಶವನ್ನು ಹೆಮ್ಮೆ ಪಡುವಂತೆ ಮಾಡಲು ಭಾರತೀಯ ಆಟಗಾರರು ಹೇಗೆ ಶ್ರಮಿಸುತ್ತಾರೆ ಎಂಬುದನ್ನು ಚಿತ್ರ ತೋರಿಸುತ್ತದೆ. ಅಲ್ಲದೆ ಕೊನೆಯಲ್ಲಿ ಭಾರತ ತಂಡ ಕ್ರಿಕೆಟ್ ಮೈದಾನದಲ್ಲಿ ಗೆದ್ದಾಗ ದೇಶಾದ್ಯಂತ ದೀಪಾವಳಿಯನ್ನು ಹೇಗೆ ಆಚರಿಸಲಾಗುತ್ತದೆ ಎಂದು ಸಿನಿಮಾದಲ್ಲಿ ನೋಡಬಹುದು.
ಕೀರ್ತಿ ಆಜಾದ್ ಆಗಿ ನಟ ದಿನಕರ್ ಶರ್ಮಾ: ಈ ಚಿತ್ರದ ಟ್ರೇಲರ್ ಅನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿರುವ ರಣವೀರ್, 'ಅಂಡರ್‌ಡಾಗ್‌ಗಳ ನಿಜವಾದ ಕಥೆ, ನೀವು ಊಹಿಸಲೂ ಸಾಧ್ಯವಿಲ್ಲ' ಎಂದು ಬರೆದಿದ್ದಾರೆ. ಅದೇ ಸಮಯದಲ್ಲಿ, ಅಭಿಮಾನಿಗಳು 83 ರ ಟ್ರೈಲರ್ ಅನ್ನು ಸಹ ತುಂಬಾ ಇಷ್ಟಪಡುತ್ತಾರೆ.
ಯಶಪಾಲ್ ಶರ್ಮಾ ಅವರ ಪಾತ್ರಲ್ಲಿ ನಟ ಜತಿನ್ ಸರ್ನಾ ಕಾಣಿಸಿಕೊಳ್ಳಲಿದ್ದಾರೆ: ಚಿತ್ರದ ಕಥೆಯು 1983 ರ ಕ್ರಿಕೆಟ್ ವಿಶ್ವಕಪ್ ಅನ್ನು ಆಧರಿಸಿದೆ, ಇದರಲ್ಲಿ ಕಪಿಲ್ ದೇವ್ ನೇತೃತ್ವದ ಭಾರತ ತಂಡವು ವೆಸ್ಟ್ ಇಂಡೀಸ್ ವಿರುದ್ಧ ಲಾರ್ಡ್ಸ್‌ನಲ್ಲಿ ಮೊದಲ ವಿಶ್ವಕಪ್ ಗೆದ್ದಿತು.
ಮದನಲಾಲ್ ಪಾತ್ರದಲ್ಲಿ ನಟ ಹಾರ್ಡಿ ಸಂಧು : ಗಾಯಕ ಹಾರ್ಡಿ ಸಂಧು ಈ ಚಿತ್ರದಲ್ಲಿ ಮದಲ್ ಲಾಲ್ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ. ಈ ಚಿತ್ರವು ಶೀಘ್ರದಲ್ಲೇ ನಿಮ್ಮೆಲ್ಲರ ಮುಂದೆ ಬರಲಿದೆ ಎಂದು ನನಗೆ ತುಂಬಾ ಖುಷಿಯಾಗಿದೆ. ಈ ಚಿತ್ರಕ್ಕಾಗಿ ನಾವೆಲ್ಲ 2 ವರ್ಷಗಳಿಂದ ಕಾಯುತ್ತಿದ್ದೆವು ಎಂದು ಸಂದರ್ಶನವೊಂದರಲ್ಲಿ ಅವರು ಹೇಳಿದರು.
ಈ ಸಿನಿಮಾದಲ್ಲಿ ಸುನಿಲ್ ಗವಾಸ್ಕರ್ ಆಗಿ ನಟ ತಾಹಿರ್ ರಾಜ್ ಭಾಸಿನ್ ಕಾಣಿಸಿಕೊಳ್ಳುತ್ತಾರೆ: 'ನಾವು 1983 ರಲ್ಲಿ ವೆಸ್ಟ್ ಇಂಡೀಸ್‌ನಲ್ಲಿದ್ದೇವೆ ಮತ್ತು ನಾವು ಗೆಲ್ಲುತ್ತೇವೆ ಎಂದು ಕ್ಯಾಪ್ಟನ್ ಹೇಳುತ್ತಾರೆ. ಕ್ಯಾಪ್ಟನ್ ಹುಚ್ಚನಾಗಿದ್ದಾನೆ ಎಂದು ನಮಗೆ ಅನಿಸುತ್ತದೆ ಎಂಉ ಸಿನಿಮಾದ ಒಂದು ದೃಶ್ಯದಲ್ಲಿ, ತಂಡದ ಎಲ್ಲರೂ ಕಪಿಲ್ ದೇವ್‌ಗೆ (ರಣವೀರ್ ಸಿಂಗ್) ಹೇಳುತ್ತಾರೆ.
ನಟ ಚಿರಾಗ್ ಪಾಟೀಲ್ ಕ್ರಿಕೆಟರ್ ಸಂದೀಪ್ ಪಾಟೀಲ್ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.
ಈ ಪಂದ್ಯದಲ್ಲಿ ಭಾರತ ಗೆದ್ದಾಗ ರಣವೀರ್ ಸಿಂಗ್ ಭಾರತ ತಂಡಕ್ಕೆ ಮಾರ್ಗದರ್ಶನ ನೀಡುತ್ತಿದ್ದರು. ಚಿತ್ರೀಕರಣದ ಸಮಯದಲ್ಲಿ, ರಣವೀರ್ ನಿಜವಾಗಿಯೂ ಭಾರತಕ್ಕೆ ವಿಶ್ವಕಪ್ ತರುತ್ತಾನೆ ಮತ್ತು ಅಂತಿಮ ಶಾಟ್‌ನಲ್ಲಿ ದೃಶ್ಯವನ್ನು ಕಟ್ ಮಾಡಿದ ನಂತರ, ಅವನು ಅಳುತ್ತಾನೆ' ಎಂದು 83 ಚಿತ್ರದ ನಿರ್ದೇಶಕ ಕಬೀರ್ ಖಾನ್ ಹೇಳಿದ್ದಾರೆ.
ಟೀಮ್ ಇಂಡಿಯಾದ ಮಾಜಿ ಆಟಗಾರ ಮೊಹಿಂದರ್ ಅಮರನಾಥ್ ಪಾತ್ರದಲ್ಲಿ ಸಾಕಿಬ್ ಸಲೀಂ.
1983ರಲ್ಲಿ ಭಾರತ ಕ್ರಿಕೆಟ್ ತಂಡವು ಜಗತ್ತಿನಲ್ಲಿ ಅಷ್ಟು ಹೆಸರು ಹೊಂದಿಲ್ಲದ ಸಮಯವಾಗಿತ್ತು ಇದಾದ ಬಳಿಕ ಫೈನಲ್ ಪಂದ್ಯದಲ್ಲಿ ಟೀಂ ಇಂಡಿಯಾ ಎರಡು ಬಾರಿಯ ಚಾಂಪಿಯನ್ಸ್ ಹಾಗೂ ಅಂದಿನ ಬಲಿಷ್ಠ ತಂಡ ವೆಸ್ಟ್ಇಂಡೀಸ್ ತಂಡವನ್ನು ಮಣಿಸಿತ್ತು.
ಸುನಿಲ್ ವಲ್ಸನ್ ಪಾತ್ರವನ್ನು ನಟ ಆರ್ ಬದ್ರಿನಿರ್ವಹಿಸಿದ್ದಾರೆ.
'ಕ್ರೀಡಾ ಇತಿಹಾಸದ ಅತ್ಯಂತ ಅಪ್ರತಿಮ ಕ್ಷಣಗಳಲ್ಲಿ ಒಂದು ಸಣ್ಣ ಆದರೆ ಪ್ರಮುಖ ಪಾತ್ರವನ್ನು ವಹಿಸುವುದು ಗೌರವ. ಗಂಡನ ವೃತ್ತಿಪರ ಮತ್ತು ವೈಯಕ್ತಿಕ ಆಕಾಂಕ್ಷೆಗಳ ಯಶಸ್ಸಿನಲ್ಲಿ ಹೆಂಡತಿ ಎಷ್ಟು ಪ್ರಮುಖ ಪಾತ್ರವನ್ನು ವಹಿಸುತ್ತಾಳೆ ಎಂಬುದನ್ನು ನಾನು ನನ್ನ ತಾಯಿಯಿಂದ ಕಲಿತಿದ್ದೇನೆ' ಎಂದು ಸಿನಿಮಾದಲ್ಲಿ ತನ್ನ ಪಾತ್ರದ ಬಗ್ಗೆ ಮಾತನಾಡುತ್ತಾ, ದೀಪಿಕಾ ಪಡುಕೋಣೆ ಹೇಳಿದ್ದಾರೆ.
ನಟ ನಿಶಾಂತ್ ದಹಿಯಾ ಅವರನ್ನು ರೋಜರ್ ಬಿನ್ನಿಆಗಿ ಕಾಣಬಹುದು.
ಕಪಿಲ್ ದೇವ್ ಮಾತ್ರವಲ್ಲದೆ ಅವರ ಮಗಳು ಅಮಿಯಾ ಕೂಡ '83' ಚಿತ್ರದ ಭಾಗವಾಗಿದ್ದಾರೆ. ಅಮಿಯಾ ಈ ಚಿತ್ರದ ಮೂಲಕ ನಿರ್ದೇಶಕರಾಗಿ ಪಾದಾರ್ಪಣೆ ಮಾಡುತ್ತಿದ್ದಾರೆ. ರಣವೀರ್ ಸಿಂಗ್ ಅಭಿನಯದ ಈ ಸಿನಿಮಾದ
ಸಹಾಯಕ ನಿರ್ದೇಶಕ ಅಮಿಯಾ ದೇವ್ ಆಗಿದ್ದಾರೆ. ಆಮಿಯಾ ತನ್ನ ಅಧ್ಯಯನದ ಕಾರಣದಿಂದ ಲೈಮ್‌ಲೈಟ್‌ನಿಂದ ದೂರ ಉಳಿಯುತ್ತಿದ್ದರು.
ಪಿಆರ್ ಮಾನ್ಸಿಂಗ್ ಪಾತ್ರದಲ್ಲಿ ನಟ ಪಂಕಜ್ ತ್ರಿಪಾಠಿಕಾಣಿಸಿಕೊಳ್ಳಲಿದ್ದಾರೆ.
ಈ ಚಿತ್ರವನ್ನು ಲಂಡನ್‌ನ ಲಾರ್ಡ್ಸ್ ಕ್ರಿಕೆಟ್ ಸ್ಟೇಡಿಯಂನಲ್ಲಿ 5 ದಿನಗಳ ಕಾಲ ಚಿತ್ರೀಕರಿಸಲಾಗಿದೆ. ರಣವೀರ್ ಈ ಹಿಂದೆ ಸೂರ್ಯವಂಶಿ ಚಿತ್ರದಲ್ಲಿ ಕಾಣಿಸಿಕೊಂಡಿದ್ದರು ಹಾಗೂ ಈ ನಟ ಶೀಘ್ರದಲ್ಲೇ ಜಯೇಶ್‌ಭಾಯ್ ಜೋರ್ದಾರ್ ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ.