ಪತಿ ಜೊತೆ ಲಂಚ್‌ ಡೇಟ್‌ನಲ್ಲಿ ಸಖತ್‌ ಸ್ಟೈಲಿಶ್ ಲುಕ್‌ನಲ್ಲಿ Rani Mukherji

First Published | Mar 22, 2022, 5:22 PM IST

ಬಾಲಿವುಡ್‌ ನಟಿ ರಾಣಿ ಮುಖರ್ಜಿಯವರು (Rani Mukherji)  ಮಾರ್ಚ್ 21 ರಂದು ತಮ್ಮ  44 ನೇ ವರ್ಷದ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದಾರೆ. ಈ ಸಂದರ್ಭದಲ್ಲಿ, ಅವರು ತಮ್ಮ ಪತಿ ಆದಿತ್ಯ ಚೋಪ್ರಾ (Aditya Chopra)  ಅವರೊಂದಿಗೆ ಲಂಚ್‌ ಡೇಟ್‌ನಲ್ಲಿ ಕಾಣಿಸಿಕೊಂಡರು. ಈ ಸಂದರ್ಭದಲ್ಲಿ, ಕೆಲವು ಅಭಿಮಾನಿಗಳು ರಾಣಿಯನ್ನು ಸುತ್ತುವರೆದರು ಮತ್ತು ಅವರೊಂದಿಗೆ ಸೆಲ್ಫಿ ಕ್ಲಿಕ್ಕಿಸಿದರು. ಅಂದಹಾಗೆ, ರಾಣಿಯ ಹೊರತಾಗಿ, ಮುಂಬೈನ ವಿವಿಧ ಸ್ಥಳಗಳಲ್ಲಿ ಅನೇಕ ಸೆಲೆಬ್ರೆಟಿಗಳು ಕಾಣಿಸಿಕೊಂಡರು. ಯಾವ ಸೆಲೆಬ್ರಿಟಿಗಳು ಎಲ್ಲಿ ಕಾಣಿಸಿಕೊಂಡಿದ್ದಾರೆ ನೋಡಿ.

ಹುಟ್ಟುಹಬ್ಬದ ಸಂದರ್ಭದಲ್ಲಿ ರಾಣಿ ಮುಖರ್ಜಿ ತುಂಬಾ ಸ್ಟೈಲಿಶ್ ಲುಕ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಅವರು ಡೆಮಿನ್‌ನ ಪ್ರಿಂಟೆಡ್ ಶಾರ್ಟ್ ಫ್ರಾಕ್ ಅನ್ನು ಧರಿಸಿದ್ದರು ಮತ್ತು  ಅವಳ ಕೂದಲು ಕಟ್ಟದೆ ಹಾಗೇ ಬಿಟ್ಟಿದ್ದರು ಮತ್ತು ಕೆಂಪು ಲಿಪ್ಸ್ಟಿಕ್ ಧರಿಸಿದ್ದರು.

ರಾಣಿ ಮುಖರ್ಜಿ ಅವರ ಪತಿ ಆದಿತ್ಯ ಚೋಪ್ರಾ ಕ್ಯಾಮೆರಾ ಎದುರಿಸಲು ಇಷ್ಟಪಡುವುದಿಲ್ಲ. ಆದರೂ ಕ್ಯಾಮರಾ ಕಣ್ಣಿಗೆ ಸಿಕ್ಕಿಬಿದ್ದಿದ್ದಾರೆ. ಇಬ್ಬರೂ ಐಸ್ ಕ್ರೀಂ ತಿನ್ನುತ್ತಿರುವುದು ಫೋಟೋದಲ್ಲಿ ಕಾಣಬಹುದು. ಈ ಸಮಯದಲ್ಲಿ ನಟಿ ಫ್ಯಾನ್ಸ್‌ ಜೊತೆ ಸೆಲ್ಫಿಗೆ ಪೋಸ್‌ ನೀಡಿದ್ದಾರೆ

Tap to resize

ಆಲಿಯಾ ಭಟ್ ಮತ್ತು ರಣಬೀರ್ ಕಪೂರ್ ವಿಮಾನ ನಿಲ್ದಾಣದಲ್ಲಿ ಕಾಣಿಸಿಕೊಂಡರು. ಈ ಸಮಯದಲ್ಲಿ, ಆಲಿಯಾ ಬಿಳಿ ಟಿ-ಶರ್ಟ್ ಮತ್ತು ಜೀನ್ಸ್ ಧರಿಸಿದ್ದರು. ಅದೇ ಸಮಯದಲ್ಲಿ, ರಣಬೀರ್ ಬಿಳಿ ಟಿ-ಶರ್ಟ್ ಮತ್ತು ಕಪ್ಪು ಪ್ಯಾಂಟ್‌ನಲ್ಲಿ ಕಾಣಿಸಿಕೊಂಡರು.

ಅಜಯ್ ದೇವಗನ್ ಅಭಿನಯದ ರನ್ವೇ 34 ಚಿತ್ರದ ಟ್ರೈಲರ್ ಸೋಮವಾರ ಬಿಡುಗಡೆಯಾಗಿದೆ. ಈ ಸಂದರ್ಭದಲ್ಲಿ ಮುಂಬೈನಲ್ಲಿ ದೊಡ್ಡ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಈ ಸಂದರ್ಭದಲ್ಲಿ, ಅಜಯ್ ತನ್ನ ಸಹ-ನಟಿ ರಾಕುಲ್ ಪ್ರೀತ್ ಸಿಂಗ್ ಅವರೊಂದಿಗೆ ಪೋಸ್ ನೀಡುತ್ತಿರುವುದು ಕಂಡುಬಂದಿದೆ. 

ರನ್‌ವೇ 34 ಚಿತ್ರದ ಟ್ರೇಲರ್ ಬಿಡುಗಡೆ ಸಮಾರಂಭದಲ್ಲಿ ಅಜಯ್ ದೇವಗನ್ ತಮ್ಮ ಇತರ ಸಹ-ನಟರೊಂದಿಗೆ ಕಾಣಿಸಿಕೊಂಡರು. ಇಬ್ಬರೂ ಸೇರಿ ಕ್ಯಾಮರಾಮನ್ ಗೆ ಪೋಸ್ ಕೊಟ್ಟರು.

ವಿಮಾನ ನಿಲ್ದಾಣದಲ್ಲಿ ಕಾಣಿಸಿಕೊಂಡ ಮೀರಾ ರಾಜ್‌ಪುರ್ ಮಗಳು ಮಿಶಾಳ ಕೈ ಹಿಡಿದಿದ್ದರೆ, ಶಾಹಿದ್ ಕಪೂರ್ ಮಗ ಜೈನ್‌ನ ಕೈ ಹಿಡಿದಿದ್ದರು. ಹೊರಬಿದ್ದಿರುವ ಫೋಟೋಗಳನ್ನು ನೋಡಿದರೆ ಇಡೀ ಕುಟುಂಬ  ರಜೆಯನ್ನು ಎಂಜಾಯ್ ಮಾಡಲು ಹೊರಟಿರುವಂತಿದೆ.

ಡಿಸೈನರ್ ಮನೀಶ್ ಮಲ್ಹೋತ್ರಾ ಅವರ ಶಾಪ್‌  ಹೊರಗೆ ಹಿರಿಯ ನಟಿ ನೀತು ಸಿಂಗ್ ಕಾಣಿಸಿಕೊಂಡರು. ಅವರನ್ನು ಇಲ್ಲಿ ನೋಡಿದ ಜನರು , ಶೀಘ್ರದಲ್ಲೇ ಅವರ ಮಗ ರಣಬೀರ್ ಕಪೂರ್ ವರನಾಗಲಿದ್ದಾರೆ ಎಂದು ಗೆಸ್‌ ಮಾಡುತ್ತಿದ್ದಾರೆ

ಮಾರ್ಚ್ 25 ರಂದು ಬಿಡುಗಡೆಯಾಗುತ್ತಿರುವ ಬಹುನಿರೀಕ್ಷಿತ ಚಿತ್ರ RRR ನ ಸ್ಟಾರ್‌ಕಾಸ್ಟ್ ಈ ದಿನಗಳಲ್ಲಿ ಪ್ರಚಾರದಲ್ಲಿ ನಿರತರಾಗಿದ್ದಾರೆ. ಚಿತ್ರದ ಸ್ಟಾರ್‌ಕಾಸ್ಟ್ ಪ್ರಚಾರಕ್ಕೆ ಸಂಬಂಧಿಸಿದಂತೆ ಗೋಲ್ಡನ್ ಟೆಂಪಲ್ ತಲುಪಿದೆ.

Latest Videos

click me!