ಕರೀನಾ ಕಪೂರ್ ತಮ್ಮ ತಂದೆ ರಣಧೀರ್ ಕಪೂರ್ ಅವರಿಗೆ ಹುಟ್ಟು ಹಬ್ಬದ ಶುಭಾಶಯ ಕೋರಿದ್ದಾರೆ. ಅವರು ತಂದೆ ತಾಯಿ ಫೋಟೋವನ್ನು ಹಂಚಿಕೊಂಡು, 'ವಿಶ್ವದ ಅತ್ಯುತ್ತಮ ವ್ಯಕ್ತಿಗೆ ಜನ್ಮ ದಿನದ ಶುಭಾಶಯಗಳು. ಅಪ್ಪಾ... ನನ್ನ ತಂದೆ, ನನ್ನ ಪ್ರೀತಿಯ ತಂದೆ, ಸಾಮು, ಕಿಯು, ಟಿಮ್ ಟಿಮ್ ಮತ್ತು ಜೆಹ್ ಬಾಬಾ ಪರವಾಗಿ ಶುಭಾಶಯಗಳು'.
ರಣಧೀರ್ ಮತ್ತು ಬಬಿತಾ ತಮ್ಮ ಮೊದಲ ಸಿನಿಮಾ ಕಲ್ ಆಜ್ ಔರ್ ಕಲ್‌ನಲ್ಲಿ ಒಟ್ಟಿಗೆ ಮಾಡಿದರು. ಮೊದಲ ಚಿತ್ರದಿಂದಲೇ ಇಬ್ಬರೂ ಪರಸ್ಪರ ಪ್ರೀತಿಸುತ್ತಿದ್ದರು. ರಣಧೀರ್ ಪಂಜಾಬಿ ಮತ್ತು ಬಬಿತಾ ಸಿಂಧಿ ಕುಟುಂಬದವರು. ಇವರಿಬ್ಬರೂ ಸಂಸಾರದಲ್ಲಿ ಮದುವೆ ವಿಚಾರವಾಗಿ ಮಾತನಾಡಿದಾಗ ಎಲ್ಲರೂ ಅವರ ವಿರುದ್ಧ ತಿರುಗಿಬಿದ್ದರು.
ಕಪೂರ್ ಕುಟುಂಬದ ಹುಡುಗಿಯರು ಆ ಸಮಯದಲ್ಲಿ ಚಲನಚಿತ್ರಗಳಲ್ಲಿ ಕೆಲಸ ಮಾಡುತ್ತಿರಲಿಲ್ಲ ಅಥವಾ ಕುಟುಂಬದ ಸದಸ್ಯರು ನಟಿಯನ್ನು ಮದುವೆಯಾಗಿರಲಿಲ್ಲ. ಬಬಿತಾ ಅವರ ಆಜ್ಞೆಯ ಮೇರೆಗೆ ರಣಧೀರ್ ತಂದೆ ರಾಜ್ ಕಪೂರ್ ಅವರೊಂದಿಗಿನ ಸಂಬಂಧದ ಬಗ್ಗೆ ಮಾತನಾಡಿದರು. ಬಬಿತಾರನ್ನು ತನ್ನ ಮನೆಯ ಸೊಸೆಯಾಗಿಸಲು ರಾಜ್ ಕಪೂರ್ ತಯಾರಿರಲಿಲ್ಲ.
ಮನೆಯವರು ವಿರೋಧಿಸಿದರೂ ರಣಧೀರ್ ಮತ್ತು ಬಬಿತಾ ನಡುವೆ ಪ್ರೀತಿ ಬೆಳೆಯುತ್ತಲೇ ಇತ್ತು. ಮದುವೆಯಾಗಲು, ರಣಧೀರ್ ಬಬಿತಾರಿಗೆ ಚಲನಚಿತ್ರ ವೃತ್ತಿ ಜೀವನವನ್ನು ತೊರೆಯಬೇಕು ಎಂದು ಷರತ್ತು ವಿಧಿಸಿದರು.ಪ್ರೀತಿಗಾಗಿ ಬಬಿತಾ ಸಿನಿಮಾಗಳಿಂದ ದೂರವಾದರು. ಇಬ್ಬರೂ 1971ರಲ್ಲಿ ವಿವಾಹವಾದರು.
ರಣಧೀರ್ ಮತ್ತು ಬಬಿತಾ ಅವರ ಮದುವೆಯಲ್ಲಿ ಕುಟುಂಬ ಮತ್ತು ಆಪ್ತರು ಮಾತ್ರ ಭಾಗವಹಿಸಿದ್ದರು. ಮದುವೆಯ ನಂತರ ರಣಧೀರ್ ಮತ್ತು ಬಬಿತಾ ಪ್ರತ್ಯೇಕ ಫ್ಲಾಟ್‌ನಲ್ಲಿ ವಾಸಿಸಲು ಪ್ರಾರಂಭಿಸಿದರು. ಕರಿಷ್ಮಾ 1974 ರಲ್ಲಿ ಮತ್ತು ಕರೀನಾ 1980 ರಲ್ಲಿ ಜನಿಸಿದರು. ಮದುವೆಯ ನಂತರ ಬಬಿತಾ ತನ್ನ ಚಲನಚಿತ್ರ ವೃತ್ತಿ ಜೀವನವನ್ನು ತೊರೆದರು ಆದರೆ ಅವರು ತಮ್ಮ ಹೆಣ್ಣು ಮಕ್ಕಳನ್ನು ನಟಿಯರನ್ನಾಗಿಸಲು ಬಯಸಿದ್ದರು.
ಸ್ವಲ್ಪ ಸಮಯದ ನಂತರ, ಬಬಿತಾ ಮತ್ತು ರಣಧೀರ್ ನಡುವೆ ಟೆನ್ಷನ್ ಹೆಚ್ಚಾಗ ತೊಡಗಿತು.ರಣಧೀರ್ ಯಾವುದೇ ಕೆಲಸ ಮಾಡದ ಕಾರಣ ಬಬಿತಾ ಬೇಸರಗೊಂಡಿದ್ದರು. ನಂತರ ಬಬಿತಾ ಕಪೂರ್ ಕುಟುಂಬವನ್ನು ತೊರೆದು ಪ್ರತ್ಯೇಕವಾಗಿ ವಾಸಿಸುವ ಸಮಯ ಬಂದಿತು. ಬಬಿತಾ ತನ್ನ ಪುತ್ರಿಯರಾದ ಕರಿಷ್ಮಾ ಮತ್ತು ಕರೀನಾ ಅವರ ವೃತ್ತಿ ಜೀವನದ ಮೇಲೆ ಕೇಂದ್ರೀಕರಿಸಿದರು. ಕಪೂರ್ ಕುಟುಂಬದ ವಿರೋಧದ ನಡುವೆಯೂ ಅವರು ಚಿತ್ರರಂಗದಲ್ಲಿ ಕೆಲಸ ಮಾಡಲು ಪ್ರಾರಂಭಿಸಿದರು.
ಹಲವು ವರ್ಷಗಳಿಂದ ರಣಧೀರ್ ಮತ್ತು ಬಬಿತಾ ಪ್ರತ್ಯೇಕವಾಗಿ ವಾಸಿಸುತ್ತಿದ್ದಾರೆ. ಆದರೆ, ಇನ್ನೂ ವಿಚ್ಛೇದನ (Divorce) ಪಡೆದಿಲ್ಲ. ಇಬ್ಬರೂ ಕಪೂರ್ ಕುಟುಂಬಕ್ಕೆ ಸಂಬಂಧಿಸಿದ ಪ್ರತಿಯೊಂದು ಸಮಾರಂಭ, ಆಚರಣೆಗಳಲ್ಲಿ ಸಂತೋಷದಿಂದ ಭಾಗಿಯಾಗುತ್ತಾರೆ ಮತ್ತು ಭೇಟಿಯಾಗುತ್ತಾರೆ
ರಣಧೀರ್ ಮತ್ತು ಬಬಿತಾ ಅವರ ಪುತ್ರಿಯರಿಬ್ಬರಿಗೂ ವಿವಾಹವಾಗಿದೆ. ಕರಿಷ್ಮಾ ಸಂಜಯ್ ಕಪೂರ್ ಅವರನ್ನು ಮದುವೆಯಾಗಿದ್ದರು ಆದರೆ ಇಬ್ಬರೂ ವಿಚ್ಛೇದನ ಪಡೆದರು. ಕರಿಷ್ಮಾಗೆ ಅದಾರ ಮತ್ತು ಕಿಯಾನ್ ಎಂಬ ಇಬ್ಬರು
ಮಕ್ಕಳಿದ್ದಾರೆ. ಅದೇ ಸಮಯದಲ್ಲಿ ಕರೀನಾ ಸೈಫ್ ಅಲಿ ಖಾನ್ ಅವರನ್ನು ವಿವಾಹವಾದರು. ಇವರಿಗೆ ಇಬ್ಬರು ಗಂಡು ಮಕ್ಕಳಿವೆ.
ರಣಧೀರ್ ಕಪೂರ್ ರಿಕ್ಷಾವಾಲಾ, ಹಾಥ್ ಕಿ ಸಫಾಯಿ, ದಿಲ್ ದೀವಾನಾ, ಲಫಾಂಗೆ, ಧರಮ್ ಕರಮ್, ಆಜ್ ಕಾ ಮಹಾತ್ಮ, ಚಾಚಾ ಭತೀಜಾ, ಕಸ್ಮೆ ವಾಡೆ, ಹೀರಾಲಾಲ್ ಪನ್ನಾಲಾಲ್, ಬಿವಿ ಓ ಬೀವಿ, ಜಾನೆ ಕೊ ದಿಕ್ನಾ ಹೈ, ಹೌಸ್‌ಫುಲ್, ಸೂಪರ್ ನಾನಿ ಮುಂತಾದ ಚಿತ್ರಗಳಲ್ಲಿ ಕೆಲಸ ಮಾಡಿದ್ದಾರೆ.