ಫಸ್ಟ್ ಟೈಂ ಆಲಿಯಾಳನ್ನ ಭೇಟಿಯಾಗಿದ್ದಾಗ ಆಕೆಗೆ 9 ವರ್ಷ, ನನಗೆ...? ಏಜ್ ಗ್ಯಾಪ್‌ಗೆ ರಣ್‌ಬೀರ್ ಮಾತು

Published : Jul 30, 2024, 07:12 PM ISTUpdated : Jul 30, 2024, 07:14 PM IST

ರಣ್‌ಬೀರ್ ಕಪೂರ್ ಮತ್ತು ಆಲಿಯಾ ಭಟ್ ಬಾಲಿವುಡ್ ಕ್ಯೂಟ್ ಕಪಲ್ ಅಂತಾನೇ ಫೇಮ್. ರಣ್‌ಬೀರ್ ಕಪೂರ್ ಮೊದಲ ಬಾರಿ ಆಲಿಯಾ ಭಟ್ ಭೇಟಿಯಾಗಿರುವ ಬಗ್ಗೆ ಮಾತನಾಡಿದ್ದಾರೆ.

PREV
17
ಫಸ್ಟ್ ಟೈಂ ಆಲಿಯಾಳನ್ನ ಭೇಟಿಯಾಗಿದ್ದಾಗ ಆಕೆಗೆ 9 ವರ್ಷ, ನನಗೆ...? ಏಜ್ ಗ್ಯಾಪ್‌ಗೆ ರಣ್‌ಬೀರ್ ಮಾತು

ಮುದ್ದಿನ ಮಗಳ ಪೋಷಕರಾಗಿರುವ ರಣ್‌ಬೀರ್ ಮತ್ತು ಆಲಿಯಾ ಕುಟುಂಬದ ಜವಾಬ್ದಾರಿ ಜೊತೆ ಸಿನಿಮಾಗಳಲ್ಲಿಯೂ ಬ್ಯೂಸಿಯಾಗಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಮಗಳ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿವೆ.

27

ಮದುವೆಯಾದ ನಂತರ  ರಣ್‌ಬೀರ್ ಕಪೂರ್ ಮೊದಲ ಬಾರಿ ಆಲಿಯಾ ಭಟ್ ಭೇಟಿಯಾಗಿದ್ದು ಯಾವಾಗ? ಆಗ ತಮ್ಮಿಬ್ಬರ ವಯಸ್ಸು ಏನಾಗಿತ್ತು ಎಂಬ ವಿಷಯವನ್ನು ಅಭಿಮಾನಿಗಳ ಜೊತೆ ಹಂಚಿಕೊಂಡಿದ್ದಾರೆ.

37

ರಣ್‌ಬೀರ್ ಕಪೂರ್ ಮೊದಲ ಬಾರಿಗೆ ಭೇಟಿಯಾಗಿದ್ದಾಗ ಆಲಿಯಾಗೆ 9 ವರ್ಷ, ನನಗೆ 20 ವರ್ಷ ಆಗಿತ್ತು. ಮಡದಿ ಆಲಿಯಾ ಭಟ್ ನನಗಿಂತ 11 ವರ್ಷ ಚಿಕ್ಕವಳು ಎಂದು ಹೇಳಿಕೊಂಡಿದ್ದಾರೆ. ಇದರ ಜೊತೆ ಮತ್ತೊಂದು ವಿಷಯವನ್ನು ಸಹ ಶೇರ್ ಮಾಡಿಕೊಂಡಿದ್ದಾರೆ.

47
Ranbir Kapoor, Alia Bhatt

ಆಲಿಯಾ ಭಟ್ 9 ವರ್ಷದ ಬಾಲಕಿಯಾಗಿದ್ದಾಗಲೇ ರಣ್‌ಬೀರ್ ಜೊತೆ ಫೋಟೋಶೂಟ್ ಸಹ ಮಾಡಿಸಿದ್ದರು. ನಿರ್ದೇಶಕ ಸಂಜಯ್ ಲೀಲಾ ಬನ್ಸಾಲಿ ಬಾಲ್ಯ ವಿವಾಹದ ಕುರಿತು ಚಿತ್ರ ಮಾಡುತ್ತಿದ್ದರು. ಆ ಚಿತ್ರಕ್ಕಾಗಿ ನಮ್ಮಿಬ್ಬರ ಫೋಟೋಶೂಟ್ ನಡೆದಿತ್ತು ಎಂದು ಹೇಳಿದ್ದಾರೆ.

57

ಇತ್ತೀಚೆಗೆ ಮದುವೆಯಾದ ನಂತರ ಜೀವನ ಹೇಗೆ ಬದಲಾಯ್ತು ಎಂಬುದರ ಬಗ್ಗೆ ಮಾತನಾಡಿದ್ದರು. ಆಲಿಯಾ ಮತ್ತು ನಾನು ಒಬ್ಬರಿಗೊಬ್ಬರು ಹೊಂದಿಕೊಳ್ಳುತ್ತಿದ್ದೇವೆ. ಇದರಿಂದ ನಾವು ಒಟ್ಟಿಗೆ ಬದುಕುವ ಸಾಮರ್ಥ್ಯ ಹೊಂದಿದ್ದೇವೆ ಎಂದಿದ್ದರು.

67

ಮಡದಿ ಆಲಿಯಾ ಭಟ್ ವೃತ್ತಿ ಹಾಗೂ ಖಾಸಗಿ ಜೀವನವನ್ನು ತುಂಬಾ ಚೆನ್ನಾಗಿ ನಿಭಾಯಿಸುತ್ತಾಳೆ. ಮಗಳು ಬಂದ ಬಳಿಕ ನನ್ನ ಇಡೀ ಜೀವನವೇ ಬದಲಾಗಿ ಹೋಯಿತು ಎಂದು ರಣ್‌ಬೀರ್ ಹೇಳಿದ್ದಾರೆ.

77

ನಾನು ಈಗ ಮಗಳ ಅಪ್ಪ.  ಅದು ನನ್ನ ಜೀವನದ ಗೇಮ್ ಚೇಂಜರ್ ಪಾಯಿಂಟ್. ನಾನು ಈಗಷ್ಟೇ ಜನಿಸಿದ್ದೇನೆ ಎಂದು ಭಾಸವಾಗುತ್ತಿದೆ. ನಾನು ಮತ್ತೆ ಹುಟ್ಟಿದ್ದೇನೆ.

Read more Photos on
click me!

Recommended Stories