ಬ್ಯಾಕ್ ಲೆಸ್ ಬ್ಲೌಸ್ ಧರಿಸಿ ಕಣ್ಣೋಟದಲ್ಲೇ ಹುಡುಗರ ಎದೆಗೆ ಗುರಿ ಇಟ್ಟ ಕೀರ್ತಿ ಸುರೇಶ್

First Published | Jul 29, 2024, 5:20 PM IST

ಮಹಾನಟಿ ಖ್ಯಾತಿಯ ಸೌತ್ ಇಂಡಿಯಾದ ಸೂಪರ್ ಸ್ಟಾರ್ ನಟಿ ಕೀರ್ತಿ ಸುರೇಶ್ ಇದೀಗ ಬ್ಯಾಕ್ ಲೆಸ್ ಬ್ಲೌಸ್ ನಲ್ಲಿ ಸಖತ್ ಬೋಲ್ಡ್ ಆಗಿ ಕಾಣಿಸಿಕೊಂಡಿದ್ದಾರೆ. 
 

ತಮ್ಮ ಮುಗ್ಧ ನಗು ಮತ್ತು ಅದ್ಭುತ ನಟನೆಯಿಂದ ದಕ್ಷಿಣ ಭಾರತದ ಚಿತ್ರರಂಗದಲ್ಲಿ ಗುರುತಿಸಿಕೊಂಡು, ಸದ್ಯ ಬಾಲಿವುಡ್ ನಲ್ಲೂ ಮಿಂಚುತ್ತಿರುವ ಮಹಾನಟಿ ಖ್ಯಾತಿಯ ನಟಿ ಕೀರ್ತಿ ಸುರೇಶ್ (Keerthy Suresh). 
 

ಮಹಾನಟಿ  (Mahanati) ಚಿತ್ರದಲ್ಲಿನ ಅದ್ಭುತ ಅಭಿನಯಕ್ಕಾಗಿ ನಟಿ ಕೀರ್ತಿ ಸುರೇಶ್ ರಾಷ್ಟ್ರಪ್ರಶಸ್ತಿ ಪಡೆದಿದ್ದರು. ಕಡಿಮೆ ಸಮಯದಲ್ಲಿ ಸ್ಟಾರ್ ಹಿರೋಯಿನ್ ಆಗಿ ಮೆರೆದ ಕೀರ್ತಿ ಟಾಪ್ ನಟರೊಂದಿಗೆ ತೆರೆ ಹಂಚಿಕೊಂಡಿದ್ದಾರೆ. 
 

Tap to resize

ಇಲ್ಲಿವರೆಗೆ ಯಾವುದೇ ಹಸಿಬಿಸಿ ದೃಶ್ಯಗಳಲ್ಲಿ, ಕಿಸ್ಸಿಂಗ್ ಸೀನ್ ಗಳಲ್ಲಿ ಕೀರ್ತಿ ನಟಿಸಿಯೇ ಇಲ್ಲ. ಇಲ್ಲಿವರೆಗೆ ಸ್ಟಾರ್ ಹಿರೋಯಿನ್ ಆಗಲು ನಟನೆ ಮತ್ತು ಲುಕ್ ಸಾಕು ಅಂತಾನೆ ಹೇಳ್ತಿದ್ದ ನಟಿ ಈವಾಗ ಮಾತ್ರ ಉಲ್ಟಾ ಹೊಡೆದಿದ್ದಾರಂತೆ. 
 

ಸದ್ಯಕ್ಕೆ ಕೀರ್ತಿ ಸುರೇಶ್ ಅವರ ಯಾವ ಸಿನಿಮಾವೂ ಬಂದಿಲ್ಲ. ಆದರೆ ನಟಿಯ ಕೈಯಲ್ಲಿ ಆರಕ್ಕೂ ಹೆಚ್ಚು ಚಿತ್ರಗಳು ಇವೆ ಎನ್ನಲಾಗುತ್ತಿದ್ದು, ಸಿನಿರಂಗದ ಅತ್ಯಂತ ಬ್ಯುಸಿಯಾದ ನಟಿ ಇವರು, ಹಿಂದಿಯಲ್ಲಿ ವರುಣ್ ಧವನ್ (Barun Dhawan) ಜೊತೆಗೂ ಇವರು ನಟಿಸುತ್ತಿದ್ದಾರೆ. 
 

ಇಲ್ಲಿವರೆಗೆ ಲಿಪ್ ಲಾಕ್ ಸೀನ್ ಗಳಿಗೆ (lip lock scene)ನೋ ಅಂತಿದ್ದ ಕೀರ್ತಿ ಸುರೇಶ್ ಇದೀಗ ವರುಣ್ ಧವನ್ ಜೊತೆಗಿನ ಬೇಬಿ ಜಾನ್ ಚಿತ್ರಕ್ಕಾಗಿ ರೂಲ್ಸ್ ಬ್ರೇಕ್ ಮಾಡಿದ್ದು, ಇಬ್ಬರ ಲಿಪ್ ಲಾಕ್ ಸೀನ್ ಗಳಿವೆ ಎನ್ನಲಾಗುತ್ತಿವೆ. ಅಲ್ಲದೇ ಈ ಸಿನಿಮಾದಲ್ಲಿ ನಟಿ ತುಂಬಾನೆ ಬೋಲ್ಡ್ ಆಗಿಯೂ ಕಾಣಿಸಿಕೊಂಡಿದ್ದಾರೆ. 
 

ಇದೀಗ ನಟಿ ಕೀರ್ತಿ ಸುರೇಶ್ ತಮ್ಮ ಸೋಶಿಯಲ್ ಮೀಡಿಯಾದಲ್ಲಿ ತಾವು ಸೀರೆಯುಟ್ಟಿರುವ ಒಂದಷ್ಟು ಫೋಟೋಗಳನ್ನು ಶೇರ್ ಮಾಡಿದ್ದು, ಬ್ಯಾಕ್ ಲೆಸ್ ಬ್ಲೌಸ್ ಧರಿಸಿ, ಕೆಂಪು ಗುಲಾಬಿ ಹೂವು ಧರಿಸಿ, ಪ್ಲೋರಲ್ ಡಿಸೈನ್ ಸೀರೆಯಲ್ಲಿ ಸಖತ್ ಬೋಲ್ಡ್ ಆಗಿ ಕಾಣಿಸಿಕೊಂಡಿದ್ದಾರೆ. 
 

ಕೀರ್ತಿ ಸುರೇಶ್ ತಾವು ನಟಿಸಿರುವ ರಘುತಾತ ಸಿನಿಮಾದ ಪ್ರೊಮೋಷ್ನ್ ಫೋಟೋಗಳನ್ನು ಶೇರ್ ಮಾಡಿದ್ದು ಹಾಟ್ ಆಂಡ್ ಸ್ವೀಟ್ (Hot and sweet ) ಎಂದು ಬರೆದುಕೊಂಡಿದ್ದಾರೆ. ನಟಿಯ ಬೋಲ್ಡ್ ಲುಕ್ ನೋಡಿ ಅಭಿಮಾನಿಗಳು ವಾರೆ ವಾ ಎಂದು ಹೇಳುತ್ತಿದ್ದಾರೆ. 
 

Latest Videos

click me!