ರಣಬೀರ್ ಕಪೂರ್ ತಂದೆಯಾದ ಈ ಹೊತ್ತಲ್ಲಿ ಅವರ 3 ಮಾಜಿ ಗೆಳತಿಯರು ಪ್ರತಿಕ್ರಿಯಿಸಿದ್ದು ಹೀಗೆ
First Published | Nov 7, 2022, 4:52 PM ISTಬಾಲಿವುಡ್ ನಟ ರಣಬೀರ್ ಕಪೂರ್ (Ranbir Kapoor) ತಂದೆಯಾಗಿದ್ದಾರೆ. ಅವರ ಪತ್ನಿ ಹಾಗೂ ನಟಿ ಆಲಿಯಾ ಭಟ್ (Alia Bhatt) ಮುಂಬೈನ ಹೆಚ್ ಎನ್ ರಿಲಯನ್ಸ್ ಆಸ್ಪತ್ರೆಯಲ್ಲಿ ಭಾನುವಾರ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ರಣಬೀರ್ ಮತ್ತು ಆಲಿಯಾ ಪೋಷಕರಾದ ನಂತರ, ಅವರ ಅಭಿಮಾನಿಗಳು ಅವರನ್ನು ಅಭಿನಂದಿಸಿದ್ದಾರೆ. ಚಿತ್ರರಂಗಕ್ಕೆ ಸಂಬಂಧಿಸಿದ ಅವರ ಸಹೋದ್ಯೋಗಿಗಳು ಸಹ ಅವರನ್ನು ಸಾಮಾಜಿಕ ಮಾಧ್ಯಮಗಳ ಮೂಲಕ ಅಭಿನಂದಿಸಿದ್ದಾರೆ. ಇವರಲ್ಲಿ ರಣಬೀರ್ ಕಪೂರ್ ಅವರ ಮೂವರು ಮಾಜಿ ಗೆಳತಿಯರಾದ ದೀಪಿಕಾ ಪಡುಕೋಣೆ (Deepika Padukone), ಕತ್ರಿನಾ ಕೈಫ್ (Katrina Kaif) ಮತ್ತು ಸೋನಮ್ ಕಪೂರ್ (Sonam Kapoor) ಸೇರಿದ್ದಾರೆ. ಆಲಿಯಾ ಅವರ ಪೋಸ್ಟ್‌ಗೆ ಮೂವರೂ ಹೀಗೆ ಪ್ರತಿಕ್ರಿಯಿಸಿದ್ದಾರೆ.