'ಈ ಗುಣ ನನ್ನಿಂದ ನನ್ನ ಮಕ್ಕಳಿಗೆ ತಾನಾಗಿಯೇ ಬಂದಿದೆ'; ಟ್ವಿನ್ಸ್ ಜೊತೆ ಕರಣ್ ಜೋಹರ್ ಟ್ವಿನ್ನಿಂಗ್..

Published : Feb 11, 2024, 01:47 PM ISTUpdated : Feb 11, 2024, 01:49 PM IST

ಬಾಲಿವುಡ್‌ನ ಜನಪ್ರಿಯ ನಿರ್ದೇಶಕ ಕರಣ್ ಜೋಹರ್ ಕಳೆದ ವಾರ ತಮ್ಮ ಅವಳಿ ಮಕ್ಕಳಾದ ಯಶ್ ಹಾಗೂ ರೂಹಿಯ ಬರ್ತ್‌ಡೇಯನ್ನು ಪರ್ಪಲ್ ಥೀಮ್‌ನೊಂದಿಗೆ ಆಚರಿಸಿದರು. ಈ ಸಂದರ್ಭದಲ್ಲಿ ಅದರ ಸುಂದರ ಫೋಟೋಗಳನ್ನು ಹಂಚಿಕೊಳ್ಳುವ ಜೊತೆಗೆ ಬಲೂನ್‌ ಬಗ್ಗೆ ತಮಗಿರುವ ವಿಶೇಷ ಪ್ರೀತಿಯನ್ನು ಹಂಚಿಕೊಂಡಿದ್ದಾರೆ.

PREV
19
'ಈ ಗುಣ ನನ್ನಿಂದ ನನ್ನ ಮಕ್ಕಳಿಗೆ ತಾನಾಗಿಯೇ ಬಂದಿದೆ'; ಟ್ವಿನ್ಸ್ ಜೊತೆ ಕರಣ್ ಜೋಹರ್ ಟ್ವಿನ್ನಿಂಗ್..

ಬಾಲಿವುಡ್‌ನ ಜನಪ್ರಿಯ ನಿರ್ದೇಶಕ ಕರಣ್ ಜೋಹರ್ ಕಳೆದ ವಾರ ತಮ್ಮ ಅವಳಿ ಮಕ್ಕಳಾದ ಯಶ್ ಹಾಗೂ ರೂಹಿಯ ಬರ್ತ್‌ಡೇಯನ್ನು ಪರ್ಪಲ್ ಥೀಮ್‌ನೊಂದಿಗೆ ಆಚರಿಸಿದರು. ಈ ಸಂದರ್ಭದಲ್ಲಿ ಅದರ ಸುಂದರ ಫೋಟೋಗಳನ್ನು ಹಂಚಿಕೊಳ್ಳುವ ಜೊತೆಗೆ ಬಲೂನ್‌ ಬಗ್ಗೆ ತಮಗಿರುವ ವಿಶೇಷ ಪ್ರೀತಿಯನ್ನು ಹಂಚಿಕೊಂಡಿದ್ದಾರೆ.

29

ತಮ್ಮ ಇಬ್ಬರು ಮಕ್ಕಳು ಹಾಗೂ 81 ವರ್ಷದ ತಾಯಿಯ ಜೊತೆಗೆ, ನೇರಳೆ ಬಲೂನ್‌ಗಳ ಜೊತೆ ನಿಂತಿರುವ ಫೋಟೋಗಳನ್ನು ಕರಣ್ ಹಂಚಿಕೊಂಡಿದ್ದಾರೆ.

39

ಬ್ಯಾಕ್‌ಗ್ರೌಂಡ್ ಬಗ್ಗೆ ವಿವರಿಸಿರುವ ಅವರು, 'ಬಲೂನ್‌ಗಳ ಕಲ್ಪನೆಯು ನನಗೆ ಅಲಂಕಾರಕ್ಕಿಂತ ಹೆಚ್ಚಾಗಿರುತ್ತದೆ. ಅವು ಯಾವಾಗಲೂ ಸಂತೋಷ ಮತ್ತು ಆಚರಣೆಯನ್ನು ಪ್ರತಿನಿಧಿಸುತ್ತವೆ ಮತ್ತು ಸಂತೋಷದ ಮಾಂತ್ರಿಕ ಭಾವನೆಯನ್ನು ತರುತ್ತವೆ' ಎಂದಿದ್ದಾರೆ.

49

'ನಾನು ತೆಗೆದ ಮೊದಲ ಚಿತ್ರ- ಕುಚ್ ಕುಚ್ ಹೋತಾ ಹೈ- ಬಹಳಷ್ಟು ಬಲೂನ್‌ಗಳಿಂದ ತುಂಬಿದೆ. ಈಗಲೂ ಬಲೂನ್‌ಗಳು ನನ್ನ ಹತ್ತಿರ ಇರುವಾಗ ನನ್ನ ಒಳಗಿನ ಮಗು ಜೀವಂತವಾಗುತ್ತದೆ '

59

'ನನ್ನ ಅವಳಿಗಳಿಗೆ ನನ್ನ ಬಲೂನ್‌ಗಳ ಸಂತೋಷವನ್ನು ರವಾನಿಸಿದ್ದಕ್ಕಾಗಿ ತುಂಬಾ ಸಂತೋಷವಾಗಿದೆ.. ಅವರು ಕೂಡಾ ನನ್ನಂತೆಯೇ ಬಲೂನ್ ನೋಡಲು ಅತಿಯಾಗಿ ಪ್ರತಿಕ್ರಿಯಿಸುತ್ತಾರೆ ' ಎಂದು ನಿರ್ದೇಶಕ ಹೇಳಿದ್ದಾರೆ.

69

ಸಿಂಗಲ್ ಪೇರೆಂಟ್ ಆಗಿರುವ ಕರಣ್, 2017ರಲ್ಲಿ ಯಶ್ ಹಾಗೂ ರೂಹಿಯನ್ನು ಬಾಡಿಗೆ ತಾಯಿಯ ಮುಖಾಂತರ ಪಡೆದಿದ್ದರು. ಅವರು ತಮ್ಮ ಮಕ್ಕಳು ಹಾಗೂ ತಾಯಿಯ ಬಗ್ಗೆ ಸದಾ ಬರೆಯುತ್ತಲೇ ಇರುತ್ತಾರೆ.

79

ಈ ಹಿಂದೊಮ್ಮೆ ಮಕ್ಕಳ ಬಗ್ಗೆ ಬರೆವಾಗ, ಹಿಂದೆಲ್ಲ ವ್ಯಾಲೆಂಟೈನ್ಸ್ ಡೇ ಎಂದರೆ ಒಂಟಿ ಎಂದು ಬೇಜಾರಾಗುತ್ತಿತ್ತು. ಆದರೆ, ಯಶ್ ಮತ್ತು ರೂಹಿ ಜೀವನಕ್ಕೆ ಕಾಲಿಟ್ಟ ದಿನದಿಂದ ವ್ಯಾಲೆಂಟೈನ್ಸ್ ಡೇ ಎಂದರೆ ತಂದೆ ಮಕ್ಕಳ ಆಚರಣೆಯಾಗಿದೆ. ಇವರಿಬ್ಬರ ಆಗಮನದ ಬಳಿಕ ನನ್ನ ಪ್ರೀತಿಯ ಹುಡುಕಾಟ ಅಂತ್ಯವಾಯಿತು ಎಂದಿದ್ದರು. 

89

ತಂದೆಯ ಪ್ರೇಮಕಥೆಯು ಅತ್ಯಂತ ತೃಪ್ತಿದಾಯಕ, ಬೇಷರತ್ತಾದ ಮತ್ತು ಅಸಾಧಾರಣವಾಗಿ ಲಾಭದಾಯಕ ವಿಷಯವಾಗಿದೆ ಎನ್ನುವ ಕರಣ್, ಸಾಮಾನ್ಯವಾಗಿ ಮಕ್ಕಳ ಉಡುಗೆಯೊಂದಿಗೆ ತಮ್ಮ ಬಟ್ಟೆಯನ್ನೂ ಮ್ಯಾಚ್ ಮಾಡಿ ಧರಿಸುತ್ತಾರೆ.

99

ಇನ್ನು ಮಕ್ಕಳನ್ನು ಬೆಳೆಸುವಲ್ಲಿ ತಮ್ಮ ತಾಯಿಯ ಪಾಲು ದೊಡ್ಡದು ಎಂಬುದನ್ನು ಹೇಳುವ ಕರಣ್, ಸದಾ ತಾಯಿಯ ಬಗ್ಗೆ ತಮ್ಮ ಅವಿರತ ಪ್ರೇಮವನ್ನು ವ್ಯಕ್ತಪಡಿಸುತ್ತಲೇ ಇರುತ್ತಾರೆ. 

Read more Photos on
click me!

Recommended Stories