ಸ್ವಯಂ ಘೋಷಿತ ವಿಮರ್ಶಕ ಜೊತೆಗೆ ಈಗ ಜ್ಯೋತಿಷಿ ಆಗಿರುವ ಕಮಲ್ ಆರ್ ಖಾನ್ ಮತ್ತೆ ಸುದ್ದಿಯಲ್ಲಿದ್ದಾರೆ. ಆಲಿಯಾ ಭಟ್ ಮತ್ತು ರಣಬೀರ್ ಕಪೂರ್ ಅವರ ವಿಚ್ಛೇದನದ ಬಗ್ಗೆ ಭವಿಷ್ಯ ನುಡಿದು ಟ್ರೋಲ್‌ಗೆ ಗುರಿಯಾಗಿದ್ದಾರೆ. ಸಲ್ಮಾನ್ ಖಾನ್, ಪ್ರಿಯಾಂಕಾ ಚೋಪ್ರಾ, ನಿಕ್ ಜೊನಸ್, ಮೈಕಾ ಸಿಂಗ್ ಮುಂತಾದವರ ಬಗ್ಗೆ ವಿವಾದಾತ್ಮಕ ಹೇಳಿಕೆಗಳನ್ನು ನೀಡಿ ಕಳೆದ ತಿಂಗಳಿನಿಂದ ಕಮಲ್ ಆರ್ ಖಾನ್ ನ್ಯೂಸ್‌ನಲ್ಲಿದ್ದಾರೆ. ಈ ಸ್ವಯಂ ಘೋಷಿತ ವಿಮರ್ಶಕ ಕೆಆರ್‌ಕೆ ಅನಗತ್ಯ ವಿಷಯಗಳ ಕಾರಣಗಳಿಗಾಗಿ ಆಗಾಗ ಚರ್ಚೆಯಲ್ಲಿರುತ್ತಾರೆ.