ಪ್ರೆಗ್ನೆನ್ಸಿ ಬೈಬಲ್ ಬರೆದ ಕರೀನಾ: ಬೇಬೋ ವಿರುದ್ಧ ಕೇಸ್

Published : Jul 15, 2021, 10:18 AM IST

ಪ್ರೆಗ್ನೆನ್ಸಿ ಬೈಬಲ್ ಪುಸ್ತಕ ಬರೆದು ಕ್ರಿಶ್ಚಿಯನ್ ಸಮಯದಾಯದ ಕೆಂಗಣ್ಣಿಗೆ ಗುರಿಯಾದ ಬೇಬೋ ಬಾಲಿವುಡ್ ನಟಿ ಕರೀನಾ ಕಪೂರ್ ವಿರುದ್ಧ ಪೊಲೀಸ್ ಕೇಸ್ ದಾಖಲು

PREV
111
ಪ್ರೆಗ್ನೆನ್ಸಿ ಬೈಬಲ್ ಬರೆದ ಕರೀನಾ: ಬೇಬೋ ವಿರುದ್ಧ ಕೇಸ್

ನಟಿ ಕರೀನಾ ಕಪೂರ್ ಬರೆದ ಪುಸ್ತಕದ ಶೀರ್ಷಿಕೆಗೆ ಕ್ರಿಶ್ಚಿಯನ್ ಸಮೂಹ ಆಕ್ಷೇಪ ವ್ಯಕ್ತಪಡಿಸಿದೆ

211

ಸಮುದಾಯದ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದಿದೆ ಎಂದು ಆರೋಪಿಸಿ ಕರೀನಾ ಮತ್ತು ಇತರ ಇಬ್ಬರು ವಿರುದ್ಧ ಬುಧವಾರ ಮಹಾರಾಷ್ಟ್ರದ ಬೀಡ್ ನಗರದಲ್ಲಿ ಪೊಲೀಸ್ ದೂರು ದಾಖಲಿಸಲಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

311

ಎರಡನೇ ಲೇಖಕನನ್ನು ಹೊಂದಿರುವ ಪುಸ್ತಕದ ಕುರಿತು ಆಲ್ಫಾ ಒಮೆಗಾ ಕ್ರಿಶ್ಚಿಯನ್ ಮಹಾಸಂಗ್ ಅಧ್ಯಕ್ಷ ಆಶಿಶ್ ಶಿಂಧೆ ಬೀಡ್‌ನ ಶಿವಾಜಿ ನಗರ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿದ್ದಾರೆ.

411

ಕರೀನಾ ಕಪೂರ್ ಮತ್ತು ಅದಿತಿ ಶಾ ಭೀಮ್ಜಾನಿ ಬರೆದಿರುವ ಮತ್ತು ಜಗ್ಗರ್‌ನಾಟ್ ಬುಕ್ಸ್ ಪ್ರಕಟಿಸಿದ "ಪ್ರೆಗ್ನೆನ್ಸಿ ಬೈಬಲ್" ಪುಸ್ತಕದ ಶೀರ್ಷಿಕೆಯನ್ನು ಶಿಂಧೆ ಉಲ್ಲೇಖಿಸಿದ್ದಾರೆ.

511

'ಬೈಬಲ್' ಎಂಬ ಪವಿತ್ರ ಪದವನ್ನು ಪುಸ್ತಕದ ಶೀರ್ಷಿಕೆಯಲ್ಲಿ ಬಳಸಲಾಗಿದೆ ಮತ್ತು ಇದು ಕ್ರಿಶ್ಚಿಯನ್ನರ ಧಾರ್ಮಿಕ ಭಾವನೆಗಳನ್ನು ಘಾಸಿಗೊಳಿಸಿದೆ ಎಂದು ಅವರು ಹೇಳಿದ್ದಾರೆ.

611

ನಟಿ ಮತ್ತು ಇತರ ಇಬ್ಬರ ವಿರುದ್ಧ ಐಪಿಸಿ ಸೆಕ್ಷನ್ 295-ಎ (ಉದ್ದೇಶಪೂರ್ವಕ ಮತ್ತು ದುರುದ್ದೇಶಪೂರಿತ ಕೃತ್ಯಗಳು, ಯಾವುದೇ ವರ್ಗದವರ ಧರ್ಮ ಅಥವಾ ಅವಮಾನಕರ ನಂಬಿಕೆಗಳನ್ನು ಅವಮಾನಿಸುವ ಮೂಲಕ ಆಕ್ರೋಶದ ಭಾವನೆಗಳನ್ನು ಕೆರಳಿಸುವ ಉದ್ದೇಶದಿಂದ) ಪ್ರಕರಣವನ್ನು ನೋಂದಾಯಿಸಲು ಶಿಂಧೆ ಕೋರಿದ್ದಾರೆ.

711

ಪೊಲೀಸ್ ಅಧಿಕಾರಿಯೊಬ್ಬರು ದೂರು ಸ್ವೀಕರಿಸಿರುವುದನ್ನು ದೃಢಪಡಿಸಿದ್ದಾರೆ. ಆದರೆ ಯಾವುದೇ ಎಫ್ಐಆರ್ ದಾಖಲಿಸಲಾಗಿಲ್ಲ ಎಂದು ಹೇಳಿದ್ದಾರೆ.

811

ಶಿವಾಜಿ ನಗರ ಪೊಲೀಸ್ ಠಾಣೆಯ ಉಸ್ತುವಾರಿ ಇನ್ಸ್‌ಪೆಕ್ಟರ್ ಸೈನಾಥ್ ಥೋಂಬ್ರೆ "ನಾವು ದೂರು ಸ್ವೀಕರಿಸಿದ್ದೇವೆ ಆದರೆ ಘಟನೆ ಇಲ್ಲಿ (ಬೀಡ್‌ನಲ್ಲಿ) ಸಂಭವಿಸದ ಕಾರಣ ಇಲ್ಲಿ ಯಾವುದೇ ಪ್ರಕರಣವನ್ನು ದಾಖಲಿಸಲಾಗುವುದಿಲ್ಲ. ಮುಂಬೈನಲ್ಲಿ ದೂರು ದಾಖಲಿಸುವಂತೆ ನಾನು ಅವರಿಗೆ ಸಲಹೆ ನೀಡಿದ್ದೇನೆ ಎಂದಿದ್ದಾರೆ.

911

ಕರೀನಾ ತನ್ನ ಪುಸ್ತಕವನ್ನು ಜುಲೈ 9 ರಂದು ಬಿಡುಗಡೆ ಮಾಡಿದರು. ಇದನ್ನು ತನ್ನ ಮೂರನೇ ಮಗು ಎಂದು ಕರೆದ 40 ವರ್ಷದ ನಟಿ, ಈ ವರ್ಷದ ಫೆಬ್ರವರಿಯಲ್ಲಿ ತನ್ನ ಎರಡನೇ ಮಗುವಿಗೆಜನ್ಮ ನೀಡಿದ್ದರು.

1011

ಪುಸ್ತಕವನ್ನು ಸಾಮಾಜಿಕ ಮಾಧ್ಯಮದಲ್ಲಿ ಪ್ರಚಾರ ಮಾಡಲು ಸರಣಿ ಪೋಸ್ಟ್‌ಗಳನ್ನು ಹಂಚಿಕೊಂಡಿದ್ದಾರೆ.

1111

ನಟಿಯ ಪ್ರಕಾರ, ಈ ಪುಸ್ತಕವು ತನ್ನ ಎರಡೂ ಗರ್ಭಧಾರಣೆಯ ಮೂಲಕ ದೈಹಿಕವಾಗಿ ಮತ್ತು ಭಾವನಾತ್ಮಕವಾಗಿ ಅನುಭವಿಸಿದ ವೈಯಕ್ತಿಕ ಅನುಭವಗಳ ಗುಚ್ಛವಾಗಿದೆ.

click me!

Recommended Stories