Ranbir Alia wedding: ಸುಂದರ ಕ್ಷಣಗಳ unseen ಫೋಟೋಗಳು!

First Published | Apr 15, 2022, 3:21 PM IST

ರಣಬೀರ್ ಕಪೂರ್ ಮತ್ತು ಆಲಿಯಾ ಭಟ್ (Ranbir Kapoor Alia Bhatt)  ಗುರುವಾರ, ಖಾಸಗಿ ಸಮಾರಂಭದಲ್ಲಿ ಸಪ್ತಪದಿ ತುಳಿದರು. ಈ ಸಂದರ್ಭದಲ್ಲಿ ಕಪೂರ್ ಮತ್ತು ಭಟ್ ಕುಟುಂಬಗಳನ್ನು ಹೊರತುಪಡಿಸಿ, ವಧುವರರ ವಿಶೇಷ ಸ್ನೇಹಿತರು ಮಾತ್ರ ಉಪಸ್ಥಿತರಿದ್ದರು. ಈ ಜೋಡಿಯ ಮದುವೆಗೆ ಸಂಬಂಧಿಸಿದ ಹಲವು ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತಿವೆ. ಆಲಿಯಾ
ರಣಬೀರ್‌ ಮದುವೆಯ unseen ಫೋಟೋಗಳು ಇಲ್ಲಿವೆ.  

ಆಲಿಯಾ ಭಟ್ ಮತ್ತು ರಣಬೀರ್ ಕಪೂರ್ ಅವರ ವಿವಾಹದಲ್ಲಿ ಕರಣ್ ಜೋಹರ್, ಅಯಾನ್ ಮುಖರ್ಜಿ, ಕರೀನಾ ಕಪೂರ್, ಪೂಜಾ ಭಟ್, ಶಾಹೀನ್ ಭಟ್, ಕರಿಷ್ಮಾ ಕಪೂರ್, ಸೈಫ್ ಅಲಿ ಖಾನ್, ನತಾಶಾ ನಂದಾ,ರೀಮಾ ಜೈನ್, ಆಧಾರ್ ಜೈನ್, ಅರ್ಮಾನ್ ಜೈನ್, ನವ್ಯಾ ನವೇಲಿ ನಂದಾ, ನಿಖಿಲ್ ನಂದಾ, ಕರಣ್ ಕಪೂರ್, ಕುನಾಲ್ ಕಪೂರ್ ಸೇರಿದಂತೆ ಹಲವರು ಭಾಗವಹಿಸಿದ್ದರು.

ಆಲಿಯಾ-ರಣಬೀರ್ ಮದುವೆಯ ಸಂದರ್ಭದಲ್ಲಿ ಕಪೂರ್ ಕುಟುಂಬದ ಒಡಹುಟ್ಟಿದವರು ಒಟ್ಟಿಗೆ ಪೋಸ್ ನೀಡಿದರು. ಇದರಲ್ಲಿ ಕರಿಷ್ಮಾ ಕಪೂರ್, ನತಾಶಾ ನಂದಾ, ನಿಖಿಲ್ ನಂದಾ, ಕರೀನಾ ಕಪೂರ್, ಆಧಾರ್ ಜೈನ್ ಮತ್ತು ಅರ್ಮಾನ್ ಜೈನ್ ಇದ್ದಾರೆ.

Tap to resize

ರಿದಿಮಾ ಸಹಾನಿ ಮತ್ತು ಕರೀನಾ ಕಪೂರ್ ನಡುವೆ ವಿಶೇಷ ಬಾಂಧವ್ಯವಿದೆ. ಈ ವೇಳೆ ಇಬ್ಬರೂ ಜಂಕರ್‌ಗೆ ಪೋಸ್ ನೀಡಿದರು. ಇಬ್ಬರೂ ಒಟ್ಟಿಗೆ ಬಹಳ ಸಂತೋಷದಿಂದ ಕಾಣುತ್ತಿದ್ದರು.

ರಿದಿಮಾ ಸಹಾನಿ ಅವರು ತಮ್ಮ ಅತ್ತಿಗೆ ಅಲಿಯಾ ಭಟ್ ಅವರ ಒಡಹುಟ್ಟಿದವರಾದ ರಾಹುಲ್ ಭಟ್, ಶಾಹೀನ್ ಭಟ್ ಮತ್ತು ಪೂಜಾ ಭಟ್ ಅವರೊಂದಿಗೆ ಪೋಸ್ ನೀಡಿದರು.

ಈ ಸಮಯದಲ್ಲಿ, ವರ ರಣಬೀರ್ ಕಪೂರ್ ತನ್ನ ದೊಡಪ್ಪ ರಣಧೀರ್ ಕಪೂರ್ ಜೊತೆ ಕಾಣಿಸಿಕೊಂಡರು. ರಣಧೀರ್  ಕಪೂರ್‌ ಅವರು ತಮ್ಮ ಸಹೋದರನ ಮಗ ರಣಬೀರ್ ಕಪೂರ್‌ ಜೊತೆ ಪೋಸ್ ನೀಡುವಾಗ ತುಂಬಾ ಸಂತೋಷದಿಂದ ಕಾಣುತ್ತಿದ್ದರು.

ಕರೀನಾ ಮತ್ತು  ಸೈಫ್‌ ಮಕ್ಕಳಾದ ಜೆಹ್‌ ಅಲಿ ಖಾನ್ ಮತ್ತು ತೈಮೂರ್ ಅಲಿ ಖಾನ್ ಸಹ ತಾಯಿಯ ಸೋದರ, ಮಾಮ ರಣಬೀರ್ ಕಪೂರ್ ಅವರ ಮದುವೆಯಲ್ಲಿ ಭಾಗವಹಿಸಿದ್ದರು.  

ರಣಬೀರ್‌ ಕಪೂರ್‌ ತಾಯಿ ನೀತು ಸಿಂಗ್ ತನ್ನ ಮಗಳು ರಿದಿಮಾ ಸಹಾನಿ ಮತ್ತು ಅತ್ತಿಗೆ ರೀಮಾ ಜೈನ್ ಅವರೊಂದಿಗೆ ಕಾಣಿಸಿಕೊಂಡರು. ಎಲ್ಲರೂ  ರಣಬೀರ್‌ ಆಲಿಯಾರ ಮದುವೆಗಾಗಿ ಬಹಳ ಸಮಯದಿಂದ ಕಾಯುತ್ತಿದ್ದರು.

ಕರಿಷ್ಮಾ ಕಪೂರ್ ಮತ್ತು ಕರೀನಾ ಕಪೂರ್  ಸಹೋದರ ರಣಬೀರ್ ಮದುವೆಯ ಸಮಯದಲ್ಲಿ ಕರಣ್ ಜೋಹರ್ ಅವರೊಂದಿಗೆ ಪೋಸ್ ನೀಡಿದ್ದರು. ಮದುವೆಯಲ್ಲಿ ಕಪೂರ್ ಸಹೋದರಿಯರು ಮಿಂಚಿದರು.

Latest Videos

click me!