Kushboo Sundar Daughter Wedding: ರಣಧೀರ ಸಿನಿಮಾ ಮೂಲಕ ದೊಡ್ಡ ಸಂಚಲನವನ್ನೇ ಮೂಡಿಸಿದ್ದ 55ರ ಹರೆಯದ ಖುಷ್ಬೂ ಸುಂದರ್ ಈಗ ಮಗಳ ಮದುವೆ ಖುಷಿಯಲ್ಲಿದ್ದಾರೆ. ಮಗಳ ಮದುವೆಯ ಫೋಟೋಗಳ ಸಮೇತ ಅವರು ಸೋಶಿಯಲ್ ಮೀಡಿಯಾದಲ್ಲಿ ಭಾವುಕ ಪೋಸ್ಟ್ ಹಂಚಿಕೊಂಡಿದ್ದಾರೆ. ಈ ಸುಂದರ ಫೋಟೋಗಳನ್ನು ನೋಡಿ.
ನಟಿ ಖುಷ್ಬೂ ಸುಂದರ್ ಅವರು ಗೋವಾದ ರೆಸಾರ್ಟ್‌ನಲ್ಲಿ ಮಗಳ ಮದುವೆ ಮಾಡಿದ್ದಾರೆ. ನಟ ಚಿರಂಜೀವಿ, ಅನಿಲ್ ಕಪೂರ್, ತ್ರಿಶಾ ಕೃಷ್ಣನ್ ಸೇರಿದಂತೆ ತೆಲುಗು, ತಮಿಳು, ಹಿಂದಿ ಚಿತ್ರರಂಗದ ಗಣ್ಯರು ಭಾಗವಹಿಸಿದ್ದರು.
25
ಮದುವೆ ಸ್ವರ್ಗದಲ್ಲಿ ನಿಶ್ಚಯ ಆಗುತ್ತೆ
“ಈ ಕ್ಷಣದಲ್ಲಿ ನಮ್ಮ ಮನಸ್ಸು ಮಾತುಗಳಿಗೂ ನಿಲುಕದ ಭಾವುಕತೆಯಿಂದ ತುಂಬಿಹೋಗಿದೆ, ನಮ್ಮ ಭಾವನೆಗಳನ್ನು ವ್ಯಕ್ತಪಡಿಸಲು ಪದಗಳೇ ಸಾಲದಾಗಿವೆ. ಪೋಷಕರಾಗಿ, ಕುಟುಂಬವೇ ಯಾವಾಗಲೂ ನಮ್ಮ ಪ್ರಾಣ, ಸರ್ವಸ್ವವಾಗಿದೆ. ಹಾಗೆಯೇ, ‘ಮದುವೆಗಳು ಸ್ವರ್ಗದಲ್ಲಿ ನಿಶ್ಚಯವಾಗುತ್ತವೆ’ ಎಂದು ನಾವು ಬಲವಾಗಿ ನಂಬಿದ್ದೇವೆ” ಎಂದು ಖುಷ್ಬೂ ಸುಂದರ್ ಹೇಳಿಕೊಂಡಿದ್ದಾರೆ.
35
ಮಗಳ ಮದುವೆ ಮಾಡಿದ್ವಿ, ಆನಂದದ ಕಣ್ಣೀರು ಬಂತು
ನಮ್ಮ ಪ್ರೀತಿಯ ಮಗಳಾದ ಕುಮಾರಿ ಆವಂತಿಕಾ ಸುಂದರ್, ಚಿರಂಜೀವಿ ಶ್ರವಣ್ ಶ್ರೀನಿವಾಸನ್ ಅವರ ವಿವಾಹವು 25 ಜೂನ್ 2026 ರಂದು ನೆರವೇರಿದೆ ಎಂಬ ಸಂತೋಷದ ಸುದ್ದಿ ಹಂಚಿಕೊಳ್ಳುತ್ತಿದ್ದೇವೆ. ಕುಟುಂಬದವರು ಹಾಗೂ ಆಪ್ತ ಸ್ನೇಹಿತರ ಪ್ರೀತಿಯ ಸಮ್ಮುಖದಲ್ಲಿ, ನಮ್ಮ ಹೃದಯದಲ್ಲಿ ಎಂದೆಂದಿಗೂ ಹಸಿರಾಗಿ ಉಳಿಯುವ ಆ ಕ್ಷಣಕ್ಕೆ ನಾವು ಸಾಕ್ಷಿಯಾದೆವು. ಆ ಸಮಯದಲ್ಲಿ ನಮಗೆ ಸಿಕ್ಕ ಪ್ರೀತಿ, ಮಮತೆ ಮತ್ತು ಶುಭಹಾರೈಕೆಗಳು ಆ ಸಂದರ್ಭವನ್ನೇ ಒಂದು ಮಾಯಾಲೋಕವನ್ನಾಗಿ ಮಾಡಿದ್ದವು. ಆ ಆನಂದದ ಕಣ್ಣೀರು ಇನ್ನು ನಮ್ಮ ಕಣ್ಣುಗಳಲ್ಲಿ ಹಾಗೇ ಇದೆ, ನಮ್ಮ ಹೃದಯಗಳು ಕೃತಜ್ಞತೆ ಮತ್ತು ಅಪಾರ ಸಂತೋಷದಿಂದ ತುಂಬಿ ತುಳುಕುತ್ತಿವೆ ಎಂದು ಹೇಳಿದ್ದಾರೆ.
ನವದಂಪತಿಗಳು ಬಯಸಿದಂತೆಯೇ, ಇದು ಅತ್ಯಂತ ಸರಳ ಮತ್ತು ಆಪ್ತರಷ್ಟೇ ನೆರೆದಿದ್ದ ಸುಂದರ ಸಮಾರಂಭವಾಗಿತ್ತು. ಅವರ ಈ ಆಸೆಯನ್ನು ಈಡೇರಿಸಿದ್ದು ನಮಗೆ ಹೆಮ್ಮೆಯ ವಿಷಯ. ಕೆಲವು ಅತ್ಯಂತ ಸುಂದರವಾದ ಕ್ಷಣಗಳು ನಮಗೆ ತುಂಬಾ ಮುಖ್ಯವಾದವರ ಜೊತೆ, ಯಾವುದೇ ಅಬ್ಬರವಿಲ್ಲದೆ ಆಚರಿಸಿದಾಗ ಮಾತ್ರ ಹೆಚ್ಚು ಅರ್ಥಪೂರ್ಣವಾಗುತ್ತವೆ ಎಂದು ಖುಷ್ಬೂ ಸುಂದರ್ ಹೇಳಿದ್ದಾರೆ.
55
ಖುಷಿ ಆಯ್ತು
ಆವಂತಿಕಾ ಮತ್ತು ಶ್ರವಣ್ ತಮ್ಮ ಜೀವನದ ಈ ಅದ್ಭುತವಾದ ಹೊಸ ಅಧ್ಯಾಯವನ್ನು ಒಟ್ಟಿಗೆ ಆರಂಭಿಸುತ್ತಿದ್ದಾರೆ. ಅವರಿಬ್ಬರ ಜೀವನವು ಸದಾ ಸಂತೋಷ, ಒಡನಾಟ ಮತ್ತು ಮರೆಯಲಾಗದ ಸವಿನೆನಪುಗಳಿಂದ ತುಂಬಿರಲಿ ಎಂದು ನಿಮ್ಮ ಪ್ರೀತಿ ಹಾಗೂ ಶುಭ ಹಾರೈಕೆಗಳನ್ನು ಮಾತ್ರ ನಾವು ಕೋರುತ್ತೇವೆ. ಅಪಾರ ಪ್ರೀತಿ ಮತ್ತು ಹೆಮ್ಮೆಯೊಂದಿಗೆ, ನಮ್ಮ ನವದಂಪತಿಗಳನ್ನು ನಿಮ್ಮ ಮುಂದೆ ಪರಿಚಯಿಸುತ್ತಿದ್ದೇವೆ ಎಂದು ಅವರು ಹೇಳಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.