ಸೀರೆಯಲ್ಲಿ ಅಪ್ಸರೆಯಂತೆ ಕಂಗೊಳಿಸಿ ರಾಮ್ ಗೋಪಾಲ್ ವರ್ಮಾ ಕೈಗೆ ಸಿಕ್ಕ ಸುಂದರಿಯ ಅವತಾರ ನೋಡಿ!

First Published | Jun 17, 2024, 8:25 PM IST

ರೀಲ್ಸ್ ಮಾಡಿಕೊಂಡು ತನ್ನದೇ ಲೋಕದಲ್ಲಿದ್ದ ಅಪ್ಸರೆ ಶ್ರೀಲಕ್ಷ್ಮಿ ಏಕಾಏಕಿ ರಾಮ್ ಗೋಪಾಲ್ ವರ್ಮಾ ಕಣ್ಣಿಗೆ ಬಿದ್ದಿದ್ದರು. ದಿನಬೆಳಗಾಗುವದರೊಳಗೆ ಸ್ಟಾರ್ ಆಗಿ ಬದಲಾಗಿದ್ದರು. ಸೀರೆಯಲ್ಲಿ ಕಂಗೊಳಿಸುತ್ತಿದ್ದ ಇದೇ ಶ್ರೀಲಕ್ಷ್ಮಿ ರಾಮ್ ಗೋಪಾಲ್ ವರ್ಮಾ ಕೈಗೆ ಸಿಕ್ಕ ಬಳಿಕ ಆಗಿರುವ ಬದಲಾವಣೆ ಇಲ್ಲಿದೆ ನೋಡಿ

ಆರ್‌ಡಿವಿ ಡೆನ್ ನಿರ್ಮಾಣದ ಮೂಲಕ  ನಿರ್ದೇಶ ರಾಮ್ ಗೋಪಾಲ್ ವರ್ಮಾ ಹಲವು ಬಿಕಿನಿ ಸುಂದರಿಯನ್ನು ಪರಿಚಯಿಸಿದ್ದಾರೆ. ಇವರಿಗಾಗಿ ಹಲವು ಚಿತ್ರಗಳನ್ನು ತೆಗೆದಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಬಿಕಿನಿ ಸುಂದರಿಯರ ಜೊತೆಗಿನ ಫೋಟೋ ಹಾಕಿಕೊಂಡು ಭಾರಿ ಸುದ್ದಿಯಾಗಿದ್ದಾರೆ.

ಇದೀಗ ರಾಮ್ ಗೋಪಾಲ್ ವರ್ಮಾ ಅವರ ಮುಂದಿನ ಚಿತ್ರದಲ್ಲಿ ಕಾಣಿಸಿಕೊಂಡಿರುವ ನಾಯಕಿ ಶ್ರೀಲಕ್ಷ್ಮಿ ನೋಡಿ ಜನರು ಹೌಹಾರಿದ್ದಾರೆ. ಕಾರಣ ಈ ನಟಿಯ ಬದಲಾವಣೆ ಎಲ್ಲರನ್ನೂ ಅಚ್ಚರಿಗೊಳಿಸಿದೆ.

Tap to resize

ಕೇರಳದಲ್ಲಿ ರೀಲ್ಸ್ ಮಾಡಿಕೊಂಡಿದ್ದ ಶ್ರೀಲಕ್ಷ್ಮಿ ಸತೀಶ್ ಕೇರಳಿಗರ ಮನದಲ್ಲಿ ಸ್ಥಾನ ಸಂಪಾದಿಸಿದ್ದರು. ಈಕೆಯ ಬಹುತೇಕ ರೀಲ್ಸ್‌ಗಳು ಸೀರೆಯಲ್ಲಿವೆ. ಸೀರೆಯಲ್ಲೇ ಅಪ್ಸರೆಯಂತೆ ಕಂಗೊಳಿಸಿದ್ದಾಳೆ.

ಸೀರೆಯಲ್ಲಿ ಈ ರೀತಿ ರೀಲ್ಸ್ ಮಾಡಿಕೊಂಡಿದ್ದ ಶ್ರೀಲಕ್ಷ್ಮಿ ಸತೀಶ್ ಏಕಾಏಕಿ ರಾಮ್ ಗೋಪಾಲ್ ಕಣ್ಣಿಗೆ ಬಿದ್ದು ರಾತ್ರೋರಾತ್ರಿ ಸ್ಟಾರ್ ಆಗಿದ್ದಾಳೆ. ಸ್ಟಾರ್ ಆದ ಬೆನ್ನಲ್ಲೇ ಆರಾಧ್ಯ ದೇವಿ ಎಂದು ಹೆಸರು ಬದಲಾಯಿಸಿಕೊಂಡಿದ್ದ ಸುಂದರಿ ಇದೀಗ ಸೀರೆ ಮೈಮೇಲೆ ನಿಲ್ಲದಷ್ಟು ಬದಲಾಗಿದ್ದಾರೆ.

ಸ್ಯಾರಿ ಗರ್ಲ್ ಎಂದೇ ಗುರುತಿಸಿಕೊಂಡಿದ್ದ ಆರಾಧ್ಯ ದೇವಿಯ ವಿಡಿಯೋ ತುಣುಕೊಂದನ್ನು ವರ್ಮಾ ಬಿಡುಗಡೆ ಮಾಡಿದ್ದಾರೆ. ಈ ವಿಡಿಯೋದಲ್ಲಿ ಸಖತ್ ಬೋಲ್ಡ್ ಆಗಿ ಕಾಣಿಸಿಕೊಂಡಿದ್ದಾರೆ. 

ಜಲಪಾತದ ಝರಿಯಲ್ಲಿ ಮಿಂದೆದ್ದ ಈ ಸುಂದರಿಯ ವಿಡಿಯೋಗೆ ಹಲವರು ಫಿದಾ ಆಗಿದ್ದಾರೆ. ಮಾದಕ ನೋಟ, ಮೈಮಾಟದಲ್ಲೇ ರಾಮ್ ಗೋಪಾಲ್ ವರ್ಮಾ ಕುತೂಹಲ ಹಿಡಿದಿದ್ದಾರೆ.

ಸಂಪೂರ್ಣ ವಿಡಿಯೋವನ್ನು ಜೂನ್ 18ರಂದು ಬಿಡುಗಡೆ ಮಾಡುವುದಾಗಿ ವರ್ಮಾ ಹೇಳಿದ್ದಾರೆ. ಇದೀಗ ಅಭಿಮಾನಿಗಳ ಕುತೂಹಲ ಹೆಚ್ಚಾಗಿದೆ. ಹಾಟ್ ವಿಡಿಯೋ ತುಣುಕು ಭಾರಿ ವೈರಲ್ ಆಗಿದೆ.

ರಾಮ್ ಗೋಪಾಲ್ ವರ್ಮಾ ಸೀರೆ ಸುಂದರಿಯನ್ನು ಸಿನಿಮಾಗೆ ಆಯ್ಕೆ ಮಾಡಿ ಕೆಲ ಫೋಟೋ ಶೂಟ್ ನಡೆಸಿದ್ದರು. ಇದಕ್ಕೆ ಭಾರಿ ಟೀಕೆಗಳು ಕೇಳಿಬಂದಿತ್ತು. ಆದರೆ ಟೀಕೆಗಳಿಗೆ ನಟಿ ತಿರುಗೇಟು ನೀಡಿದ್ದರು.

Latest Videos

click me!