ಗೃಹಿಣಿಯಂತೆ ಶ್ರೀದೇವಿಯನ್ನು ನೆಡೆಸಿಕೊಂಡಿದ್ದ ಬೋನಿ ಮೇಲೆ RGVಗೆ ಕೋಪ!

Suvarna News   | Asianet News
Published : Oct 03, 2020, 08:17 PM IST

ಬಾಲಿವುಡ್‌ ಸೂಪರ್‌ಸ್ಟಾರ್‌ ಶ್ರೀದೇವಿ ಸಾವು ಎಲ್ಲರಿಗೂ ಶಾಕ್‌ ನೀಡಿತ್ತು. ಅವರ ನಿಧನದ ನಂತರ, ರಾಮ್ ಗೋಪಾಲ್ ವರ್ಮಾ ನಟಿಯ ಪತಿ  ಬೋನಿ ಕಪೂರ್ ಅವರನ್ನು ದ್ವೇಷಿಸುತ್ತಿದ್ದೆ ಎಂದೂ ಹೇಳಿದ್ದರು. ವರ್ಮಾ ಫೇಸ್‌ಬುಕ್ ಪೋಸ್ಟ್‌ನಲ್ಲಿ ಶ್ರೀದೇವಿ ಅವರ ಜೀವನದ ಬಗ್ಗೆ ಕೆಲವು ಆಘಾತಕಾರಿ ವಿಷಯಗಳನ್ನು ಬಹಿರಂಗಪಡಿಸಿದ್ದಾರೆ. 

PREV
112
ಗೃಹಿಣಿಯಂತೆ ಶ್ರೀದೇವಿಯನ್ನು ನೆಡೆಸಿಕೊಂಡಿದ್ದ ಬೋನಿ ಮೇಲೆ RGVಗೆ ಕೋಪ!

ಬಾಲಿವುಡ್‌ ಸೂಪರ್‌ಸ್ಟಾರ್‌ ಶ್ರೀದೇವಿ ನಿಧನದ ನಂತರ ರಾಮ್ ಗೋಪಾಲ್ ವರ್ಮಾರಿಗೆ ತಡೆಯಲಾಗದಷ್ಟು ನೋವಾಗಿತ್ತು. ಅದನ್ನು ವಿಧವಿಧವಾಗಿ ಅಭಿವ್ಯಕ್ತಗೊಳಿಸಿದ್ದರು.

212

ಟ್ವಿಟ್ಟರ್‌ನಲ್ಲಿ ಶ್ರೀದೇವಿಯನ್ನು ಸಾವಿಗೆ ದೇವರನ್ನು ನಿಂದಿಸುವ ಮೂಲಕ ತಮ್ಮ ದುಃಖವನ್ನು ಹಂಚಿಕೊಂಡಿದ್ದರು ರಾಮ್‌ ಗೋಪಾಲ್‌.

312

ರಾಮ್ ಗೋಪಾಲ್ ವರ್ಮಾ ತಮ್ಮ ಇತ್ತೀಚಿನ ಫೇಸ್‌ಬುಕ್ ಪೋಸ್ಟ್‌ನಲ್ಲಿ ಶ್ರೀದೇವಿ ಅವರ ಜೀವನದ ಬಗ್ಗೆ ಕೆಲವು ಆಘಾತಕಾರಿ ಸುದ್ದಿಗಳನ್ನು ಬಹಿರಂಗಪಡಿಸಿದ್ದಾರೆ. 

412

'ಶ್ರೀದೇವಿಯ ಅಭಿಮಾನಿಗಳಿಗೆ ನನ್ನ ಲವ್‌ ಲೆಟರ್‌' ಎಂಬ ಶೀರ್ಷಿಕೆಯ ಪತ್ರದಲ್ಲಿ, ನಟಿ ಅನುಭವಿಸಿದ ತೊಂದರೆಗಳ ಬಗ್ಗೆ ಬೆಳಕು ಚೆಲ್ಲುವ ಸಲುವಾಗಿ ಅವರು ಕೆಲವು ಘಟನೆಗಳನ್ನು ಬಹಿರಂಗ ಪಡಿಸಿದ್ದಾರೆ.

512

ಬೋನಿ ಕಪೂರ್ ವಿರುದ್ಧದ ಕೋಪ ತೋರಿಸಿದ್ದರಲ್ಲದೆ, ವಿವಾದಕ್ಕೆ ಕಾರಣವಾಗುವ ಹೇಳಿಕೆಗಳನ್ನು ನೀಡಲು ಅವರು ಎಂದಿಗೂ ಹಿಂಜರಿಯಲಿಲ್ಲ.

612

ರಾಮ್ ಗೋಪಾಲ್ ವರ್ಮಾರ ಗನ್ಸ್ ಮತ್ತು ತೈಸ್‌ ಎಂಬ ಪುಸ್ತಕದಲ್ಲಿ ಶ್ರೀದೇವಿಯ ಮೇಲಿನ ಪ್ರೀತಿ ಮತ್ತು ಗೌರವಕ್ಕೆ ಅಧ್ಯಾಯಗಳನ್ನು ಮೀಸಲಿಟ್ಟಿದ್ದರು. 

712

 ಶ್ರೀದೇವಿಯನ್ನು ರಾಣಿಯಂತೆ ನಡೆಸಿಕೊಳ್ಳುವ ಬದಲು ಸಾಮಾನ್ಯ ಗೃಹಿಣಿಯಂತೆ ಕೆಲಸ ಮಾಡುವಂತೆ ಮಾಡಿದ್ದಾರೆ ಎಂದು ಆರೋಪಿಸಿ ಬೋನಿಯ ಮೇಲಿನ ಕೋಪವನ್ನು 'ಮೈ ಶ್ರೀದೇವಿ' ಎಂಬ ಚಾಪ್ಟರ್‌ನಲ್ಲಿ ಬಹಿರಂಗಪಡಿಸಿದ್ದಾರೆ. 

812

 'ಅವರ ಸೌಂದರ್ಯ ಮತ್ತು ಸೆಕ್ಸ್‌ ಅಪೀಲ್‌ ತುಂಬಾ ಪವರ್‌ಫುಲ್‌ ಆಗಿತ್ತು, ಅದು ಅನೇಕ ಚಲನಚಿತ್ರಗಳಲ್ಲಿಯೂ ಪ್ರದರ್ಶಿಸಿತವಾಗಿತ್ತು. ಪ್ರೇಕ್ಷಕರು ಮತ್ತು ಉದ್ಯಮವು ಆಕೆಯಲ್ಲಿರುವ ನಟಿಯನ್ನು ಗುರುತಿಸಲು ಹಲವು ವರ್ಷಗಳು ಬೇಕಾಯಿತು. ಶೇಖರ್ ಕಪೂರ್‌ ಅವರ ಮಿಸ್ಟರ್ ಇಂಡಿಯಾದಲ್ಲಿ  ಮೊದಲ ಬಾರಿಗೆ ಆಕೆಯನ್ನು  ಹೆಚ್ಚು  ಪರಿಣಾಮಕಾರಿಯಾಗಿ ಶೋಕೇಸ್‌ ಮಾಡಲಾಯಿತು.

912

...ಅವರ ಚೊಚ್ಚಲ ಚಿತ್ರದಿಂದಲೇ ಅವರ ನಟನಾ ಕೌಶಲ್ಯ ಸ್ಪಷ್ಟವಾಗಿದ್ದರೂ, ಅವರ ಸೂಪರ್ ಸ್ಟಾರ್ಡಮ್ ಸೆಕ್ಸ್‌ ಸಿಂಬಲ್‌ಗೆ ಮಾತ್ರ ಪ್ರಾಮುಖ್ಯತೆ ನೀಡಿತು. ಅದು ತುಂಬಾ ಪ್ರಬಲವಾಗಿತ್ತು, ಆಕೆಯ ಅದ್ಭುತ ಪ್ರತಿಭೆ ಕಾಣದ ಹಾಗೆ ಎಲ್ಲರನ್ನೂ ಕುರುಡಾಗಿಸಿತು'  ಎಂದು ವರ್ಮಾ ಬರೆದಿರುವ ಪುಸ್ತಕದ ಆಯ್ದ ಭಾಗಗಳಲ್ಲಿ ಬರೆಯಲಾಗಿದೆ.

1012

'ನೇರವಾಗಿ ತಮ್ಮ ಸೂಪರ್ ಸ್ಟಾರ್ಡಮ್, ಮ್ಯಾಗಜೀನ್ ಕವರ್, ಬೆಳ್ಳಿ ಪರದೆ ಮೇಲೆ ಬೆರಗುಗೊಳಿಸುವಿಕೆ ಸೌಂದರ್ಯದಿಂದ, ನಾನು ಅವಳನ್ನು ಬೋನಿಯ ಮನೆಯಲ್ಲಿ ಸಾಮಾನ್ಯ ಗೃಹಿಣಿಯಂತೆ ಚಹಾ ಬಡಿಸುತ್ತಿರುವುದನ್ನು ನೋಡಿದೆ. ಆ ದೇವದೂತೆಯನ್ನು ಸ್ವರ್ಗದಿಂದ ಕೆಳಕ್ಕೆ ಇಳಿಸಿದ್ದಕ್ಕಾಗಿ ಬೋನಿ ಕಪೂರ್ ಅವರನ್ನು ನಾನು ದ್ವೇಷಿಸುತ್ತೇನೆ.'

1112

ನಾನು ಬೋನಿಯ ಮನೆಗೆ ಹೋಗುವುದಿಲ್ಲ ಏಕೆಂದರೆ ನಾನು ಶ್ರೀದೇವಿಯನ್ನು ನಿಜವಾದ ದೈನಂದಿನ ಸ್ಥಿತಿಯಲ್ಲಿ ನೋಡಲು ಸಾಧ್ಯವಿಲ್ಲ' ಎಂದು ವರ್ಮಾ ಪುಸ್ತಕದಲ್ಲಿ ಬರೆದಿದ್ದಾರೆ.

1212

ವರ್ಮಾ ಮತ್ತು ಶ್ರೀದೇವಿ ಕ್ಷಣ ಕ್ಷಣಂ ಚಿತ್ರದಲ್ಲಿ ಒಟ್ಟಿಗೆ ಕೆಲಸ ಮಾಡಿದ್ದಾರೆ.'ನಾನು ಶ್ರೀದೇವಿಯನ್ನು ಮೆಚ್ಚಿಸುವ ಏಕೈಕ ಉದ್ದೇಶದಿಂದ ಕ್ಷಣ ಕ್ಷಣಂ ಬರೆದಿದ್ದೇನೆ. ಕ್ಷಣ ಕ್ಷಣಂ ಅವಳಿಗೆ ನನ್ನ ಪ್ರೇಮ ಪತ್ರ' ಎಂದು ಹೇಳಿದ್ದಾರೆ ರಾಮ್‌ ಗೋಪಾಲ್ ವರ್ಮ.

click me!

Recommended Stories