ಫೆಬ್ರವರಿ 24,1999 ರಂದು ಅಜಯ್ ರೆಸಿಡೆನ್ಸ್‌ನಲ್ಲಿ ಮಹಾರಾಷ್ಟ್ರದ ಪದ್ದತಿಯಂತೆ ಅಜಯ್ ದೇವ್‌ಗನ್ ಮತ್ತು ಕಾಜೋಲ್‌ರನ್ನು ಮದುವೆಯಾದರು.
ಬಾಲಿವುಡ್‌ನ ಈ ಫೇಮಸ್ ಜೋಡಿಯ ಪ್ರೀತಿ ಎಲ್ಲರಿಗೂ ಮಾದರಿಯಾಗಿದೆ.
ಇವರಿಬ್ಬರೂ ಸಾರ್ವಜನಿಕವಾಗಿ ಒಟ್ಟಿಗೆಕಾಣಿಸಿಕೊಳ್ಳುವುದು ತುಂಬಾ ಅಪರೂಪವಾದರೂ, ಕಾಜೋಲ್ ಮತ್ತು ಅಜಯ್ ಇಂದಿಗೂ ಬಾಲಿವುಡ್‌ನ ಹೆಚ್ಚು ಬೇಡಿಕೆ ಇರುವ ಜೋಡಿಗಳಲ್ಲೊಂದು.
ಅತ್ಯುತ್ತಮ ನ ಅಷ್ಟೇ ಅದ್ಭುತ ನಿರ್ದೇಶಕ ಮತ್ತು ನಿರ್ಮಾಪಕರಾಗಿದ್ದಾರೆ ಅಜಯ್ ದೇವಗನ್. ಹಾಗೇ ಬೆಸ್ಟ್ ಗಂಡ ಎಂಬುದನ್ನುಅನೇಕ ಸಂದರ್ಭಗಳಲ್ಲಿ ಸಾಬೀತುಪಡಿಸಿದ್ದಾರೆ ಕೂಡ.
ಆದರೆ, ಕಾಜೋಲ್ ದೇವಗನ್ ಅವರ ಮೊದಲ ಪ್ರೇಮವಲ್ಲ ಎಂದು ನಿಮಗೆ ಗೊತ್ತಾ?
ಹೌದು, ಕಾಜೋಲ್‌ಗೂ ಮೊದಲು ದೇವಗನ್ ಇನ್ನೊಬ್ಬ ನಟಿಯೊಂದಿಗೆ ಡೇಟಿಂಗ್ ಮಾಡುತ್ತಿದ್ದ ಬಗ್ಗೆ ಅನೇಕರಿಗೆ ತಿಳಿದಿಲ್ಲ.
ಅಕ್ಷಯ್ ಕುಮಾರ್ ಎಕ್ಸ್ ಗರ್ಲ್‌ಫ್ರೆಂಡ್ ರವೀನಾ ಟಂಡನ್ ಜೊತೆ ಅಜಯ್ ಸಂಬಂಧ ಹೊಂದಿದ್ದರು.
ರವೀನಾಳೊಂದಿಗೆ ಬ್ರೇಕಪ್ ನಂತರ, ಅವರು ಕರಿಷ್ಮಾ ಕಪೂರ್ ಜೊತೆಯೂ ಡೇಟಿಂಗ್ ಮಾಡಿದರು.
ರವೀನಾ ಮತ್ತು ಅಜಯ್ ಅವರ ಸಂಬಂಧ ನಂತರ ಕೆಟ್ಟ ರೂಪ ಪಡೆದುಕೊಂಡಿತ್ತು ಎಂದು ವರದಿಯಾಗಿದೆ. ಒಮ್ಮೆ ಅವರು ಕರಿಷ್ಮಾ ಜೊತೆ ಡೇಟಿಂಗ್ ಮಾಡಲು ಪ್ರಾರಂಭಿಸಿದಾಗ, ರವೀನಾ ಅವರನ್ನು ಕೆಲವು ಚಿತ್ರಗಳಿಂದ ಹೊರಹಾಕುವ ಬೆದರಿಕೆ ಹಾಕಿದ್ದರು.
ಇದು ಈಗ ಕೇವಲ ಪಾಸ್ಟ್ ಅಷ್ಟೇ. ಕಾಜೋಲ್‌ರನ್ನು ಮದುವೆಯಾಗಿರುವ ಅಜಯ್ ತನ್ನ ಕುಟುಂಬದೊಂದಿಗೆ ಸಂತೋಷವಾಗಿದ್ದಾರೆ.