'ಆರ್ಯನ್ ಖಾನ್ ಸೂಪರ್ ಸ್ಟಾರ್ ಮಾಡಿದ NCBಗೆ ಧನ್ಯವಾದ ಹೇಳ್ಬೇಕು'

Published : Oct 15, 2021, 12:46 AM ISTUpdated : Oct 15, 2021, 12:52 AM IST

ಮುಂಬೈ(ಅ. 15)  ಡ್ರಗ್ಸ್ ಪ್ರಕರಣದಲ್ಲಿ ಶಾರುಖ್ (Shah Rukh Khan ) ಪುತ್ರ ಆರ್ಯನ್ ಖಾನ್(Aryan Khan)  ಬಂಧನವಾಗಿದೆ. ಬಾಲಿವುಡ್ (Bollywood) ನಲ್ಲಿ  ಮಾತ್ರವಲ್ಲದೆ ಇಡೀ ಸಿನಿಮಾ ಲೋಕಕ್ಕೆ ಇದು ದೊಡ್ಡ ಸುದ್ದಿ. ಎನ್ ಸಿಬಿ (Narcotics Control Bureau)ಅಧಿಕಾರಿಗಳು ಕಾನೂನಿನ ಪ್ರಕಾರ ಕ್ರಮ ತೆಗೆದುಕೊಂಡಿದ್ದು ಆರ್ಯನ್ ಜೈಲು  ವಾಸದಲ್ಲಿದ್ದಾರೆ. ಆದರೆ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಮಾತ್ರ ಪ್ರಕರಣವನ್ನು ಭಿನ್ನವಾಗಿ ವಿಶ್ಲೇಷಣೆ  ಮಾಡಿದ್ದಾರೆ.

PREV
17
'ಆರ್ಯನ್ ಖಾನ್ ಸೂಪರ್ ಸ್ಟಾರ್ ಮಾಡಿದ NCBಗೆ ಧನ್ಯವಾದ ಹೇಳ್ಬೇಕು'

ಪ್ರಕರಣದಲ್ಲಿ ಆರ್ಯನ್ ಖಾನ್ ಬಂಧಿಸಿರುವ Narcotics Control Bureau ಎನ್ ಸಿಬಿ ಆರ್ಯನ್  ಖಾನ್ ಬಂಧಿಸಿ ಆತನನ್ನು ಸೂಪರ್..ಡೂಪರ್ ಹೀರೋ ಮಾಡಿದೆ ಎಂದಿದ್ದಾರೆ.

ಮದ್ಯದ ನಶೆ ಮಾನಿನಿಯರ ಸಖ್ಯ... ವರ್ಮಾ ಎಂತಾ ನೃತ್ಯ

27

ಟ್ವೀಟ್ ಮಾಡಿರುವ ವರ್ಮಾ ಸುಪರ್ ಸ್ಟಾರ್ ಮಗನೊಬ್ಬನನ್ನು ಅದ್ಭುತವಾಗಿ ಲಾಂಚ್ ಮಾಡಲಾಗಿದೆ ಎಂದು ಹೇಳಿದ್ದು ಯಾವ ಅರ್ಥದಲ್ಲಿ ಮಾತನಾಡಿದ್ದಾರೆ ಎನ್ನುವುದು ಮಾತ್ರ ಗೊತ್ತಾಗುತ್ತಿಲ್ಲ.

37

ಸರಣಿ ಟ್ವೀಟ್ ಗಳನ್ನು ಮಾಡಿರುವ ವರ್ಮಾ ಒಂದಾದ ಮೇಲೆ ಒಂದು ವಿಚಾರ ಹೇಳಿಕೊಂಡು ಹೋಗಿದ್ದಾರೆ.  ಶಾರುಖ್ ಖಾನ್ ಪುತ್ರನಿಗೆ ಎನ್ ಸಿಬಿಯೇ ಸೂಪರ್ ಸ್ಟಾರ್ ಪಟ್ಟ ತಂದುಕೊಟ್ಟಿದೆ ಎನ್ನುವುದು ಸಾರಾಂಶ. 

47

ನಾನು ಬೇಕಾದರೆ ಸವಾಲು ಹಾಕುತ್ತೇನೆ.. ಜೈಲಿನಿಂದ ಹೊರಬಂದ ಆರ್ಯನ್ ಖಾನ್ ನಾನು ಜೀವನದ ಅನೇಕ ಪಾಠಗಳನ್ನು ಜೈಲಿನಲ್ಲಿ ಕಲಿತುಕೊಂಡೆ. ಎನ್ ಸಿಬಿ ಅಧಿಕಾರಿಗಳಿಂದನೂ ಕಲಿತುಕೊಂಡೆ ಎಂದು ಹೇಳದಿದ್ದರೆ ಕೇಳಿ ಎಂದಿದ್ದಾರೆ.

57

ಶಾರುಖ್ ಖಾನ್ ಅವರ ಅಪ್ಪಟ ಅಭಿಮಾನಿಗಳು ಎನ್ ಸಿಬಿಗೆ ಧನ್ಯವಾದ ಹೇಳಬೇಕು. ಸುಪರ್ ಸ್ಟಾರ್ ಒಬ್ಬನ ಮಗನನ್ನು ಸೂಪರ್ ಡೂಪರ್ ಸ್ಟಾರ್ ಮಾಡಿದ ಎನ್ ಸಿಬಿಗೆ ಜೈ ಎನ್ನಬೇಕು ಎಂದಿದ್ದಾರೆ.

67

ಸೋಶಿಯಲ್ ಮೀಡಿಯಾದಲ್ಲಿಯೂ ಈ ಬಗ್ಗೆ ಪ್ರತಿಕ್ರಿಯೆಗಳು ಸಾಲಾಗಿ ಹರಿದು ಬಂದಿವೆ. ತಮ್ಮ ವಿಶಿಷ್ಟ ಚಿತ್ರಗಳಿಂದಲೇ  ಹೆಸರು ಮಾಡಿರುವ ವರ್ಮಾ ವಿವಾದಗಳನ್ನು ಹುಟ್ಟು ಹಾಕುವುದರಲ್ಲಿಯೂ ಎತ್ತಿದ ಕೈ.

77

ಈ ಹಿಂದೆ ನಟಿಮಣಿಯರೊಂದಿಗೆ ಮದ್ಯದ ಅಮಲಿನಲ್ಲಿ ನೃತ್ಯ ಮಾಡಿದ್ದ ವಿಡಿಯೋವನ್ನು ಅವರೇ ಶೇರ್ ಮಾಡಿಕೊಂಡು ನಾನವನಲ್ಲ ಎಂದು ಹೇಳಿದ್ದರು. 

click me!

Recommended Stories