ನಟಿ ಸೌಂದರ್ಯ ಬಗ್ಗೆ ಎಷ್ಟೇ ಹೇಳಿದ್ರೂ, ಏನೇ ಮಾತಾಡಿದ್ರೂ ಇನ್ನೂ ತುಂಬಾ ವಿಷಯಗಳು ಅವ್ರ ಜೀವನದಲ್ಲಿ ಉಳಿದಿರುತ್ತವೆ. ಅವ್ರು ಸಿನಿಮಾ ರಂಗದಲ್ಲಿ ಇದ್ದಿದ್ದು ಬರೀ ಹತ್ತು ವರ್ಷ ಮಾತ್ರ. ಆದ್ರೆ ನಟಿಯಾಗಿ ನೂರು ವರ್ಷ ನೆನಪಿರುವ ಹಾಗೆ ಸೌಂದರ್ಯ ಅವ್ರ ಪ್ರಭಾವ ತೋರಿಸಿದ್ರು. ದುರಾದೃಷ್ಟವಶಾತ್ ಸೌಂದರ್ಯ 2004ರಲ್ಲಿ ಹೆಲಿಕಾಪ್ಟರ್ ಅಪಘಾತದಲ್ಲಿ ತೀರಿಕೊಂಡಿದ್ದು ಗೊತ್ತೇ ಇದೆ. 31 ವರ್ಷದ ಚಿಕ್ಕ ವಯಸ್ಸಿನಲ್ಲೇ ಸೌಂದರ್ಯ ಪ್ರಾಣ ಬಿಟ್ಟರು.
ಸೌಂದರ್ಯ ತಂದೆ ಕೆ.ಎಸ್ ಸತ್ಯನಾರಾಯಣಗೆ ಅವ್ರ ಮಗಳು ಅಂದ್ರೆ ತುಂಬಾ ಇಷ್ಟ. ಸೌಂದರ್ಯ ಸಾವಿನ ಬಗ್ಗೆ ಅವ್ರ ತಂದೆ ಸತ್ಯನಾರಾಯಣ ಮುಂಚೆನೇ ಗೊತ್ತು ಅಂತ ಪ್ರಮುಖ ನಿರ್ಮಾಪಕ ತ್ರಿಪುರನೇನಿ ಚಿಟ್ಟಿಬಾಬು ಹೇಳಿದ್ದಾರೆ. ಸೌಂದರ್ಯ ಇಂಡಸ್ಟ್ರಿಗೆ ಬಂದಾಗಿನಿಂದ ಅವ್ರ ಜೊತೆ, ಅವ್ರ ತಂದೆ ಜೊತೆ ಪರಿಚಯ ಇತ್ತು. ಸೌಂದರ್ಯ ತಂದೆಗೆ ಜ್ಯೋತಿಷ್ಯದ ಮೇಲೆ ನಂಬಿಕೆ ಜಾಸ್ತಿ. ಸೌಂದರ್ಯ ಇಂಡಸ್ಟ್ರಿಗೆ ಬರೋ ಮುಂಚೆನೇ ಅವ್ರ ಜಾತಕನ ಸತ್ಯನಾರಾಯಣ ಜ್ಯೋತಿಷಿಗಳ ಹತ್ರ ತೋರಿಸಿದ್ರಂತೆ. ನಿಮ್ಮ ಮಗಳು ಸಿನಿಮಾ ರಂಗಕ್ಕೆ ಬಂದ್ರೆ ಸೋಲಿಲ್ಲದ ಹೀರೋಯಿನ್ ಆಗ್ತಾರೆ. ರಾಷ್ಟ್ರೀಯ ಮಟ್ಟದಲ್ಲಿ ಅವ್ರಿಗೆ ಗುರುತು ಸಿಗುತ್ತೆ. ಆದ್ರೆ ಅವ್ರು ಇಂಡಸ್ಟ್ರಿಯಲ್ಲಿ ಹತ್ತು ವರ್ಷ ಮಾತ್ರ ಇರ್ತಾರೆ ಅಂತ ಜ್ಯೋತಿಷಿಗಳು ಹೇಳಿದ್ರಂತೆ.
ಹತ್ತು ವರ್ಷದ ನಂತರ ಸೌಂದರ್ಯಗೆ ದೊಡ್ಡ ಗಂಡಾಂತರ ಇದೆ ಅಂತಾನೂ ಹೇಳಿದ್ರು. ಈ ವಿಷಯಗಳನ್ನ ಸತ್ಯನಾರಾಯಣ.. ನಿರ್ಮಾಪಕ ಚಿಟ್ಟಿಬಾಬು ಜೊತೆ ಹಂಚಿಕೊಂಡ್ರಂತೆ. ಆದ್ರೆ ಅವ್ರಿಗೆ ಗಂಡಾಂತರ ಇರೋ ವಿಷಯನ ಮಾತ್ರ ಪರೋಕ್ಷವಾಗಿ ಹೇಳಿದ್ರು. ಹತ್ತು ವರ್ಷದ ನಂತರ ಸೌಂದರ್ಯ ಇಂಡಸ್ಟ್ರಿಗೆ ದೂರ ಆಗ್ತಾರೆ ಅಂತ ಅಂದ್ರಂತೆ. ಅವತ್ತಿಗೆ ಸೌಂದರ್ಯಗೆ ಮದುವೆ ಆಗೋಗಿತ್ತು. ಅದಕ್ಕೆ ಹಂಗೇ ಹೇಳಿದ್ರೇನೋ ಅಂತ ಅಂದ್ಕೊಂಡೆ. ಆದ್ರೆ ಅವ್ರು ತೀರಿಕೊಂಡ ಮೇಲೆ ಅವ್ರು ಹೇಳಿದ ಮಾತುಗಳ ಅರ್ಥ ಗೊತ್ತಾಯ್ತು ಅಂತ ಚಿಟ್ಟಿಬಾಬು ಹೇಳಿದ್ರು.
ಸೌಂದರ್ಯ ಮದುವೆ ಆದ್ಮೇಲೆ ಅವ್ರನ್ನ ಒಂದು ಸಾರಿ ಭೇಟಿ ಮಾಡ್ದೆ. ಅಮ್ಮ ನಿಮ್ಮ ಅಪ್ಪ ಹೇಳಿದ್ ಎಲ್ಲಾನು ನಿಮ್ಮ ಜೀವನದಲ್ಲಿ ನಡೀತಿದೆ. ರಾಷ್ಟ್ರೀಯ ಮಟ್ಟದಲ್ಲಿ ಗುರುತು ಸಿಗುತ್ತೆ ಅಂತ ಹೇಳಿದ್ರು. ಅಮಿತಾಬ್ ಬಚ್ಚನ್, ಚಿರಂಜೀವಿ, ರಜನೀಕಾಂತ್, ಮೋಹನ್ ಲಾಲ್ ಹೀಗೆ ಎಲ್ಲಾ ಭಾಷೆಗಳ ಸ್ಟಾರ್ ಹೀರೋಗಳ ಜೊತೆ ಆಕ್ಟ್ ಮಾಡಿದ್ರಿ. ಇನ್ನೇನಿದ್ರೂ ಒಂದೇ.. ಇಂಡಸ್ಟ್ರಿಗೆ ದೂರ ಇದ್ದು ನಿಮ್ಮ ಫ್ಯಾಮಿಲಿ ಜೊತೆ ಸಮಯ ಕಳೆಯುತ್ತೀರಿ ಅಂತ ಹೇಳಿದ್ರಂತೆ. ಇದಕ್ಕೆ ಸೌಂದರ್ಯ ರಿಯಾಕ್ಟ್ ಆಗ್ತಾ ಅಷ್ಟೊಂದು ಮಾತು ಅಂದ್ರೇನು ಸಾರ್..
ನಮ್ಮ ಅಪ್ಪ ಹೇಳಿದ್ ಎಲ್ಲಾನು ನಡೆದಿದೆ. ಇದೊಂದೇ ತಪ್ಪು ಅಂತ ಪ್ರೂವ್ ಮಾಡ್ತೀನಿ. ಸಾಯೋವರೆಗೂ ಸಿನಿಮಾ ರಂಗದಲ್ಲೇ ಇರ್ತೀನಿ ಅಂತ ಹೇಳಿದ್ರು. ಮೇಲೆ ತಥಾಸ್ತು ದೇವತೆಗಳು ಆಶೀರ್ವಾದ ಮಾಡಿದ್ರೋ ಏನೋ ನಟಿಯಾಗಿ ಇರೋವಾಗಲೇ ಅವ್ರು ತೀರಿಕೊಂಡ್ರು ಅಂತ ಚಿಟ್ಟಿಬಾಬು ಹೇಳಿದ್ರು. 1993ರಲ್ಲಿ ಸೌಂದರ್ಯ ನಟಿಯಾಗಿ ಟಾಲಿವುಡ್ಗೆ ಕಾಲಿಟ್ಟರು. ಸುಮಾರು 100 ಚಿತ್ರಗಳಲ್ಲಿ ಆಕ್ಟ್ ಮಾಡಿದ್ದಾರೆ.