ಧಾರ್ಮಿಕ ತಾರತಮ್ಯ ಅರೋಪ ; ಅಮಲಾ ಪೌಲ್ ದೇವಸ್ಥಾನ ಪ್ರವೇಶಿಸದಂತೆ ತಡೆ
First Published Jan 18, 2023, 3:27 PM ISTದಕ್ಷಿಣ ಭಾರತದ ನಟಿ ಅಮಲಾ ಪೌಲ್ (Amala Paul) ಅವರನ್ನು ಇತ್ತೀಚೆಗೆ ಕೇರಳದ ಎರ್ನಾಕುಲಂನಲ್ಲಿರುವ ತಿರುವರಿಕುಲಂ ಮಹಾದೇವ್ ದೇವಾಲಯಕ್ಕೆ ಪ್ರವೇಶಿಸಲು ಅವಕಾಶ ನೀಡಲಿಲ್ಲವಂತೆ. ದೇವಸ್ಥಾನದ ಆಡಳಿತ ಮಂಡಳಿ ತನ್ನ ವಿರುದ್ಧ ಧಾರ್ಮಿಕ ತಾರತಮ್ಯ ಎಸಗಿದೆ ಎಂದು ಅಮಲಾ ಆರೋಪಿಸಿದ್ದಾರೆ. ಸೋಮವಾರ ನಟಿ ದೇವಸ್ಥಾನಕ್ಕೆ ಬಂದಿದ್ದರು ಎನ್ನಲಾಗಿದೆ. ಅವರ ಮಾತಿನಂತೆ ದೇವಸ್ಥಾನದ ಅಧಿಕಾರಿಗಳು ದರ್ಶನಕ್ಕೆ ತಡೆಯೊಡ್ಡಿದರು. ಅವರನ್ನು ಸಂಪ್ರದಾಯಗಳನ್ನು ಹೇಳಿದರು ಮತ್ತು ದೇವಸ್ಥಾನದೊಳಗೆ ಹಿಂದೂಗಳಿಗೆ ಮಾತ್ರ ಪ್ರವೇಶವಿದೆ ಎಂದು ಹೇಳಲಾಯಿತು. ಅವರ ಪ್ರಕಾರ, ಈ ಪರಿಸ್ಥಿತಿಯಲ್ಲಿ, ದೇವಾಲಯದ ಹೊರಗಿನ ರಸ್ತೆಯಲ್ಲಿ ನಿಂತು ದೇವರ ದರ್ಶನವನ್ನು ಪಡೆಯುವುದನ್ನು ಬಿಟ್ಟು ಬೇರೆ ದಾರಿ ಇಲ್ಲ. ತಮ್ಮ ನೋವನ್ನು ನಟಿ ತೋಡಿಕೊಂಡಿದ್ದಾರೆ.