ಡ್ರಗ್ಸ್ ವಿಚಾರದಲ್ಲಿ ರಾಕುಲ್ ಹೆಸರು: PCI ಸೇರಿ ಪ್ರಮುಖ ಮಾಧ್ಯಮ ಸಂಸ್ಥೆಗಳಿಗೆ ನೋಟಿಸ್

First Published Sep 17, 2020, 5:24 PM IST

ಜೈಲಿನಲ್ಲಿರುವ ಬಾಲಿವುಡ್ ನಟಿ ರಿಯಾ ಚಕ್ರವರ್ತಿ ಡ್ರಗ್ಸ್ ಮಾಫಿಯಾ ಸಂಬಂಧಿಸಿ ನಟಿ ಸಾರಾ ಮತ್ತು ರಾಹುಲ್ ಪ್ರೀತ್ ಸಿಂಗ್ ಹೆಸರು ಹೇಳಿದ್ದಾರೆ ಎಂಬ ಸುದ್ದಿ ಕಳೆದೊಂದು ವಾರದಿಂದ ಓಡಾಡುತ್ತಿದೆ. ಆದರೆ ಈ ಸಂಬಂಧ ಇಬ್ಬರು ನಟಿಯರಿಗೂ ಎನ್‌ಸಿಬಿ ಯಾವುದೇ ನೋಟಿಸ್ ಕೊಟ್ಟಿಲ್ಲ. ಈ ಹಿನ್ನೆಲೆಯಲ್ಲಿ ನಟಿ ರಾಕುಲ್ ಪ್ರೀತ್ ದೆಹಲಿ ಹೈಕೋರ್ಟ್ ಮೆಟ್ಟಿಲೇರಿದ್ದರು.

ಮಾಹಿತಿ ಮತ್ತು ಪ್ರಸರಣಾ ಸಚಿವಾಲಯ, ಪ್ರಸಾರ ಭಾರತಿ, ನ್ಯೂಸ್ ಬ್ರಾಡ್‌ಕಾಸ್ಟರ್ಸ್ ಎಸೋಸಿಯೇಷನ್(NCB), ಪ್ರೆಸ್ ಕೌನ್ಸಿಲ್ ಆಫ್ ಇಂಡಿಯಾ (PCI)ಗೆ ದೆಹಲಿ ಹೈಕೋರ್ಟ್ ನೋಟಿಸ್ ಕಳುಹಿಸಿದೆ.
undefined
ಸುಶಾಂತ್ ಸಿಂಗ್ ರಜಪೂತ್ ಸಾವಿಗೆ ಸಂಬಂಧಿಸಿ ಡ್ರಗ್ಸ್ ತನಿಖೆಯಲ್ಲಿ ತಮ್ಮ ಹೆಸರನ್ನು ಬಳಸಿದ್ದಕ್ಕಾಗಿ ನಟಿ ಕೋರ್ಟ್ ಮೆಟ್ಟಿಲೇರಿದ್ದರು.
undefined
ನಟಿಯ ಅರ್ಜಿ ಪರಿಶೀಲಿಸಿದ ದೆಹಲಿ ಕೋರ್ಟ್ ಪ್ರಮುಖ ಮಾಧ್ಯಮ ಸಂಸ್ಥೆಗಳಿಗೆ ನೋಟಿಸ್ ಕಳುಹಿಸಿದೆ.
undefined
ಸುಶಾಂತ್ ಸಿಂಗ್ ವಿಚಾರ ತನಿಖೆಯಲ್ಲಿ ಎನ್‌ಸಿಬಿ ವಿಚಾರಣೆ ಸಂದರ್ಭ ನಟಿ ರಿಯಾ ಚಕ್ರವರ್ತಿ ರಾಕುಲ್ ಪ್ರೀತ್ ಹೆಸರು ಹೇಳಿದ್ದಾರೆ ಎನ್ನಲಾಗಿತ್ತು.
undefined
ಈ ವಿಚಾರ ಹೊರ ಬೀಳುತ್ತಿದ್ದಂತೆ ರಾಕುಲ್ ಹಾಗೂ ಸಾರಾ ಹೆಸರಿನೊಂದಿಗೆ ಡ್ರಗ್ಸ್ ಬಳಕೆ ವಿಚಾರ ತಳುಕು ಹಾಕಿಕೊಂಡಿತ್ತು.
undefined
ಈ ಬೆಳವಣಿಗೆಗಳ ಮಧ್ಯೆ ನಟಿ ರಾಕುಲ್ ತನ್ನ ವಿರುದ್ಧ ಮಾಧ್ಯಮಗಳು ಆಧಾರರಹಿತ ಆರೋಪ ಮಾಡುತ್ತಿವೆ ಎಂದು ಕೋರ್ಟ್ ಮೊರೆ ಹೋಗಿದ್ದರು.
undefined
ಗುರುವಾರ ನಟಿಯ ಅರ್ಜಿಗೆ ಪ್ರತಿಕ್ರಿಯಿಸಿರುವ ಕೋರ್ಟ್ ನೋಟಿಸ್ ಕಳುಹಿಸಿದೆ.
undefined
ಮಾಹಿತಿ ಮತ್ತು ಪ್ರಸರಣಾ ವಿಭಾಗದ ನಿಯಮಗಳನ್ನು ಉಲ್ಲಂಘಿಸಲಾಗುತ್ತಿದೆ ಎಂದು ನಟಿ ತಿಳಿಸಿದ್ದಾರೆ.
undefined
click me!