ಸೂಪರ್ ಸ್ಟಾರ್ ರಜನಿಕಾಂತ್ ತಮಿಳುನಾಡಿನ ಪ್ರಸಿದ್ಧ ಅಣ್ಣಾಮಲೈಯಾರ್ ದೇವಸ್ಥಾನಕ್ಕೆ ಭೇಟಿ ನೀಡಿದ್ದಾರೆ. ಲಾಲ್ ಸಲಾಮ್ ಚಿತ್ರೀಕರಣದಲ್ಲಿರುವ ರಜನಿಕಾಂತ್ ಬಿಡುವು ಮಾಡಿಕೊಂಡು ಅಣ್ಣಾಮಲೈಯಾರ್ ದೇವಸ್ಥಾನಕ್ಕೆ ಭೇಟಿ ದೇವರ ಆಶೀರ್ವಾದ ಪಡೆದಿದ್ದಾರೆ.
ಸೂಪರ್ ಸ್ಟಾರ್ ರಜನಿಕಾಂತ್ ಸಾಮಾನ್ಯರಂತೆ ದೇವಸ್ಥಾನಕ್ಕೆ ಭೇಟಿ ನೀಡಿದ್ದಾರೆ. ರಜನಿಕಾಂತ್ ಸರಳತೆಗೆ ಅಭಿಮಾನಿಗಳು ಫಿದಾ ಆಗಿದ್ದಾರೆ. ಇಷ್ಟು ದೊಡ್ಡ ಸ್ಟಾರ್ ಆಗಿದ್ದರೂ ಎಲ್ಲವನ್ನೂ ಬದಿಗಿಟ್ಟು ಸಾಮಾನ್ಯರಂತೆ ದೇವರ ದರ್ಶನ ಪಡಿದಿದ್ದಾರೆ.
ಸೂಪರ್‌ಸ್ಟಾರ್ ದೇವಾಲಯಕ್ಕೆ ಭೇಟಿ ನೀಡಿದ ಹಲವಾರು ಫೋಟೋಗಳು ಮತ್ತು ವೀಡಿಯೊಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿವೆ. ಯಾವುದೇ ದುಬಾರಿ ಅಥವಾ ಐಷಾರಾಮಿ ಉಡುಗೆ ಅಥವಾ ಪರಿಕರಗಳಿಲ್ಲದೆ ಸರಳವಾಗಿ ಟೀ ಶರ್ಟ್ ಬಿಳಿ ಪಂಚಿಯಲ್ಲಿ ಸೂಪರ್ ಸ್ಟಾರ್ ಕಾಣಿಸಿಕೊಂಡರು.
ಸೂಪರ್ ಸ್ಟಾರ್ ರಜನಿಕಾಂತ್ ಅವರನ್ನು ನೋಡಲು ಮತ್ತು ಮಾತನಾಡಿಸಲು ಅಭಿಮಾನಿಗಳು ಕಾಯುತ್ತಿರುತ್ತಾರೆ. ಹಾಗಿರುವಾಗಿ ದೇವಸ್ಥಾನಕ್ಕೆ ಹೋದರೆ ಸುಮ್ಮರೆ ಇರುತ್ತಾರಾ. ತಲೈವಾ ನೋಡಲು ಅಭಿಮಾನಿಗಳು ಮುಗಿಬಿದ್ದರು. ರಜನಿಕಾಂತ್ ಸುತ್ತ ಜನ ಸುತ್ತುವವರೆದಿದ್ದರು. ರಜನಿ ಅಭಿಮಾನಿಗಳತ್ತ ನಗು ಬೀರುತ್ತಲೇ ಹೊರಟು ಹೋದರು.
ರಜನಿಕಾಂತ್ ಸದ್ಯ ಮಗಳು ಐಶ್ವರ್ಯ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ಲಾಲ್ ಸಲಾಮ್ ಚಿತ್ರದ ಶೂಟಿಂಗ್‌ನಲ್ಲಿ ಬ್ಯುಸಿಯಾಗಿದ್ದಾರೆ. ಈ ಸಿನಿಮಾದಲ್ಲಿ ಸೂಪರ್ ಸ್ಟಾರ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.
ಜೈಲರ್ ಸಿನಿಮಾ ಕೂಡ ರಜನಿ ಕೈಯಲ್ಲಿದೆ. ಜೈಲರ್ ಸಿನಿಮಾದಲ್ಲಿ ಕನ್ನಡದ ಸ್ಟಾರ್ ಶಿವರಾಜ್ ಕುಮಾರ್ ಕೂಡ ನಟಿಸಿದ್ದಾರೆ. ಈಗಾಗಲೇ ಫಸ್ಟ್ ಲುಕ್ ಮತ್ತು ಟೀಸರ್ ರಿಲೀಸ್ ಆಗಿದ್ದು ನಿರೀಕ್ಷೆ ಹೆಚ್ಚಿಸಿದೆ. ಸೂಪರ್ ಸ್ಟಾರ್ ಜೈಲರ್ ಮೂಲಕ ಅಭಿಮಾನಿಗಳ ಮುಂದೆ ಬರಲು ಸಜ್ಜಾಗಿದ್ದಾರೆ.