ಈ ಸಿನಿಮಾದಲ್ಲಿ ಸ್ಯಾಂಡಲ್‌ವುಡ್‌ನ ನಟ ಶಿವರಾಜ್‌ಕುಮಾರ್ ಕೂಡಾ ಮೊದಲ ಪಾರ್ಟ್ನಂತೆ ಪಾರ್ಟ್-2 ಚಿತ್ರದಲ್ಲೂ ವಿಭಿನ್ನ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. 2026ರ ಜೂನ್ 12ರಂದು ‘ಜೈಲರ್ 2’ ತೆರೆಗೆ ಬರಲಿದೆ.
ಸೂಪರ್‌ಸ್ಟಾರ್ ರಜನಿಕಾಂತ್ ಹಾಗೂ ನೆಲ್ಸನ್ ದಿಲೀಪ್ ಕುಮಾರ್ ಕಾಂಬಿನೇಶನ್‌ನಲ್ಲಿ ಮೂಡಿಬರುತ್ತಿರುವ ‘ಜೈಲರ್ 2’ ಸಿನಿಮಾಕ್ಕೆ ಬಾಲಿವುಡ್ ನಟಿ ವಿದ್ಯಾ ಬಾಲನ್ ಎಂಟ್ರಿ ಕೊಟ್ಟಿದ್ದಾರೆ.
25
ಬೋಲ್ಡ್ ಪಾತ್ರದಲ್ಲಿ ವಿದ್ಯಾ ಬಾಲನ್
ಮೂಲಗಳ ಪ್ರಕಾರ, ಈ ಸಿನಿಮಾದ ಪ್ರಮುಖವಾದ ಬೋಲ್ಡ್ ಪಾತ್ರದಲ್ಲಿ ಅವರು ನಟಿಸುತ್ತಿದ್ದಾರೆ. ಆಕರ್ಷಕ ಪಾತ್ರದ ಬಗ್ಗೆ ನರೇಶನ್ ಕೇಳಿ ಇಷ್ಟವಾಗಿ ಅವರು ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ. ಇತ್ತೀಚೆಗಷ್ಟೇ ಅವರು ಈ ಚಿತ್ರಕ್ಕೆ ಸೈನ್ ಮಾಡಿದ್ದು, ಶೀಘ್ರ ಶೂಟಿಂಗ್‌ನಲ್ಲಿ ಭಾಗಿಯಾಗಲಿದ್ದಾರೆ.
35
ವಿಭಿನ್ನ ಪಾತ್ರದಲ್ಲಿ ಶಿವರಾಜ್‌ಕುಮಾರ್
ಈ ಸಿನಿಮಾದಲ್ಲಿ ಸ್ಯಾಂಡಲ್‌ವುಡ್‌ನ ನಟ ಶಿವರಾಜ್‌ಕುಮಾರ್ ಕೂಡಾ ಮೊದಲ ಪಾರ್ಟ್ನಂತೆ ಪಾರ್ಟ್-2 ಚಿತ್ರದಲ್ಲೂ ವಿಭಿನ್ನ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. 2026ರ ಜೂನ್ 12ರಂದು ‘ಜೈಲರ್ 2’ ತೆರೆಗೆ ಬರಲಿದೆ.
ಸಂತಾನಂ ಇದರಲ್ಲಿ ಹಾಸ್ಯ ಸೇರಿದಂತೆ ಪ್ರಮುಖ ಪಾತ್ರದಲ್ಲಿ ನಟಿಸಲಿದ್ದಾರೆ. ತೆಲುಗು ನಟ ಬಾಲಕೃಷ್ಣ ವಿಶೇಷ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಅಷ್ಟೇ ಅಲ್ಲದೆ, ಬಾಲಿವುಡ್ ನಟ ಶಾರುಖ್ ಖಾನ್, ವಿಜಯ್ ಸೇತುಪತಿ ಕೂಡ ಇದರಲ್ಲಿ ನಟಿಸಬಹುದು ಎನ್ನಲಾಗುತ್ತಿದೆ.
55
ಪಡೆಯಪ್ಪ ಸ್ಟೈಲ್‌ನಲ್ಲಿ ವಿಶೇಷ ವಿಡಿಯೋ ಬಿಡುಗಡೆ
ಇನ್ನು ಸೂಪರ್‌ಸ್ಟಾರ್ ರಜನಿಕಾಂತ್ ಇತ್ತೀಚೆಗಷ್ಟೇ 75ನೇ ವಸಂತಕ್ಕೆ ಕಾಲಿಟ್ಟಿದ್ದರು. ‘ಜೈಲರ್ 2’ ಚಿತ್ರದ ಸೆಟ್‌ನಲ್ಲಿ ಹುಟ್ಟುಹಬ್ಬ ಆಚರಿಸಿಕೊಂಡಿರುವ ರಜನಿಕಾಂತ್ ಅವರ ಹುಟ್ಟುಹಬ್ಬದ ಪ್ರಯುಕ್ತ, ‘ಪಡೆಯಪ್ಪ’ ಸ್ಟೈಲ್‌ನಲ್ಲಿ ವಿಶೇಷ ವಿಡಿಯೋ ಬಿಡುಗಡೆ ಕೂಡ ಮಾಡಲಾಗಿತ್ತು.