SSMB29: ಹೈದರಾಬಾದ್‌ನಲ್ಲಿ ಕಾಶಿ ಸೆಟ್‌ ಹಾಕಿದ ರಾಜಮೌಳಿ: ಮಹೇಶ್ ಬಾಬು ಸಿನಿಮಾ ಕತೆಯೇನು?

Published : Jun 18, 2025, 11:30 AM ISTUpdated : Jun 18, 2025, 11:32 AM IST

ಹೈದರಾಬಾದ್‌ನಲ್ಲಿ ಎಸ್‌ಎಸ್‌ಎಂಬಿ 29 ಸಿನಿಮಾಕ್ಕಾಗಿ ವಾರಣಾಸಿಯನ್ನು ಮರುಸೃಷ್ಟಿ ಮಾಡಲಾಗುತ್ತಿದೆ. ಸುಮಾರು 50 ಕೋಟಿ ವೆಚ್ಚದಲ್ಲಿ ವಾರಣಾಸಿಯ ಬೃಹತ್‌ ಸೆಟ್‌ ನಿರ್ಮಿಸಲಾಗಿದೆ.

PREV
15

ರಾಜಮೌಳಿ ನಿರ್ದೇಶನದ ‘ಎಸ್‌ಎಸ್‌ಎಂಬಿ 29’ ಸಿನಿಮಾದ ಶೂಟಿಂಗ್‌ ಭರದಿಂದ ಸಾಗುತ್ತಿದೆ. ಇನ್ನೊಂದೆಡೆ ಹೈದರಾಬಾದ್‌ನಲ್ಲಿ ಈ ಸಿನಿಮಾಕ್ಕಾಗಿ ವಾರಣಾಸಿಯನ್ನು ಮರುಸೃಷ್ಟಿ ಮಾಡಲಾಗುತ್ತಿದೆ. ಸುಮಾರು 50 ಕೋಟಿ ವೆಚ್ಚದಲ್ಲಿ ವಾರಣಾಸಿಯ ಬೃಹತ್‌ ಸೆಟ್‌ ನಿರ್ಮಿಸಲಾಗಿದೆ.

25

ನೇರ ಕಾಶಿಗೇ ಹೋಗಿ ಶೂಟ್‌ ಮಾಡುವ ಅವಕಾಶವಿದ್ದರೂ ಅದನ್ನು ನಿರಾಕರಿಸಿ ರಾಮೋಜಿರಾವ್‌ ಫಿಲಂ ಸಿಟಿಯಲ್ಲಿ ಕಾಶಿಯ ಸೆಟ್‌ ಹಾಕಲಾಗಿದೆ. ಇದರಲ್ಲಿ ಸಿನಿಮಾದ ಪ್ರಮುಖ ಸಾಹಸ ದೃಶ್ಯಗಳ ಚಿತ್ರೀಕರಣ ನಡೆಸಲು ರಾಜಮೌಳಿ ಯೋಜಿಸಿದ್ದು, ಮಹೇಶ್‌ ಬಾಬು ಪಾಲ್ಗೊಳ್ಳಲಿದ್ದಾರೆ ಎನ್ನಲಾಗಿದೆ.

35

ಇದರ ಜೊತೆಗೆ ಸಿನಿಮಾದಲ್ಲಿ ಅತ್ಯಧಿಕ ವಿಎಫ್‌ಎಕ್ಸ್‌ ವರ್ಕ್‌ಗಳಿದ್ದು, ಈಗಾಗಲೇ ಹಾಲಿವುಡ್‌ನ ವಿಎಫ್‌ಎಕ್ಸ್‌ ಪರಿಣಿತರ ತಂಡ ಈ ಚಿತ್ರಕ್ಕಾಗಿ ಕೆಲಸ ಮಾಡುತ್ತಿದೆ. ಜುಲೈನಲ್ಲಿ ಕೀನ್ಯಾದಲ್ಲಿ ಶೂಟಿಂಗ್‌ ನಡೆಯಲಿದೆ ಎನ್ನಲಾಗಿದ್ದು, ಆ ಬಳಿಕ ಹೈದರಾಬಾದ್‌ನ ಈ ವಾರಣಾಸಿಯ ಸೆಟ್‌ನಲ್ಲಿ ಚಿತ್ರೀಕರಣ ಮುಂದುವರಿಯಲಿದೆಯಂತೆ.

45

ಸುಮಾರು 1000 ಕೋಟಿಗಿಂತ ಜಾಸ್ತಿ ಬಡ್ಜೆಟ್ ನಲ್ಲಿ, ಆಕ್ಷನ್ ಎಂಟರ್ಟೈನರ್ ಆಗಿ ಬರ್ತಿರೋ ಈ ಸಿನಿಮಾದಲ್ಲಿ ಮಹೇಶ್ ಬಾಬು ಜೊತೆ ಹಾಲಿವುಡ್ ಬ್ಯೂಟಿ ಪ್ರಿಯಾಂಕಾ ಚೋಪ್ರಾ ನಟಿಸ್ತಿದ್ದಾರೆ. ಅಮೆಜಾನ್ ಕಾಡುಗಳಿಗೆ ಸಂಬಂಧಪಟ್ಟ ಟ್ರೈಬಲ್ ಸ್ಟೋರಿ ಜೊತೆ ಅಡ್ವೆಂಚರ್ ಮೂವಿ ಆಗಿ ಈ ಸಿನಿಮಾ ಬರ್ತಿದೆ.

55

ರಾಜಮೌಳಿ ಟೀಮ್ ಈ ಸಿನಿಮಾನ 2027ರಲ್ಲಿ ರಿಲೀಸ್ ಮಾಡೋಕೆ ಪ್ಲಾನ್ ಮಾಡ್ತಿದ್ದಾರೆ. ಸ್ಕ್ರೀನ್ ಮೇಲೆ ಮಹೇಶ್ ಬಾಬು ಹೆಂಗ್ ಕಾಣ್ತಾರೋ ನೋಡಬೇಕು. ರಾಜಮೌಳಿ ಮಹೇಶ್ ಬಾಬು ಫುಲ್ ಲುಕ್ಸ್ ಹೊರಗೆ ಬರದಂಗೆ ಅಪ್ಡೇಟ್ಸ್ ಹೆಂಗ್ ಕೊಡ್ತಾರೋ ನೋಡಬೇಕು.

Read more Photos on
click me!

Recommended Stories