Coolie: ಕೊನೆಗೂ ರಿವೀಲ್ ಆಯ್ತು ರಜನಿಕಾಂತ್‌ ಕೂಲಿ ಸಿನಿಮಾದ ವಿಲನ್‌: ಯಾರು ಆ ಸ್ಟಾರ್ ನಟ?

Published : Jun 18, 2025, 11:07 AM ISTUpdated : Jun 18, 2025, 11:10 AM IST

ರಜನಿಕಾಂತ್‌ ಕೂಲಿ ಚಿತ್ರದಲ್ಲಿ ನನ್ನನ್ನು ಬಹಳ ಚೆನ್ನಾಗಿ ತೋರಿಸಿದ್ದಾರೆ ಎಂದು ಹೇಳಿದ್ದಾರೆ. ಅಮೀರ್‌ ಖಾನ್‌, ಉಪೇಂದ್ರ ಕೂಡ ಈ ಸಿನಿಮಾದಲ್ಲಿ ನಟಿಸಿದ್ದಾರೆ.

PREV
17

ರಜನಿಕಾಂತ್‌ ನಟನೆಯ, ಲೋಕೇಶ್‌ ಕನಗರಾಜ್‌ ನಿರ್ದೇಶನದ ‘ಕೂಲಿ’ ಚಿತ್ರದಲ್ಲಿ ತೆಲುಗು ಸೂಪರ್‌ಸ್ಟಾರ್‌ ನಾಗಾರ್ಜುನ ವಿಲನ್‌ ಆಗಿ ನಟಿಸುತ್ತಿದ್ದಾರೆ. ಈ ಸುದ್ದಿಯನ್ನು ಅವರೇ ಖಚಿತಪಡಿಸಿದ್ದಾರೆ.

27

ಈ ಕುರಿತು ಮಾತನಾಡಿರುವ ಅವರು, ಲೋಕೇಶ್‌ ಈ ಸಿನಿಮಾದ ಕತೆ ಹೇಳಿದಾಗ ನನಗೆ ಇಷ್ಟವಾಯಿತು. ಆಮೇಲೆ ನಾನು ನನ್ನ ಪಾತ್ರದ ಮೇಲೆ ಮತ್ತಷ್ಟು ವರ್ಕ್‌ ಮಾಡುವಂತೆ ಹೇಳಿದೆ. ಆ ಸಿನಿಮಾದಲ್ಲಿ ವಿಲನ್‌ ಪಾತ್ರ ಮಾಡಿದ ಅನುಭವ ಹೇಗಿತ್ತು ಎಂದು ಯಾರಾದರೂ ಕೇಳಿದರೆ ನಿರಾಳ ಅನುಭವ ದೊರಕಿತು ಎಂದು ಹೇಳಬಲ್ಲೆ.

37

ಚಿತ್ರದಲ್ಲಿ ನನ್ನನ್ನು ಬಹಳ ಚೆನ್ನಾಗಿ ತೋರಿಸಿದ್ದಾರೆ ಎಂದು ಹೇಳಿದ್ದಾರೆ. ಅಮೀರ್‌ ಖಾನ್‌, ಉಪೇಂದ್ರ ಕೂಡ ಈ ಸಿನಿಮಾದಲ್ಲಿ ನಟಿಸಿದ್ದು, ಈ ಸಿನಿಮಾ ಆಗಸ್ಟ್‌ 14ರಂದು ಬಿಡುಗಡೆಯಾಗಲಿದೆ.

47

‘ಕೂಲಿ’ ಚಿತ್ರದಲ್ಲಿ ನಟಿಸಲು ರಜನಿಕಾಂತ್‌ 150 ಕೋಟಿ ರು. ಸಂಭಾವನೆ ಪಡೆದಿದ್ದಾರೆ ಎಂಬ ಸುದ್ದಿ ಹಬ್ಬಿದೆ. 350 ಕೋಟಿ ರು. ಬಜೆಟ್‌ನಲ್ಲಿ ಹೊರಬರುತ್ತಿರುವ ಈ ಸಿನಿಮಾವನ್ನು ಲೋಕೇಶ್‌ ಕನಗರಾಜು ನಿರ್ದೇಶಿಸಿದ್ದಾರೆ. ಅವರು ಈ ಸಿನಿಮಾಗಾಗಿ 50 ಕೋಟಿ ರು. ಪಡೆದಿದ್ದಾರಂತೆ.

57

ಆದರೆ ಸಿನಿಮಾ ರಿಲೀಸ್‌ಗೆ ಸಾಕಷ್ಟು ದಿನ ಮೊದಲೇ ಡಿಜಿಟಲ್‌ ರೈಟ್ಸ್‌, ಸ್ಯಾಟಲೈಟ್‌, ಮ್ಯೂಸಿಕ್‌ ರೈಟ್ಸ್‌ನಿಂದ 240 ಕೋಟಿಗೂ ಅಧಿಕ ಗಳಿಕೆಯಾಗಿದೆ ಎಂದು ಮೂಲಗಳು ತಿಳಿಸಿವೆ. ಸನ್‌ ಪಿಕ್ಚರ್ಸ್‌ ಈ ಸಿನಿಮಾಕ್ಕೆ ಬಂಡವಾಳ ಹೂಡಿದೆ.

67

ಈ ಸಿನಿಮಾದಲ್ಲಿ ತಲೈವಾ ಜೊತೆ ನಾಗಾರ್ಜುನ ಅಕ್ಕಿನೇನಿ, ರಿಯಲ್ ಸ್ಟಾರ್ ಉಪೇಂದ್ರ, ಶ್ರುತಿ ಹಾಸನ್, ರೆಬಾ, ಪೂಜಾ ಹೆಗ್ಡೆ, ಆಮೀರ್ ಖಾನ್ ಸೇರಿದಂತೆ ಅನೇಕರು ನಟಿಸಿದ್ದಾರೆ. ಈ ಚಿತ್ರವನ್ನು ಸನ್ ಪಿಕ್ಚರ್ಸ್ ನಿರ್ಮಾಣ ಮಾಡಿದೆ. ಈ ಚಿತ್ರ ಆ.14ಕ್ಕೆ ರಿಲೀಸ್‌ಗೆ ಸಿದ್ಧವಾಗಿದೆ.

77

ಬೃಹತ್ ಬಜೆಟ್ ನಲ್ಲಿ ನಿರ್ಮಾಣವಾದ ಈ ಚಿತ್ರದಲ್ಲಿ ರಜನಿಕಾಂತ್ ನಾಯಕನ ಪಾತ್ರಗಳಿಂದ ಹೊರಗುಳಿದು ನೆಗೆಟಿವ್‌ ಶೇಡ್‌ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ ಎನ್ನಲಾಗಿದೆ. ದೇವನ ಪಾತ್ರವು ಚಿತ್ರದ ಪ್ರಮುಖ ಹೈಲೈಟ್ ಗಳಲ್ಲಿ ಒಂದಾಗುವ ನಿರೀಕ್ಷೆಯಿದೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories