ರಾಜಕೀಯ ಭವಿಷ್ಯಕ್ಕಾಗಿ ಈ ನಟಿಯ ಪ್ರೀತಿಯನ್ನೇ ಬಲಿಕೊಟ್ರಾ ರಾಜ್‌ ಠಾಕ್ರೆ?

First Published | Jun 17, 2021, 5:52 PM IST

ಮಹಾರಾಷ್ಟ್ರ ನವ ನಿರ್ಮಾಣ್ ಸೇನಾ (ಎಂಎನ್ಎಸ್) ಮುಖ್ಯಸ್ಥ ರಾಜ್ ಠಾಕ್ರೆ 53ನೇ ವರ್ಷಕ್ಕೆ ಕಾಲಿಟ್ಟಿದ್ದಾರೆ. ಮಹಾರಾಷ್ಟ್ರ ರಾಜಕಾರಣದ ಪ್ರಮುಖ ವ್ಯಕ್ತಿಯಾಗಿ ಗುರುತಿಸಿಕೊಂಡಿರುವ ರಾಜ್ ಠಾಕ್ರೆ ಅವರು ಜೂನ್ 14, 1968 ರಂದು ಬಾಲ್ ಠಾಕ್ರೆಯ ಕಿರಿಯ ಸಹೋದರರಾದ ಶ್ರೀಕಾಂತ್ ಠಾಕ್ರೆ ಅವರ ಮನೆಯಲ್ಲಿ ಜನಿಸಿದರು. ರಾಜ್ ಠಾಕ್ರೆ ಅವರ ರಾಜಕೀಯ ಜೀವನದ ಜೊತೆಗೆ ವೈಯಕ್ತಿಕ ಜೀವನವೂ ಸಾಕಷ್ಟು ಚರ್ಚೆಯಲ್ಲಿತ್ತು.. ಇದು ಉತ್ತರ ಭಾರತೀಯರೊಂದಿಗಿನ ಹಲ್ಲೆ ಪ್ರಕರಣವಾಗಲಿ ಅಥವಾ ಬಾಲಿವುಡ್ ನಟಿ ಸೋನಾಲಿ ಬೆಂದ್ರೆ ಅವರೊಂದಿಗಿನ ಸಂಬಂಧವಾಗಲಿ, ರಾಜ್ ಠಾಕ್ರೆ ಯಾವಾಗಲೂ ಸುದ್ದಿಯಲ್ಲಿ ಇರುತ್ತಿದ್ದರು. ವಿವಾಹಿತ ರಾಜ್ ಠಾಕ್ರೆ ಬಾಲಿವುಡ್‌ ನಟಿ ಸೋನಾಲಿ ಬೆಂದ್ರೆಗೆ ಫುಲ್ ಫಿದಾ ಆಗಿದ್ದರು. ಇಬ್ಬರೂ ಪರಸ್ಪರ ಇಷ್ಟಪಟ್ಟು, ಮದುವೆಯಾಗಲು ನಿರ್ಧರಿಸಿದ್ದರು. ಆದರೆ, ಆಗಿದ್ದೇನು?

ವಿವಾಹಿತ ರಾಜ್ ಠಾಕ್ರೆ ಬಾಲಿವುಡ್‌ ನಟಿ ಸೋನಾಲಿ ಬೆಂದ್ರೆಗೆ ಹೃದಯ ನೀಡಿದ್ದರು. ಇಬ್ಬರೂ ಮದುವೆಯಾಗಲು ಸಹ ಬಯಸಿದ್ದರು.
ಈ ಬಗ್ಗೆ ಶಿವಸೇನೆ ಮುಖ್ಯಸ್ಥ ಬಾಳಾ ಠಾಕ್ರೆಗೆ ತಿಳಿದಾಗ ಮದುವೆಯನ್ನು ಸ್ಪಷ್ಟವಾಗಿ ನಿರಾಕರಿಸಿದ್ದರು. ರಾಜ್ ಠಾಕ್ರೆ ಅವರು ಆಗಲೇ ಒಮ್ಮೆ ಮದುವೆಯಾಗಿದ್ದಸೋನಾಲಿ ಬೆಂದ್ರೆಯನ್ನು ಮದುವೆಯಾದರೆಪಕ್ಷ ಮತ್ತು ಕುಟುಂಬದ ಇಮೇಜ್‌ ಹಾಳಾಗುತ್ತದೆ.ಇದು ಭವಿಷ್ಯಕ್ಕೆ ಒಳ್ಳೆಯದಲ್ಲ, ಖಡಾಖಂಡಿತವಾಗಿ ಹೇಳಿ ಬಿಟ್ಟರು.
Tap to resize

ರಾಜ್ ಠಾಕ್ರೆ ಬಾಳಾ ಠಾಕ್ರೆ ಅವರ ಸಲಹೆಯನ್ನು ಸ್ವೀಕರಿಸಿ, ಮದುವೆಯಿಂದ ಹಿಂದೆ ಸರಿದರು. ವಾಸ್ತವವಾಗಿ, ಬಾಳಾ ಠಾಕ್ರೆ ನಂತರ ಪಕ್ಷವನ್ನು ಮುನ್ನಡೆಸುವ ಹೊಣೆ ತಮಗೆ ಬರುತ್ತದೆಎಂದು ರಾಜ್ ಭಾವಿಸಿದ್ದರು. ಅಂತಹ ಪರಿಸ್ಥಿತಿಯಲ್ಲಿ,ಚಿಕ್ಕಪ್ಪನ ನಿರ್ಧಾರಕ್ಕೆ ವಿರುದ್ಧವಾಗಿ ಹೋಗುವುದು ಸರಿಯಲ್ಲವೆಂದುಕೊಂಡರು. ರಾಜಕೀಯಕ್ಕಾಗಿ ತಮ್ಮ ಪ್ರೀತಿಯನ್ನು ತ್ಯಾಗ ಮಾಡಿದರು. ಆದರೆ, ನಂತರ ಉದ್ಧವ್ ಠಾಕ್ರೆಗೆಶಿವಸೇನೆ ನೇತೃತ್ವ ಸಿಕ್ಕಿತು. ರಾಜ್ ಠಾಕ್ರೆ ತಮ್ಮದೇ ಪಕ್ಷ ಕಟ್ಟಿದರು.
ರಾಜ್ ಠಾಕ್ರೆ ನಂತರ ಮರಾಠಿ ಸಿನಿಮಾದ ಫೋಟೋಗ್ರಾಫರ್‌ ಮತ್ತು ನಿರ್ಮಾಪಕ-ನಿರ್ದೇಶಕ ಮೋಹನ್ ವಾಘ್ ಅವರ ಪುತ್ರಿ ಶರ್ಮಿಳಾರನ್ನು ವಿವಾಹವಾದರು.ರಾಜ್ ಮತ್ತು ಶರ್ಮಿಳಾ ಅವರಿಗೆ ಇಬ್ಬರು ಮಕ್ಕಳಿವೆ, ಅನೇಕ ಸಂದರ್ಭಗಳಲ್ಲಿ ಪತಿಯೊಂದಿಗೆ ಕಾಣಿಸಿಕೊಳ್ಳುತ್ತಾರೆ ಶರ್ಮಿಳಾ.
ರಾಜ್ ಠಾಕ್ರೆ ಮತ್ತು ಶರ್ಮಿಳಾ ಅವರ ಮೊದಲ ಭೇಟಿಯ ಕಥೆಯೂ ತುಂಬಾ ಕುತೂಹಲಕಾರಿಯಾಗಿದೆ. ರಾಜ್ ಠಾಕ್ರೆ ಅವರ ತಾಯಿ ಆಸ್ಪತ್ರೆಗೆ ದಾಖಲಾಗಿದ್ದಾಗ ಅವರನ್ನು ಶರ್ಮಿಳಾ ನೋಡಲು ಹೋಗಿದ್ದರು. ಶರ್ಮಿಳಾಳನ್ನು ನೋಡಿದ ರಾಜ್ ತಾಯಿ ಸೊಸೆ ಎಂದು ತಿರ್ಮಾನಿಸಿದ್ದರು. ರಾಜ್ ಠಾಕ್ರೆಯ ಒಪ್ಪಿಗೆ ನಂತರ, ಇಬ್ಬರೂ ಕೆಲವೇ ತಿಂಗಳಲ್ಲಿ ವಿವಾಹವಾದರು.
ಶರ್ಮಿಳಾ ಕೂಡ ಪತಿಯೊಂದಿಗೆ ರಾಜಕೀಯದಲ್ಲಿದ್ದಾರೆ. ಕೆಲವು ದಿನಗಳ ಹಿಂದೆ ರಾಜ್ ಠಾಕ್ರೆ ಅವರನ್ನು ಟೋಲ್ ವಿಚಾರದಲ್ಲಿ ಮುಂಬೈ ಪೊಲೀಸರು ಬಂಧಿಸಿದಾಗ ಶರ್ಮಿಳಾ ತಮ್ಮ ಪತಿಗಾಗಿ ಪೊಲೀಸ್ ಠಾಣೆ ಮುಂದೆ ಧರಣಿ ಕುಳಿತಿದ್ದರು. ನಂತರ ಮುಂಬೈ ಪೊಲೀಸರು ರಾಜ್ ಠಾಕ್ರೆಯನ್ನು ಬಿಡುಗಡೆ ಮಾಡಬೇಕಾಯಿತು.
ಶಿವಾಜಿ ಪಾಕ್‌ನಲ್ಲಿ ಬೆಳಿಗ್ಗೆ ವಾಕ್ ಮಾಡಲು ಹೋಗುತ್ತಾರೆ.ರಾಜಕೀಯದ ಹೊರತಾಗಿ ಸಾಮಾಜಿಕ ಕಾರ್ಯಗಳಲ್ಲಿ ತುಂಬಾ ಸಕ್ರಿಯರಾಗಿರುವ ಇವರು ಮುಂಬೈಯಲ್ಲಿ ಸಾಮಾಜಿಕ ಕಾರಣಕ್ಕೆ ಸಂಬಂಧಿಸಿದ ಕಾರ್ಯಕ್ರಮಗಳಲ್ಲಿ ಆಗಾಗ್ಗೆ ಭಾಗವಹಿಸುತ್ತಾರೆ.
ಸಂಗೀತ ನಿರ್ದೇಶಕರಾಗಿದ್ದ ರಾಜ್ ಠಾಕ್ರೆ ಅವರ ತಂದೆ ಶ್ರೀಕಾಂತ್ ಠಾಕ್ರೆ ಮಗನಿಗೆ ಸ್ವರಾಜ್ ಎಂದು ಹೆಸರಿಟ್ಟರು. ಆದರೆ ರಾಜ್ ಠಾಕ್ರೆ ಸಂಗೀತಕ್ಕಿಂತ ಬಾಳಾ ಠಾಕ್ರೆಯಂತೆ ವ್ಯಂಗ್ಯಚಿತ್ರಗಳನ್ನು ರಚಿಸುವಲ್ಲಿ ಹೆಚ್ಚು ಆಸಕ್ತಿ ಹೊಂದಿದ್ದರು. ಕಾರ್ಟೂನಿಸ್ಟ್ ಆಗುವ ಮೊದಲು ನಾನುಹೆಸರನ್ನು ಬಾಳಾಸಾಹೇಬ್ ಠಾಕ್ರೆಯಿಂದ ಬಾಳ್ ಠಾಕ್ರೆ ಎಂದು ಬದಲಾಯಿಸಿದ್ದೇನೆ ಹಾಗೇ ಸ್ವರಾಜ್ ಬದಲಿಗೆ ನಿನ್ನ ಹೆಸರನ್ನು ರಾಜ್ ಠಾಕ್ರೆ ಎಂದು ಬದಲಾಯಿಸಬಹುದು ಎಂದು ಸಲಹೆ ನೀಡಿದ್ದರಂತೆ.
ತಮ್ಮ ಶಾಲಾ ದಿನಗಳಿಂದ ಚಿತ್ರಕಲೆಗೆ ಆಸಕ್ತಿ ಹೊಂದಿದ್ದ ರಾಜ್ ಠಾಕ್ರೆ,ನಂತರ ಜೆಜೆ ಸ್ಕೂಲ್ ಆಫ್ ಆರ್ಟ್‌ನೊಂದಿಗೆ ತಮ್ಮ ಕಾಲೇಜು ಜೀವನ ಪ್ರಾರಂಭಿಸಿದರು. ಶಿವಸೇನೆ ಸಂಸ್ಥಾಪಕ ದಿವಂಗತ ಬಾಳಾ ಠಾಕ್ರೆ ಅವರ ಅಡಿಯಲ್ಲಿ ರಾಜ್ ತಮ್ಮ ಕಾಲೇಜು ಸಮಯದಲ್ಲಿ ರಾಜಕೀಯಕ್ಕೆ ಕಾಲಿಟ್ಟರು.
ರಾಜ್ ಠಾಕ್ರೆ ಅಮಿತಾಬ್ ಬಚ್ಚನ್ ಅವರ 75ನೇ ಹುಟ್ಟುಹಬ್ಬದಂದು ಬಿಗ್ ಬಿಯ ವಿವಿಧ ಹಂತದ 6 ವ್ಯಂಗ್ಯಚಿತ್ರಗಳನ್ನು ಫೇಸ್‌ಬುಕ್‌ನಲ್ಲಿ ಪೋಸ್ಟ್ ಮಾಡುವ ಮೂಲಕ ಅವರಿಗೆ ವಿಶ್‌ ಮಾಡಿದ್ದರು.

Latest Videos

click me!