ಶಾರುಖ್‌ ಖಾನ್‌ ಹಳೇ ಫೋಟೋಗಳು ವೈರಲ್‌!

Suvarna News   | Asianet News
Published : Jun 17, 2021, 05:33 PM ISTUpdated : Jun 19, 2021, 03:30 PM IST

ಬಾಲಿವುಡ್‌ ಸೂಪರ್‌ಸ್ಟಾರ್‌ ಶಾರುಖ್ ಖಾನ್ ಅವರ ಬಹುನಿರೀಕ್ಷಿತ ಚಿತ್ರ 'ಪಠಾಣ್'  ಈ ದಿನಗಳಲ್ಲಿ ಚರ್ಚೆಯಲ್ಲಿದೆ. ಕೆಲವು ದಿನಗಳ ಹಿಂದೆ, ಪಠಾಣ್ ಸಿನಿಮಾ  ಸೆಟ್‌ನಿಂದ ಶಾರುಖ್ ಅವರ ಕೆಲವು ಫೋಟೋಗಳು ಬಹಿರಂಗಗೊಂಡಿದ್ದವು. ಈ ನಡುವೆ ಶಾರುಖ್ ಅವರ  ರಂಗಭೂಮಿ ಮತ್ತು ನಾಟಕಗಳನ್ನು ಮಾಡುತ್ತಿದ್ದಾಗ ದಿನಗಳ ಪೋಟೋಗಳನ್ನು ಸಂಜಯ್ ರಾಯ್ ಹಂಚಿಕೊಂಡಿದ್ದಾರೆ. ಅದರಲ್ಲಿ ಅವರು  ಶಾರುಖ್ ಅವರೊಂದಿಗೆ ಕಾಣಿಸಿಕೊಂಡಿದ್ದಾರೆ. ಸಂಜಯ್ ರಾಯ್ ಈಗ ಈವೆಂಟ್ ಮ್ಯಾನೇಜ್ಮೆಂಟ್ ಕಂಪನಿಯಲ್ಲಿ ವ್ಯವಸ್ಥಾಪಕ ನಿರ್ದೇಶಕರಾಗಿದ್ದಾರೆ. ಶಾರುಖ್‌ ಖಾನ್‌ರ ಕೆಲವು ಹಳೆ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.  

PREV
18
ಶಾರುಖ್‌ ಖಾನ್‌ ಹಳೇ ಫೋಟೋಗಳು ವೈರಲ್‌!

ಈ ಕಪ್ಪು ಮತ್ತು ಬಿಳಿ ಫೋಟೋದಲ್ಲಿ, ಶಾರುಖ್ ಖಾನ್ ಮತ್ತು ಸಂಜಯ್ ರಾಯ್ ಅವರ ಸ್ನೇಹಿತರಾದ ರಿತುರಾಜ್ ಮತ್ತು ದಿವ್ಯಾಸೇತ್ ಜೊತೆ ರೈಲ್ವೆ ನಿಲ್ದಾಣದ ಫ್ಲಾಟ್‌ಫಾರ್ಮ್‌ನಲ್ಲಿ ಕಾಣಿಸಿಕೊಂಡಿದ್ದಾರೆ. 

28

ನಿರ್ದೇಶಕ ಬ್ಯಾರಿ ಜಾನ್ ಅವರ ನಾಟಕ ರಫ್ ಕ್ರಾಸಿಂಗ್‌ಗಾಗಿ ಕೊಲ್ಕತ್ತಾಗೆ ತೆರಳಬೇಕಿದ್ದಾಗಿನ ಫೋಟೋನಿದು, ಎಂದು ಸಂಜಯ್ ಹೇಳಿದ್ದಾರೆ. ಕೆಲವು ವರ್ಷಗಳ ಕಾಲ ರಂಗಭೂಮಿಯಲ್ಲಿಯೇ ಕೆಲಸ ಮಾಡಿದ ನಂತರ ಶಾರುಖ್ ಖಾನ್ ನಂತರ ಟಿವಿ ಶೋಗಳ ಕಡೆಗೆ ತಿರುಗಿದರು.
 
38

ಬಾಲ್ಯದಲ್ಲಿ ಹಿಂದಿ ಅವರಿಗೆ ಕಷ್ಟ. ಹಿಂದಿಯಲ್ಲಿ ಉತ್ತಮ ಅಂಕಗಳನ್ನು ತೆಗೆದರೆ ಅವರಿಗೆ ಸಿನಿಮಾ ತೋರಿಸುತ್ತೇನೆ ಎಂದು ಅವರ ತಾಯಿ ಹೇಳಿದರು. ಅದರ ನಂತರ ಶಾರುಖ್ ಹಿಂದಿಯಲ್ಲಿ 10ಕ್ಕೆ 10 ಅಂಕ ಗಳಿಸಿದರು  ತಾಯಿ ಅವರನ್ನು ಮೊದಲ ಬಾರಿಗೆ ಸಿನಿಮಾವನ್ನು ತೋರಿಸಲು ಕರೆದೊಯ್ದರು. ಆ ಚಿತ್ರ ದೇವ ಆನಂದ್ ಅವರ ಜೋಶಿಲಾ ಆಗಿತ್ತು ಎಂದು ಶಾರುಖ್‌ ಇವೆಂಟ್ ಒಂದರಲ್ಲಿ ಹಂಚಿಕೊಂಡಿದ್ದರು.

48

'ತಮ್ಮ ಮೊದಲ ಗಳಿಕೆ 50 ರೂಪಾಯಿಳಾಗಿತ್ತು. ಆ ಹಣದಿಂದ ಅವರು ತಮ್ಮ ಮೂವರು ಸ್ನೇಹಿತರೊಂದಿಗೆ ತಾಜ್‌ಮಹಲ್ ನೋಡಲು ಹೋದರು. ಅಲ್ಲಿ ಲಸ್ಸಿ ಕುಡಿಯಲು ಹೋದಾಗ ಅದರಲ್ಲಿ ಒಂದು ನೊಣ ಬಿತ್ತತಂತೆ. ಆದರೆ ಹಣವಿಲ್ಲದ ಕಾರಣ ಆ ನೊಣ ಬಿದ್ದ ಲಸ್ಸಿಯನ್ನು ಕುಡಿದಿದ್ದರು. ಆದರೆ ವಾಪಸ್ಸು ಬರುವ ಸಮಯದಲ್ಲಿ, ಶಾರುಖ್ ದಾರಿಯುದ್ದಕೂ ವಾಂತಿ ಮಾಡಿದ್ದರು,' ಎಂದು ಶಾರುಖ್ ಖಾನ್ ಸಂದರ್ಶನವೊಂದರಲ್ಲಿ ಹೇಳಿದ್ದರು.

58

ಶಾರುಖ್ ದೆಹಲಿಯ ಹನ್ಸ್ರಾಜ್ ಕಾಲೇಜಿನಿಂದ ಅರ್ಥಶಾಸ್ತ್ರದಲ್ಲಿ ಪದವಿ ಪಡೆದ ನಂತರ, ಅವರು ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿಶ್ವವಿದ್ಯಾಲಯಕ್ಕೆ ಸೇರಿದರು. ಅವರ ಕಾಲೇಜು ದಿನಗಳಲ್ಲಿ ಅವರು ಸ್ನೇಹಿತರೊಂದಿಗಿನ ಈ ಹಳೆಯ ಫೋಟೋ ಕೆಲವು ದಿನಗಳ ಹಿಂದೆ ವೈರಲ್ ಆಗಿತ್ತು. 

68

ತಮ್ಮ ವೃತ್ತಿಜೀವನದ ಆರಂಭದಲ್ಲಿ, ಶಾರುಖ್ ಅನೇಕ ಮದುವೆಗಳಲ್ಲಿ ಪರ್ಫಾರ್ಮ್ ಮಾಡಿದ್ದರು. ಈ ಬಗ್ಗೆ ಶಾರುಖ್ ಅವರನ್ನು ಕೇಳಿದಾಗ, 'ಹೌದು ನಾನು ನೃತ್ಯ ಮಾಡುತ್ತೇನೆ ಮತ್ತು ಅದರಲ್ಲಿ ನನಗೆ ಯಾವುದೇ ತೊಂದರೆ ಇಲ್ಲ. ಶಾರುಖ್ ಖಾನ್ ಅವರು 95ನೇ ವರ್ಷಕ್ಕೆ ಕಾಲಿಟ್ಟಾಗಲೂ ಅವರು ಚೈಯಾ ಚೈಯಾ ಹಾಡಿಗೆ ನೃತ್ಯ ಮಾಡುತ್ತಾರೆ. ನಾನು ರೈಲಿನ ಮೇಲೆ ವೀಲ್‌ಚೇರ್‌ನಲ್ಲಿ ಕುಳಿತುಕೊಳ್ಳುತ್ತೇನೆ ಮತ್ತು ರೆಮೋವನ್ನು ಸಹ ನನ್ನೊಂದಿಗೆ ಕರೆದೊಯ್ಯುತ್ತೇನೆ,' ಎಂದು ಹೇಳಿದ್ದರು.

78

'ಜುಹಿ ಚಾವ್ಲಾ ನನ್ನೊಂದಿಗೆ ಕೆಲಸ ಮಾಡಲು ಒಪ್ಪದಿದ್ದರೆ, ನಾನು ಎಂದಿಗೂ ಹೀರೋ ಆಗುತ್ತಿರಲಿಲ್ಲ,' ಎಂದು ಶಾರುಖ್ ಹೇಳುತ್ತಾರೆ. ಶಾರುಖ್ 1992ರಲ್ಲಿ ಜುಹಿ ಜೊತೆ 'ರಾಜು ಬನ್ ಗಯಾ ಜಂಟಲ್ಮನ್' ಚಿತ್ರವನ್ನು ಮಾಡಿದರು .

88

ಶಾರುಖ್ ಖಾನ್ 1989 ರಲ್ಲಿ ಫೌಜಿ ಧಾರಾವಾಹಿ ಮೂಲಕ ನಟನೆಗೆ ಪಾದಾರ್ಪಣೆ ಮಾಡಿದರು. ಸರ್ಕಸ್ ಮತ್ತು ಬುನಿಯಾದ್‌ ನಂತಹ ಇನ್ನೂ ಕೆಲವು ಧಾರಾವಾಹಿಗಳಲ್ಲಿ ಕಾಣಿಸಿಕೊಂಡ ನಂತರ 1992 ರಲ್ಲಿ 'ದಿವಾನಾ' ಸಿನಿಮಾದ ಮೂಲಕ ಬಾಲಿವುಡ್‌ಗೆ ಕಾಲಿಟ್ಟರು. ಶಾರುಖ್ ಕೊನೆಯ ಬಾರಿಗೆ 2018 ರಲ್ಲಿ ಜೀರೋದಲ್ಲಿ ಕಾಣಿಸಿಕೊಂಡರು.

click me!

Recommended Stories