ಮಹಾರಾಷ್ಟ್ರ ನವನಿರ್ಮಾಣ ಸೇನೆ ಅಧ್ಯಕ್ಷ ರಾಜ್ ಠಾಕ್ರೆ ಎಂದಿನಂತೆ ಈಗಲೂ ಚರ್ಚೆಯಲ್ಲಿದ್ದಾರೆ. ಇತ್ತೀಚೆಗೆ ಅವರು ಅಯೋಧ್ಯೆ(Ayodhya)ಗೆ ಹೋಗುವುದಾಗಿ ಹೇಳಿದ್ದರು, ಆದರೆ ನಂತರ ಇದ್ದಕ್ಕಿದ್ದಂತೆ ಅವರು ತಮ್ಮ ಪ್ರವಾಸ ರದ್ದುಗೊಳಿಸಿದರು. ಈ ಕುರಿತು ಸ್ಪಷ್ಟನೆ ನೀಡಿರುವ ಠಾಕ್ರೆ, ಸದ್ಯಕ್ಕೆ ಸೃಷ್ಟಿಯಾಗಿರುವ ವಾತಾವರಣದ ಹಿನ್ನೆಲೆಯಲ್ಲಿ ನಾನು ಅಲ್ಲಿಗೆ ಹೋದರೆ ಅಲ್ಲಿಗೆ ನನ್ನ ಹಿಂದೆಯೇ ಅನೇಕರು ಬರುತ್ತಾರೆ. ನಂತರ ಕೇಸು ದಾಖಲಿಸಿ ಜೈಲಿಗೆ ಹಾಕುತ್ತಾರೆ ಅದು ನನಗೆ ಬೇಡ ಎಂದಿದ್ದಾರೆ.
ರಾಜ್ ಠಾಕ್ರೆ ತಮ್ಮ ರಾಜಕೀಯ ಜೀವನದ ಜೊತೆ ವೈಯಕ್ತಿಕ ಜೀವನದಿಂದಲೂ ಸುದ್ದಿಯಲ್ಲಿದ್ದರು. ಉತ್ತರ ಭಾರತೀಯರ ಮೇಲೆ ಹಲ್ಲೆ ಪ್ರಕರಣವಿರಲಿ ಅಥವಾ ನಟಿ ಸೋನಾಲಿ ಬೇಂದ್ರೆ ಜೊತೆಗಿನ ಅಫೇರ್ ಇರಲಿ, ರಾಜ್ ಠಾಕ್ರೆ ಸದಾ ಸುದ್ದಿಯಲ್ಲಿದ್ದರು.
ಮದುವೆಯಾಗಿದ್ದರೂ ರಾಜ್ ಠಾಕ್ರೆ ಬಾಲಿವುಡ್ ನಟಿ ಸೋನಾಲಿ ಬೇಂದ್ರೆ ಅವರಿಗೆ ಮನಸೋತಿದ್ದರು. ಇಬ್ಬರೂ ಮದುವೆಯಾಗಲು ಕೂಡ ಬಯಸಿದ್ದರಂತೆ. ಆದರೆ ರಾಜ್ ಠಾಕ್ರೆ ಅವರ ಚಿಕ್ಕಪ್ಪ ಬಾಳ್ ಠಾಕ್ರೆ ಈ ಸಂಬಂಧವನ್ನು ಒಪ್ಪಲೇ ಇಲ್ವಂತೆ.
ರಾಜ್ ಠಾಕ್ರೆ ಮತ್ತು ಸೋನಾಲಿ ಬೇಂದ್ರೆ ಅವರ ಸಂಬಂಧದ ಸುದ್ದಿ ಶಿವಸೇನೆ (Shivsene) ಮುಖ್ಯಸ್ಥ ಬಾಳ್ ಠಾಕ್ರೆಗೆ ತಲುಪಿದಾಗ, ಅವರು ಈ ಮದುವೆಗೆ ನಿರಾಕರಿಸಿದರು. ಮದುವೆಯಾದ ನಂತರವೂ ರಾಜ್ ಠಾಕ್ರೆ ಸೋನಾಲಿ ಬೇಂದ್ರೆ ಅವರನ್ನು ಎರಡನೇ ಮದುವೆಯಾದರೆ ಅದು ಕುಟುಂಬದ ಮಾನ ಕೆಡುವುದಲ್ಲದೆ ಶಿವಸೇನೆಯ ರಾಜಕೀಯ ಭವಿಷ್ಯಕ್ಕೂ ಒಳ್ಳೆಯದಲ್ಲ ಎಂದು ರಾಜ್ ಠಾಕ್ರೆ ಚಿಕ್ಕಪ್ಪ ಬಲವಾಗಿ ನಂಬಿದ್ದರಂತೆ. ರಾಜಕೀಯ ಜೀವನದಲ್ಲಿ (Political Life) ಕಪ್ಪು ಚುಕ್ಕಿ ಸ-ಷ್ಟಿಯಾಗಬಾರದು ಎಂಬ ಕಾರಣಕ್ಕೆ ಠಾಕ್ರೆ ಈ ಸಂಬಂಧವನ್ನು ಒಪ್ಪಿಕೊಳ್ಳಲು ಸಿದ್ಧರಿರಲಿಲ್ಲವಂತೆ.
ಹೀಗಿರುವಾಗ ರಾಜ್ ಠಾಕ್ರೆ ಅವರ ನಿರ್ಧಾರವನ್ನು ವಿರೋಧಿಸುವುದು ಸರಿಯಲ್ಲ ಎಂದು ಭಾವಿಸಿ, ಮದುವೆಯಿಂದ ರಾಜ್ ಠಾಕ್ರೆ ಹಿಂದೆ ಸರಿದಿದ್ದರು. ಮರಾಠಿ ಸಿನಿಮಾದ ಫೋಟೋಗ್ರಾಫರ್ ಮತ್ತು ನಿರ್ಮಾಪಕ-ನಿರ್ದೇಶಕ ಮೋಹನ್ ವಾಘ್ ಅವರ ಪುತ್ರಿ ಶರ್ಮಿಳಾ, ರಾಜ್ ಠಾಕ್ರೆ ಅವರ ಪತ್ನಿ .ರಾಜ್ ಮತ್ತು ಶರ್ಮಿಳಾ ಅವರಿಗೆ ಇಬ್ಬರು ಮಕ್ಕಳಿವೆ,