ನಗ್ನ ಚಿತ್ರ ಮಾಡ್ತಿದ್ವಿ: ಕುಂದ್ರಾ ಕೇಸ್‌ ಆರೋಪಿ ತನ್ವೀರ್ ಹಶ್ಮಿ ತಪ್ಪೊಪ್ಪಿಗೆ!

First Published Jul 28, 2021, 5:18 PM IST

ಬಾಲಿವುಡ್‌ ನಟಿ ಶಿಲ್ಪಾ ಶೆಟ್ಟಿ ಪತಿ ಮತ್ತು ಉದ್ಯಮಿ ರಾಜ್ ಕುಂದ್ರಾರಿಗೆ ತೊಂದರೆಗಳು ಹೆಚ್ಚುತ್ತಲೇ ಇವೆ. ಜಾಮೀನು ಸಿಗೋದೇ ಅನುಮಾನವಾಗಿದೆ. ಅವರ ಕಸ್ಟಡಿಯನ್ನು ನ್ಯಾಯಾಲಯ ಮತ್ತೆ ವಿಸ್ತರಿಸಿದೆ. ರಾಜ್ ಕುಂದ್ರಾ ಜೊತೆಗೆ ಅನೇಕರನ್ನು ಬಂಧಿಸಲಾಗಿದೆ ನೀಲಿ ಚಿತ್ರ ತಯಾರಿಕೆ ಆರೋಪದ ಮೇಲೆ ಬಂಧಿಸಲಾಗಿದೆ. ತನ್ವೀರ್ ಹಶ್ಮಿ ಅದರಲ್ಲಿ ಇನ್ನೊಬ್ಬ ಅರೋಪಿ. ವಿಚಾರಣೆ ಸಮಯದಲ್ಲಿ, ತನ್ವೀರ್ ಅವರು  ನ್ಯೂಡಿಟಿ ಕಿರುಚಿತ್ರಗಳನ್ನು ಮಾಡುತ್ತಿದ್ದರು, ಆದರೆ ಅದು ಪೋರ್ನೋಗ್ರಾಫಿ  ಅಲ್ಲ ಎಂದು ಹೇಳಿದ್ದಾರೆ. ಹಾಗಾದ್ರೆ ಮತ್ತೇನು? ಪೂರ್ತಿ ಮಾಹಿತಿಗಾಗಿ ಮುಂದೆ ಓದಿ.

ರಾಜ್ ಕುಂದ್ರಾ ಜೊತೆ ಅಶ್ಲೀಲ ಚಲನಚಿತ್ರಗಳನ್ನು ಮಾಡುವ ಮತ್ತು ಅವುಗಳನ್ನು ಅಪ್ಲಿಕೇಶನ್‌ಗಳಲ್ಲಿ ಅಪ್‌ಲೋಡ್ ಮಾಡಿದ ಪ್ರಕರಣದಲ್ಲಿ ಅನೇಕ ಜನರನ್ನು ಬಂಧಿಸಲಾಗಿದೆ. ಅದರಲ್ಲಿ ತನ್ವೀರ್ ಹಶ್ಮಿ ಒಬ್ಬರು. ತನ್ವೀರ್ ಪ್ರಸ್ತುತ ಜಾಮೀನಿನ ಮೇಲೆ ಹೊರಗಿದ್ದಾರೆ.
undefined
ಕುಂದ್ರಾ ಪ್ರಕರಣದಲ್ಲಿ ಹಶ್ಮಿಯನ್ನು ಮುಂಬೈ ಕ್ರೈಮ್‌ ಬ್ರಾಂಚ್‌ ಸುಮಾರು ಮೂರು ಗಂಟೆಗಳ ಕಾಲ ವಿಚಾರಣೆ ನಡೆಸಿದೆ.
undefined
ಇದರಲ್ಲಿ ಅವರು ನಗ್ನತೆ ಕಿರುಚಿತ್ರಗಳನ್ನು ಮಾಡುತ್ತಿದ್ದರು, ಆದರೆ ಅಶ್ಲೀಲ ಚಿತ್ರವಲ್ಲ ಎಂದು ಒಪ್ಪಿಕೊಂಡಿದ್ದಾರೆ.
undefined
ತಾನು ಕುಂದ್ರಾರನ್ನು ಎಂದಿಗೂ ಭೇಟಿ ಮಾಡಿಲ್ಲ. ಕೇವಲ ಅವರ ಅಪ್ಲಿಕೇಶನ್‌ಗಾಗಿ ಕಂಟೆಂಟ್‌ ರಚಿಸುತ್ತಿದ್ದೆ, ಎಂದು ತನ್ವೀರ್ ಹೇಳಿದ್ದಾರೆ.
undefined
ನೇರವಾಗಿ ಕುಂದ್ರಾ ಅವರ ಕಂಪನಿಗೆ ಕೆಲಸ ಮಾಡಲಿಲ್ಲ. 20 ರಿಂದ 25 ನಿಮಿಷಗಳ ಕಿರು ಚಿತ್ರಗಳನ್ನು ಮಾಡುತ್ತಿದ್ದೆವು. ಅದರಲ್ಲಿ ನಗ್ನತೆ ಇತ್ತು, ಆದರೆ ಅದನ್ನು ಅಶ್ಲೀಲ ಎಂದು ಕರೆಯಲಾಗುವುದಿಲ್ಲ ಎಂದು ಹೇಳಿದ್ದಾರೆ.
undefined
ಇತ್ತೀಚೆಗೆ, ಅಂದೇರಿಯಲ್ಲಿರುವ ಕುಂದ್ರಾ ಅವರ ಆಫೀಸ್‌ನಲ್ಲಿ ಸೀಕ್ರೇಟ್‌ ವಾಲ್‌ ಹಾಗೂ ಬೀರುಗಳ ಬಗ್ಗೆ ಪೊಲೀಸರಿಗೆ ತಿಳಿದಿದೆ. ಮತ್ತೊಮ್ಮೆ ಇಡೀ ಕಚೇರಿಯನ್ನು ಶನಿವಾರ ಹುಡುಕಲಾಯಿತು.
undefined
ಇದಕ್ಕೂ ಮೊದಲು ಜುಲೈ 19 ರಂದು ಅಪರಾಧ ವಿಭಾಗವೂ ಇಲ್ಲಿ ದಾಳಿ ನಡೆಸಿತ್ತು, ಆದರೆ ನಂತರ ಈ ರಹಸ್ಯ ಬೀರು ಪತ್ತೆಯಾಗಿದೆ.
undefined
ಬೀರುವಿನಲ್ಲಿದ್ದ ಕೆಲವು ಪೆಟ್ಟಿಗೆಗಳು ಮತ್ತು ಫೈಲ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ, ಅದರಲ್ಲಿ ಕ್ರಿಪ್ಟೋಕರೆನ್ಸಿಗೆ ಸಂಬಂಧಿಸಿದ ದಾಖಲೆಗಳಿವೆ.
undefined
ಪೊಲೀಸರು ವಿಯಾನ್ ಇಂಡಸ್ಟ್ರೀಸ್ ನೌಕರರನ್ನು ವಿಚಾರಿಸಿದಾಗ ಈ ಬೀರು ಬಗ್ಗೆ ತಿಳಿಯಿತು. ರಾಜ್ ಕುಂದ್ರಾ ಅಥವಾ ಶಿಲ್ಪಾ ಶೆಟ್ಟಿ ಈ ವಾರ್ಡ್ರೋಬ್ ಬಗ್ಗೆ ಈವರೆಗೆ ಏನನ್ನೂ ಹೇಳಲಿಲ್ಲ.
undefined
ಸದ್ಯಕ್ಕೆ ರಾಜ್ ಕುಂದ್ರಾ ಅವರನ್ನು ನ್ಯಾಯಾಂಗ ಬಂಧನದಲ್ಲಿಡಲು ನ್ಯಾಯಾಲಯ ಆದೇಶಿಸಿದೆ. ಅದೇ ಸಮಯದಲ್ಲಿ, ಮುಂಬೈ ಪೊಲೀಸರು ಆತನ ವಿರುದ್ಧ ಸಾಕ್ಷ್ಯಗಳನ್ನು ಸಂಗ್ರಹಿಸುವಲ್ಲಿ ಬ್ಯುಸಿಯಾಗಿದ್ದಾರೆ.
undefined
ಈ ಪ್ರಕರಣದಲ್ಲಿ ರಾಜ್ ಕುಂದ್ರಾ ಕಂಪನಿಯ ನಾಲ್ವರು ನೌಕರರು ಪ್ರತ್ಯಕ್ಷದರ್ಶಿಗಳಾಗಿದ್ದಾರೆ. ಇವರಿಂದ ಕ್ರೈಮ್‌ ಬ್ರಾಂಚ್‌ ಕುಂದ್ರಾರ ವ್ಯವಹಾರಗಳ ಬಗ್ಗೆ ಮಾಹಿತಿಯನ್ನು ಸಂಗ್ರಹಿಸುತ್ತದೆ.
undefined
ಇಡಿ ಮೂಲಗಳ ಪ್ರಕಾರ, ತನಿಖಾ ಸಂಸ್ಥೆ ಈ ಪ್ರಕರಣದಲ್ಲಿ ಮುಂಬೈ ಪೊಲೀಸರಿಂದ ಎಫ್‌ಐಆರ್ ಕೋರಿದ್ದು, ಶೀಘ್ರದಲ್ಲೇ ಪ್ರಕರಣ ದಾಖಲಿಸಲಾಗುವುದು.
undefined
ಮೂಲಗಳ ಪ್ರಕಾರ, ರಾಜ್ ಕುಂದ್ರಾ ಅವರನ್ನು ಫೆಮಾ (ವಿದೇಶಿ ವಿನಿಮಯ ನಿರ್ವಹಣಾ ಕಾಯ್ದೆ) ಅಡಿಯಲ್ಲಿ ಸಮನ್ಸ್‌ ನೀಡಬಹುದು ಹಾಗೂ ಈ ವಿಷಯದಲ್ಲಿ ಕಂಪನಿಯ ನಿರ್ದೇಶಕರನ್ನು ಸಹ ಪ್ರಶ್ನಿಸಬಹುದು.
undefined
click me!