ಕುಟುಂಬದ ಮರ್ಯಾದೆ ಹೋಯ್ತು ಎಂದ ಶಿಲ್ಪಾ: ಸಿನಿಮಾ, ಜಾಹೀರಾತು ಆಫರ್ ಕೂಡಾ ಕ್ಯಾನ್ಸಲ್

First Published | Jul 28, 2021, 1:54 PM IST
  • ಪತಿ ಅರೆಸ್ಟ್ ನಂತರ ಕುಟುಂಬದ ಮರ್ಯಾದೆ ಹೋಯ್ತು ಎಂದ ಶಿಲ್ಪಾ
  • ಪ್ರಾಜೆಕ್ಟ್, ಜಾಹೀರಾತು ಆಫರ್ ಎಲ್ಲವೂ ಕ್ಯಾನ್ಸಲ್..!
ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ದಾಂಪತ್ಯ ಜೀವನದಲ್ಲಿ ಬಿರುಗಾಳಿ ಎದ್ದಿದೆ. ಪೋರ್ನ್ ದಂಧೆಯಲ್ಲಿ ಪತಿ ಸಿಲುಕಿ ಹಾಕಿದ್ದು ಮತ್ತಷ್ಟು ಅವಮಾನಕರವಾಗಿದೆ.
ಹೇಳಿಕೆ ಪಡೆಯುವುದು, ವಿಚಾರಣೆ, ಪರಿಶೀಲನೆ ಎಂದು ಮುಂಬೈ ಪೊಲೀಸರು ಶಿಲ್ಪಾ ಮನೆ ಹತ್ತಿ ಇಳಿಯುತ್ತಿದ್ದಾರೆ. ಇತ್ತೀಚೆಗೆ ನಟಿ ಪತಿಯ ವಿರುದ್ಧ ಕೂಗಾಡಿದ್ದು ಸುದ್ದಿಯಾಗಿತ್ತು
Tap to resize

ಈಗ ಅಧಿಕಾರಿಗಳು ಮತ್ತೊಂದು ವಿಚಾರ ತಿಳಿಸಿದ್ದಾರೆ. ಇಡೀ ಪ್ರಕರಣದಿಂದ ಕುಟುಂಬ ಮರ್ಯಾದೆ ಹೋಗಿದೆ ಎಂದು ಅಧಿಕಾರಿಗಳಲ್ಲಿ ಹೇಳಿದ್ದಾರೆ ನಟಿ
ಇದುವರೆಗೂ ಪ್ರಕರಣದಲ್ಲಿ ಶಿಲ್ಪಾ ಶೆಟ್ಟಿಗೆ ಕ್ಲೀನ್ ಚಿಟ್ ಕೊಟ್ಟಿಲ್ಲವಾದರೂ ನಟಿಯ ಬಂಧನ, ವಿಶೇಷ ವಿಚಾರಣೆ ಕುರಿತಾಗಿ ಪೊಲೀಸರು ಏನೂ ಹೇಳಿಲ್ಲ.
ಸದ್ಯ ರಾಜ್ ಕುಂದ್ರಾ ನ್ಯಾಯಾಂಗ ಬಂಧನವನ್ನು 16 ದಿನ ವಿಸ್ತರಿಸಲಾಗಿದ್ದು, ಈ ಎಲ್ಲ ಬೆಳವಣಿಗೆ ಶಿಲ್ಪಾ ಶೆಟ್ಟಿ ಔದ್ಯೋಗಿಕ ಜೀವನದ ಮೇಲೂ ಪ್ರಭಾವ ಬೀರಲಾರಂಭಿಸಿದೆ.
ಘಟನೆಯಿಂದಾಗಿ ತಾನು ಈಗಾಗಲೇ ಹಲವು ಪ್ರಾಜೆಕ್ಟ್ ಕಳೆದುಕೊಂಡಿದ್ದೇನೆ ಎಂದಿದ್ದಾರೆ ನಟಿ.
ಅಶ್ಲೀಲ ವಿಡಿಯೋ ಪ್ರಕರಣಕ್ಕೆ ಸಂಬಂಧಿಸಿದಂತೆ ಕ್ರೈಂ ಬ್ರಾಂಚ್ ತನ್ನ ನಿವಾಸದ ಮೇಲೆ ದಾಳಿ ನಡೆಸಿದಾಗ, ನಟಿ ಶಿಲ್ಪಾ ಶೆಟ್ಟಿ ತನ್ನ ಕುಟುಂಬದ ಪ್ರತಿಷ್ಠೆಯನ್ನು ಹಾಳುಮಾಡಿದ್ದಾರೆ ಎಂದಿದ್ದಾರೆ.
ಉದ್ಯಮದಲ್ಲಿ ಅವರ ಪ್ರಾಜೆಕ್ಟ್ರದ್ದುಗೊಳಿಸಲಾಗುತ್ತಿದೆ ಎಂದು ಅಧಿಕಾರಿಗಳಿಗೆ ತಿಳಿಸಿದ್ದಾರೆ.
ಶಿಲ್ಪಾ ಆರ್ಥಿಕ ನಷ್ಟದ ಬಗ್ಗೆ ಮಾತನಾಡಿಅನೇಕ ಯೋಜನೆಗಳನ್ನು ಇದೇ ಕಾರಣಕ್ಕೆ ಕೈಯಿಂದ ಹೋಗಿದೆ ಎಂದಿದ್ದಾರೆ

Shilpa shetty

Latest Videos

click me!