ಎಷ್ಟೇ ದೊಡ್ಡ ಸ್ಟಾರ್ ಡ್ಯಾನ್ಸ್ ಮಾಡ್ತಿದ್ರು ನಿಮ್ಮ ಹಾಡಾ ಎಂದು ಮಗಳು ಕೇಳ್ತಾಳೆ: ಆಲಿಯಾ ಭಟ್

Published : Mar 19, 2025, 02:53 PM ISTUpdated : Mar 19, 2025, 02:59 PM IST

ರಾಹಾ ಹಿಂದಿ ಸಿನಿಮಾಗಳನ್ನು ನೋಡುತ್ತಾಳಾ? ತಂದೆ ತಾಯಿ ಸಿನಿಮಾವನ್ನು ಗೆಸ್ ಮಾಡ್ತಾಳಾ? ಇಲ್ಲಿದೆ ನೋಡಿ ಫುಲ್ ಉತ್ತರ.... 

PREV
16
ಎಷ್ಟೇ ದೊಡ್ಡ ಸ್ಟಾರ್ ಡ್ಯಾನ್ಸ್ ಮಾಡ್ತಿದ್ರು ನಿಮ್ಮ ಹಾಡಾ ಎಂದು ಮಗಳು ಕೇಳ್ತಾಳೆ: ಆಲಿಯಾ ಭಟ್

ಬಾಲಿವುಡ್ ಪವರ್ ಕಲಪ್ ಆಲಿಯಾ ಭಟ್ ಮತ್ತು ರಣಬೀರ್ ಕಪೂರ್ ತಮ್ಮ ಪುತ್ರಿ ರಾಹಾಳಿಗೆ ಈಗಷ್ಟೇ ಟಿವಿಯಲ್ಲಿ ಕಾರ್ಟೂನ್ ಮತ್ತು ಹಾಡುಗಳನ್ನು ನೋಡುವುದು ಹಾಗೂ ಮೊಬೈಲ್ ಪರಿಚಯ ಮಾಡಿಸಿದ್ದಾರೆ. 
 

26

 ಜೇ ಶೆಟ್ಟಿ ಸಂದರ್ಶನದಲ್ಲಿ ಭಾಗಿಯಾದ ಆಲಿಯಾ ಭಟ್‌ ತಮ್ಮ ಮಗಳು ಹಾಡುಗಳನ್ನು ಎಷ್ಟು ಎಂಜಾಯ್ ಮಾಡುತ್ತಾಳೆ? ಇಡೀ ಸಿನಿಮಾ ನೋಡುವಷ್ಟು ಗಮನ ಕೊಡುತ್ತಾಳಾ ಎಂದು ಪ್ರಶ್ನಿಸಿದ್ದಕ್ಕೆ ಉತ್ತರಿಸಿದ್ದಾರೆ. 

36

'ರಾಹಾ ಇನ್ನೂ ಪುಟ್ಟ ಹುಡುಗಿ ಹೀಗಾಗಿ ಯಾವ ಸಿನಿಮಾವನ್ನು ಸಂಪೂರ್ಣವಾಗಿ ನೋಡಿಲ್ಲ ಆದರೆ ಹಲವು ಹಾಡುಗಳನ್ನು ಪದೇ ಪದೇ ಪ್ಲೇ ಮಾಡಿಕೊಂಡು ನೋಡಿದ್ದಾಳೆ'

46

'ಇತ್ತೀಚಿಗೆ ಬೇರೆ ನಟ-ನಟಿಯರ ಸಿನಿಮಾ ಹಾಡುಗಳನ್ನು ತೋರಿಸಲು ಶುರು ಮಾಡಿದ್ದೀವಿ. ಆದರೆ ಈಗ ಆಕೆಗೆ ಎಲ್ಲವೂ ನಮ್ಮ ಹಾಡು ಅನ್ನೋ ಭಾವನೆ ಬಂದು ಬಿಟ್ಟಿದೆ' ಎಂದು ಆಲಿಯಾ ಭಟ್ ಮಾತನಾಡಿದ್ದಾರೆ.

56

'ಕೆಲವು ದಿನಗಳ ಹಿಂದೆ ಶಾರುಖ್‌ ಖಾನ್ ಚಿತ್ರದ ಹಾಡುಗೆ ಡ್ಯಾನ್ಸ್ ಮಾಡುತ್ತಿದ್ದೆ. ಆಗ ನನ್ನನ್ನು ನೋಡಿ ಅಮ್ಮ ಇದು ನಿಮ್ಮ ಹಾಡಾ ಎಂದು ರಾಹಾ ಕೇಳಿದಳು' ಎಂದು ಆಲಿಯಾ ಭಟ್ ಹೇಳಿದ್ದಾರೆ.
 

66

 'ನನ್ನ ಹಾಡಲ್ಲ ಅಂತ ಹೇಳಿದೆ. ಅಪ್ಪ ಮಾಡಿರುವ ಹಾಡಾ ಎಂದು ಕೇಳಿದಳು ಇಲ್ಲ ಅಂತ ಹೇಳಿ ಇದು ಶಾರುಖ್ ಹಾಡು ಎಂದೆ. ಆಕೆ ಕನ್ಫ್ಯೂಸ್ ಆಗಿ ನಿಂತುಬಿಟ್ಟಳು' ಎಂದಿದ್ದಾರೆ ಆಲಿಯಾ. 

Read more Photos on
click me!

Recommended Stories