ಸೌತ್ ಚಿತ್ರರಂಗದ ಲೇಡಿ ಸೂಪರ್ ಸ್ಟಾರ್ ನಯನತಾರಾ ಜೀವನದ ಬಗ್ಗೆ ಓಟಿಟಿಯಲ್ಲಿ ಡಾಕ್ಯೂಮೆಂಟರಿ ಮಾಡಿದ ಮೇಲೆ ಜನರಿಗೆ ಕೊಂಚ ಹತ್ತಿರವಾಗಿದ್ದಾರೆ.
26
ನಯನತಾರಾ ಗುಣ ಸ್ವಭಾವ ಹಾಗೂ ಜೀವನ ಶೈಲಿ ಬಗ್ಗೆ ಗೊತ್ತಿಲ್ಲದೆ ಇಷ್ಟ ಪಡುತ್ತಿದ್ದ ಜನರಿಗೆ ಈಗ ಸಂಪೂರ್ಣ ಮಾಹಿತಿ ಸಿಕ್ಕಿ ಆಕೆಯನ್ನು ಮತ್ತಷ್ಟು ಇಷ್ಟ ಪಡಲು ಶುರು ಮಾಡಿದ್ದಾರೆ.
36
ನಯನತಾರಾ ಎಷ್ಟು ಸ್ಟ್ರಾಂಗ್? ಬೇಸರ ಅದಾಗ ಅಳುತ್ತಾರಾ? ಎಂದು ಇತ್ತೀಚಿಗೆ ಸಂದರ್ಶನ ಒಂದರಲ್ಲಿ ನಯನತಾರಾ ನೀಡಿದ ಹೇಳಿಕೆ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
46
'ಮಾನಸಿಕವಾಗಿ ನಾನು ತುಂಬಾ ಅಂದ್ರೆ ತುಂಬಾ ಗಟ್ಟಿಗಿತ್ತಿ. ಅಷ್ಟು ಸುಲಭವಾಗಿ ನಾನು ಅಳುವುದಿಲ್ಲ. ಕೆಲವೊಮ್ಮೆ ಬೇಸರದಲ್ಲಿ ಕಣ್ಣೀರಿಟ್ಟರೂ ಕೂಡ ಅದರಿಂದ ಬೇಗ ಹೊರ ಬರುತ್ತೀನಿ'
56
'ನನಗೆ ಅನಿಸುತ್ತದೆ ಯಾವುದರಲ್ಲೂ ನನಗೆ ಆಯ್ಕೆ ಇಲ್ಲ ಅಂತ. ನನ್ನನ್ನು ನಾನು ನೋಡಿಕೊಂಡಿಲ್ಲ ಮತ್ತೆ ಯಾರು ನೋಡಿಕೊಳ್ಳಲು ಸಾಧ್ಯವಿಲ್ಲ' ಎಂದು ನಯನತಾರಾ ಹೇಳಿದ್ದಾರೆ.
66
'ಸಿನಿಮಾ ಜರ್ನಿ ಆರಂಭಿಸಿದ ಸಮಯದಲ್ಲಿ ಸಾಕಷ್ಟು ಸಮಸ್ಯೆಗಳನ್ನು ಎದುರಿಸಿದ್ದೀನಿ, ನನ್ನ ಜೀವನದಲ್ಲೂ ಕೂಡ. ಆ ಸಂದರ್ಭಗಳು ನನ್ನನ್ನು ಮತ್ತಷ್ಟು ಗಟ್ಟಿ ಮಾಡಿದೆ ಅನಿಸುತ್ತದೆ' ಎಂದಿದ್ದಾರೆ ನಯನತಾರಾ.