ರಾಘವೇಂದ್ರ ರಾವ್ ಟ್ರೈನ್‌ನಲ್ಲಿ ಫಸ್ಟ್ ನೈಟ್ ಏರ್ಪಡಿಸಿದ್ದು ಯಾರಿಗೆ ಅಂದ್ರೆ, ಮೆಗಾಸ್ಟಾರ್ ಚಿರಂಜೀವಿ ಅವರಿಗೆ. ಹೌದು ಇದು ನಿಜ. ಚಿರಂಜೀವಿ ಮತ್ತು ಅವರ ಧರ್ಮಪತ್ನಿ ಸುರೇಖಾಗೆ ಟ್ರೈನ್‌ನಲ್ಲಿ ಸ್ಪೆಷಲ್ ಆಗಿ ಫಸ್ಟ್ ನೈಟ್ ಏರ್ಪಡಿಸಿದ್ರು. ಸ್ಪೆಷಲ್ ಬೋಗಿ ಬುಕ್ ಮಾಡಿಸಿ ಮೊದಲ ರಾತ್ರಿಗೆ ಏರ್ಪಾಡು ಮಾಡಿದ್ರು. ಈ ಮೂಲಕ ಚಿರಂಜೀವಿ, ಸುರೇಖಾಗೆ ದೊಡ್ಡ ಶಾಕ್ ಕೊಟ್ಟಿದ್ರು. ಟ್ರೈನ್ ಹತ್ತೋವರೆಗೂ ಈ ವಿಷಯ ಅವರಿಗೆ ಗೊತ್ತಿರಲಿಲ್ಲ. ಇದನ್ನು ನೋಡಿ ಅವರಿಗೆ ಮೈಂಡ್ ಬ್ಲಾಕ್ ಆಗಿತ್ತು. ಆ ಎಕ್ಸ್‌ಪೀರಿಯೆನ್ಸ್ ಯಾವತ್ತೂ ಮರೆಯೋಕೆ ಆಗಲ್ಲ ಅಂತಾ ಚಿರಂಜೀವಿ, ಸುರೇಖಾ ಹೇಳ್ತಾರೆ.