ನಟ, ನಿರ್ದೇಶಕ, ನೃತ್ಯ ನಿರ್ದೇಶಕನಾಗಿ ದಕ್ಷಿಣ ಭಾರತದ ಚಿತ್ರರಂಗದಲ್ಲಿ ತುಂಬಾ ಅಭಿಮಾನಿಗಳನ್ನ ಹೊಂದಿರುವ ರಾಘವ್ ಲಾರೆನ್ಸ್ ಈಗ ಹಾರರ್ ಚಿತ್ರದಿಂದ ರಣರೋಚಕ ಕಥೆಯೊಂದಿಗೆ ಪೌರಾಣಿಕ ಚಿತ್ರವೊಂದರಲ್ಲಿ ವೀರಯೋಧನವಾಗಿ ಕಾಣಿಸಿಕೊಂಡಿದ್ದಾರೆ. 'ಮಹಾವೀರ ಕರ್ಣ' ಫಸ್ಟ್ ಲುಕ್ ಹೇಗಿದೆ?
ನಟ, ನಿರ್ದೇಶಕ, ನೃತ್ಯ ನಿರ್ದೇಶಕನಾಗಿ ದಕ್ಷಿಣ ಭಾರತದ ಚಿತ್ರರಂಗದಲ್ಲಿ ತುಂಬಾ ಅಭಿಮಾನಿಗಳನ್ನ ಹೊಂದಿರುವ ರಾಘವ್ ಲಾರೆನ್ಸ್ ಈಗ ಹಾರರ್ ಚಿತ್ರದಿಂದ ರಣರೋಚಕ ಕಥೆಯೊಂದಿಗೆ ಪೌರಾಣಿಕ ಚಿತ್ರವೊಂದರಲ್ಲಿ ವೀರಯೋಧನವಾಗಿ ಕಾಣಿಸಿಕೊಂಡಿದ್ದಾರೆ. ಚಿತ್ರದ ಫಸ್ಟ್ ಲುಕ್ ಹೊರಬಿದ್ದಿದ್ದು ಸಿನಿಪ್ರೇಕ್ಷಕರ ಕುತೂಹಲ ಕೆರಳಿಸಿದೆ.
ಮುನಿ,ಕಾಂಚನಾ, ಮುನಿ 2,ಕಾಂಚನಾ 3, ಸ್ಟೈಲ್ ಸಿನಿಮಾಗಳ ಮೂಲ ಹಾರರ್, ಡ್ಯಾನ್ಸ್ ಅಥವಾ ಆಕ್ಷನ್ ಗಳಿಗೆ ಸೈ ಎನಿಸಿಕೊಂಡಿದ್ದ ರಾಘವ್ ಲಾರೆನ್ಸ್ ಇದೀಗ ಹೊಸ ಹೊಸ ಸಾಹಸಕ್ಕೆ ಮುಂದಾಗಿದ್ದಾರೆ. ಮುಂಬರುವ ತಮ್ಮ ಪ್ಯಾನ್-ಇಂಡಿಯಾ ಚಿತ್ರದಲ್ಲಿ ಹೊಸ ಅವತಾರಣದಲ್ಲಿ ಕಾಣಿಸಿಕೊಂಡಿದ್ದಾರೆ. 'ಮಹಾವೀರ್ ಕರ್ಣ (Mahaveer Karna)’ದ ಫಸ್ಟ್ ಲುಕ್ ಬಿಡುಗಡೆಯಾಗಿದ್ದು, ಈ ಪೋಸ್ಟರ್‌ನಲ್ಲಿ ರಾಘವ ಲಾರೆನ್ಸ್ ಪೌರಾಣಿಕ ಯೋಧ ಕರ್ಣನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಇದರೊಂದಿಗೆ ಈ ಸಿನಿಮಾ ತಮಿಳು, ಕನ್ನಡ, ತೆಲುಗು ಹಿಂದಿ ಸೇರಿದಂತೆ ಬಹುಭಾಷೆಯಲ್ಲಿ ಬಿಡುಗಡೆಯಾಗಲಿದೆ. ಈ ಲೈವ್-ಆ್ಯಕ್ಷನ್ ಸಿನಿಮಾದ ಶೀರ್ಷಿಕೆ ಚಿತ್ರತಂಡ ಅಧಿಕೃತವಾಗಿ ಘೋಷಿಸಿದೆ. ಚಿತ್ರವನ್ನು ರಮೇಶ್ ವರ್ಮಾ ನಿರ್ದೇಶಿಸುತ್ತಿದ್ದು 2027ರಲ್ಲಿ ಚಿತ್ರವನ್ನು ಥಿಯೇಟರ್‌ಗಳಲ್ಲಿ ಬಿಡುಗಡೆ ಮಾಡಲು ಚಿತ್ರತಂಡ ನಿರ್ಧರಿಸಿದೆ.
24
ಮಹಾವೀರ ಕರ್ಣನಾಗಿ ರಾಘವ್ ಲಾರೆನ್ಸ್
ಫಸ್ಟ್ ಲುಕ್ ಪೋಸ್ಟರ್‌ನಲ್ಲಿ ರಾಘವ ಲಾರೆನ್ಸ್ ಸಂಪೂರ್ಣ ಪೌರಾಣಿಕ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ. ಉದ್ದನೆಯ ಕೂದಲು, ಸಾಂಪ್ರದಾಯಿಕ ಕಿವಿಯೋಲೆಗಳು, ವಿಶೇಷ ವಿನ್ಯಾಸದ ಕವಚ ಹಾಗೂ ಸೂರ್ಯನನ್ನು ಪ್ರತಿನಿಧಿಸುವ ತಿಲಕವನ್ನ ಧರಿಸಿದ್ದಾರೆ.. ರಾಜಮನೆತನದ ಯೋಧನಂತೆ ಕಾಣುವ ರಾಘವ ಲಾರೆನ್ಸ್ ಅವರ ಲುಕ್ ಸಿನಿಮಾದ ಪೌರಾಣಿಕ ಹಿನ್ನೆಲೆಯ ಅದ್ಧೂರಿತನವನ್ನು ತೋರಿಸಿದೆ. ಫಸ್ಟ್ ಲುಕ್ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿರುವ ರಾಘವ್ ಲಾರೆನ್ಸ್ ಭಾರತೀಯ ಪುರಾಣಗಳಲ್ಲಿನ ಅತ್ಯಂತ ಪ್ರಸಿದ್ಧ ಪಾತ್ರಗಳಲ್ಲಿ ಒಂದಾದ ಕರ್ಣನ ಪಾತ್ರದಲ್ಲಿ ನಟಿಸುತ್ತಿರುವುದಕ್ಕೆ ಸಂತಸ ವ್ಯಕ್ತಪಡಿಸಿದ್ದಾರೆ.
'ನಮ್ಮ ಪುರಾಣಗಳಲ್ಲಿನ ಅತ್ಯಂತ ಜನಪ್ರಿಯ ಪೌರಾಣಿಕ ಪಾತ್ರಗಳಲ್ಲಿ ಒಂದಾದ ಕರ್ಣನ ಪಾತ್ರವನ್ನು ನಿರ್ವಹಿಸುತ್ತಿರುವುದಕ್ಕೆ ನನಗೆ ನಿಜವಾಗಿಯೂ ಸಂತೋಷವಾಗಿದೆ. ನನಗೆ ಆಶೀರ್ವಾದ ಸಿಕ್ಕಂತಾಗಿದೆ. ಈ ಸ್ಕ್ರಿಪ್ಟ್ ನನ್ನ ಬಳಿಗೆ ಬರುತ್ತದೆ ಎಂದು ನಾನು ಎಂದಿಗೂ ನಿರೀಕ್ಷಿಸಿರಲಿಲ್ಲ. ಈ ಕಥೆಯನ್ನು ನನ್ನ ಬಳಿಗೆ ತಂದ ನಿರ್ದೇಶಕ ರಮೇಶ್ ವರ್ಮಾ ಅವರಿಗೆ ಧನ್ಯವಾದಗಳು. ಇದನ್ನು ಸಾಧ್ಯವಾಗಿಸಿದ್ದಕ್ಕಾಗಿ ಅವರಿಗೆ ಕೃತಜ್ಞತೆಗಳು' ಎಂದು ಅವರು ಬರೆದುಕೊಂಡಿದ್ದಾರೆ.
34
ರಮೇಶ್ ವರ್ಮಾ ಜೊತೆ ರಾಘವ ಲಾರೆನ್ಸ್ ಮೊದಲ ಸಿನಿಮಾ
‘ಮಹಾವೀರ್ ಕರ್ಣ’ ಮೂಲಕ ರಾಘವ ಲಾರೆನ್ಸ್ ಮತ್ತು ನಿರ್ದೇಶಕ ರಮೇಶ್ ವರ್ಮಾ ಮೊದಲ ಬಾರಿಗೆ ಒಟ್ಟಿಗೆ ಕೆಲಸ ಮಾಡುತ್ತಿದ್ದಾರೆ. ರಮೇಶ್ ವರ್ಮಾ ಅವರು ಈ ಹಿಂದೆ ‘ಖಿಲಾಡಿ’ ಮತ್ತು ‘ರಾಕ್ಷಸಡು’ ಸೇರಿದಂತೆ ಹಲವು ಸಿನಿಮಾಗಳನ್ನು ನಿರ್ದೇಶಿಸಿದ್ದಾರೆ. ಮಹಾವೀರ ಕರ್ಣದಲ್ಲಿ ಪ್ರಮುಖ ಪಾತ್ರದಲ್ಲಿ ರಾಘವ ಲಾರೆನ್ಸ್ ನಟಿಸುತ್ತಿದ್ದಾರೆ. ಆದರೆ ಸಿನಿಮಾದ ಸಂಪೂರ್ಣ ತಾರಾಗಣವನ್ನು ಚಿತ್ರತಂಡ ಇನ್ನೂ ಬಹಿರಂಗಪಡಿಸಿಲ್ಲ.
ಇತರ ಪಾತ್ರಗಳು ಮತ್ತು ಸಿನಿಮಾದ ನಿರ್ಮಾಣದ ಪ್ರಮಾಣದ ಬಗ್ಗೆ ಮುಂದಿನ ದಿನಗಳಲ್ಲಿ ಹೆಚ್ಚಿನ ಮಾಹಿತಿ ಹೊರಬರುವ ನಿರೀಕ್ಷೆಯಿದೆ. ಇನ್ನು ಚಿತ್ರದ ತಾಂತ್ರಿಕ ತಂಡದಲ್ಲಿ ಹೈಬ್ರಿಡ್ ಕ್ರಿಯೇಟರ್ ರಾಮ್ಜಿ ದತ್ ಛಾಯಾಗ್ರಾಹಕರಾಗಿ, ಪ್ರವೀಣ್ ಪುಡಿ ಸಂಕಲನಕಾರರಾಗಿ, ಶ್ರೀಮಣಿ ಸಂಭಾಷಣೆ ಬರಹಗಾರರಾಗಿ ಹಾಗೂ ಜ್ಞಾನಿ ಸಂಗೀತ ನಿರ್ದೇಶಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
‘ಮಹಾವೀರ್ ಕರ್ಣ’ ಒಂದು ಪ್ಯಾನ್-ಇಂಡಿಯಾ ಸಿನಿಮಾವಾಗಿ ನಿರ್ಮಾಣವಾಗುತ್ತಿದೆ. ಹಿಂದಿ, ತೆಲುಗು, ತಮಿಳು, ಕನ್ನಡ ಮತ್ತು ಮಲಯಾಳಂ ಭಾಷೆಗಳಲ್ಲಿ ಸಿನಿಮಾ ಬಿಡುಗಡೆಯಾಗಲಿದೆ. 2027ರಲ್ಲಿ ಚಿತ್ರವನ್ನು ಥಿಯೇಟರ್‌ಗಳಲ್ಲಿ ಬಿಡುಗಡೆ ಮಾಡಲು ನಿರ್ಮಾಪಕರು ಗುರಿ ಹೊಂದಿದ್ದಾರೆ.
ರಾಘವ ಲಾರೆನ್ಸ್ ಅವರ ಮುಂಬರುವ ಸಿನಿಮಾಗಳು ಇಲ್ಲಿವೆ
ರಾಘವ ಲಾರೆನ್ಸ್ ಮಹಾವೀರ್ ಕರ್ಣ ಅಷ್ಟೇ ಅಲ್ಲದೆ ಅವರ ಹಲವು ಸಿನಿಮಾಗಳು ಶೂಟಿಂಗ್ ಹಂತದಲ್ಲಿವೆ. ಅವರ ಮುಂಬರುವ ಸಿನಿಮಾಗಳಲ್ಲಿ ಬಕ್ಕಿಯರಾಜ್ ಕಣ್ಣನ್ ನಿರ್ದೇಶನದ ‘ಬೆನ್ಜ್’ ಕೂಡ ಸೇರಿದೆ. ಈ ಸಿನಿಮಾ ಲೋಕೇಶ್ ಕನಕರಾಜ್ ಅವರ ಸಿನಿಮ್ಯಾಟಿಕ್ ಯೂನಿವರ್ಸ್‌ನ ಭಾಗವಾಗಿದ್ದು ರವಿ ಮೋಹನ್ ಮತ್ತು ನಿವಿನ್ ಪೌಲಿ ಕೂಡ ನಟಿಸುತ್ತಿದ್ದಾರೆ. ಇದರ ಜೊತೆಗೆ ರಾಘವ ಲಾರೆನ್ಸ್ ‘ಕಾಂಚನಾ 4’ ಸಿನಿಮಾದ ಮೂಲಕ ‘ಕಾಂಚನಾ’ ಫ್ರಾಂಚೈಸಿಗೆ ಮರಳುತ್ತಿದ್ದಾರೆ. ಈ ಸಿನಿಮಾದಲ್ಲಿ ಅವರು ನಟನ ಜೊತೆಗೆ ನಿರ್ದೇಶಕ ಮತ್ತು ನಿರ್ಮಾಪಕರಾಗಿಯೂ ಹಲವು ಜವಾಬ್ದಾರಿಗಳನ್ನು ನಿರ್ವಹಿಸುತ್ತಿದ್ದಾರೆ
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.