'ಶ್ರೀವಲ್ಲಿ' ಹಾಡು ಸೂಪರ್ ಹಿಟ್; ಗಾಯಕ Sid Sriram 7 ಲಕ್ಷ ಪಡೆದರಂತೆ?

Suvarna News   | Asianet News
Published : Jan 24, 2022, 04:16 PM IST

ಜನಪ್ರಿಯ ಗಾಯಕನ ಸಂಭಾವನೆ ಬಗ್ಗೆ ದೊಡ್ಡ ಚರ್ಚ. ಶ್ರೀವಲ್ಲಿ ಹಾಡಿದ ಹುಡುಗನ ಕಥೆ ಇದು....

PREV
16
'ಶ್ರೀವಲ್ಲಿ' ಹಾಡು ಸೂಪರ್ ಹಿಟ್; ಗಾಯಕ Sid Sriram 7 ಲಕ್ಷ ಪಡೆದರಂತೆ?

ದಕ್ಷಿಣ ಭಾರತ ಚಿತ್ರರಂಗದಲ್ಲಿ ಸೆನ್ಸೇಷನ್ ಕ್ರಿಯೇಟ್ ಮಾಡಿರುವ ಗಾಯಕ ಸಿದ್ಧ ಶ್ರೀರಾಮ್ (Sid Sriram) 'ಪುಷ್ಪ' ಚಿತ್ರದಲ್ಲಿ ಶ್ರೀವಲ್ಲಿ ಹಾಡಿಗೆ ಧ್ವನಿ ನೀಡುವ ಮೂಲಕ ಸಖತ್ ಜನಪ್ರಿಯತೆ ಪಡೆದುಕೊಂಡಿದ್ದಾರೆ.

26

ಕನ್ನಡ, ತೆಲುಗು ಮತ್ತು ತಮಿಳು ಸಿನಿಮಾದಲ್ಲಿ ಹಾಡಿರುವ ಶ್ರೀರಾಮ ಇದ್ದಕ್ಕಿದ್ದಂತೆ ತಮ್ಮ ಸಂಭಾವನೆ (Remuneration) ಏರಿಸಿಕೊಂಡಿದ್ದಾರೆ ಎನ್ನಲಾಗಿದೆ. 
 

36

ಎರಡು ವರ್ಷದ ಹಿಂದೆ ಶ್ರೀರಾಮ್ ಅವರ ಸಂಭಾವನೆ 4-5ಲಕ್ಷ ರೂ ಇತ್ತಂತೆ, ಅಲ್ಲು ಅರ್ಜುನ್ (Allu Arjun) ಸಿನಿಮಾ ಹಾಡಿಗೆ ಸಂಭಾವನೆ ಏರಿಸಿಕೊಂಡಿದ್ದಾರೆ.

46

'ನೋಟ ಬಂಗಾರವಾಯಿತೇ ಶ್ರೀವಲ್ಲಿ..' ಹಾಡಿಗೆ ಧ್ವನಿ ನೀಡಿ ಸಿದ್ ಶ್ರೀರಾಮ್ 6-7 ಲಕ್ಷ ರೂ. ಸಂಭಾವನೆ ಪಡೆದು ಕೊಂಡಿದ್ದಾರೆ. ಹೀಗಾಗಿ ಮುಂದಿನ ಸಿನಿಮಾಗಳ ಹಾಡಿಗೆ ಇನ್ನೂ ಹೆಚ್ಚು ಡಿಮ್ಯಾಂಡ್ ಮಾಡಲಿದ್ದಾರೆ,ಎನ್ನಬಹುದು. 

56

ರಶ್ಮಿಕಾ ಮಂದಣ್ಣ (Rashmika Mandanna) ಮತ್ತು ವಿಜಯ್ ದೇವರಕೊಂಡ (Vijay Deverakonda) ಅವರ ಡಿಯರ್ ಕಾಮ್ರೇಡ್ ಕನ್ನಡ ಸಿನಿಮಾಗೆ 'ಕಡಲಂತೆ ಕಾದ ಕಣ್ಣು' ಹಾಡಿಗೆ ಮೊದಲ ಬಾರಿ ಧ್ವನಿಯಾಗಿದ್ದರು. 

66
sid sriram

ಇದಾಗ ಮೇಲೆ ಟಾಮ್ ಆ್ಯಂಡ್ ಜೆರಿ ಚಿತ್ರದ 'ಹಾಯಾಗಿದೆ' ಹಾಡು, ಭಜರಂಗಿ 2 (Bhajarangi 2) ಚಿತ್ರದಲ್ಲಿ 'ನೀ ಸಿಗೋವರೆಗೂ' ಮತ್ತು ಲವ್ ಯೂ ರಚ್ಚು ಸಿನಿಮಾದಲ್ಲಿ 'ಮುದ್ದು ನೀನು' ಹಾಡು ಹಾಡಿದ್ದಾರೆ.

Read more Photos on
click me!

Recommended Stories