ಅ್ಯನಿಮಲ್‌ನಲ್ಲಿ ಬೆತ್ತಲಾದ ತೃಪ್ತಿಗೆ ಪುಷ್ಪಾ 2ನಲ್ಲೂ ಆಫರ್, ಮತ್ತೆ ರಶ್ಮಿಕಾ-ದಿಮ್ರಿ ಕಾಂಬಿನೇಷನ್!

First Published May 23, 2024, 7:36 PM IST

ಆ್ಯನಿಮಲ್ ಚಿತ್ರಕ್ಕಾಗಿ ಬೆತ್ತಲಾದ ನಟಿ ತೃಪ್ತಿ ದಿಮ್ರಿಗೆ ಇದೀಗ ಅಲ್ಲು ಅರ್ಜುನ್ ಅಭಿನಯದ ಪುಷ್ಪಾ 2 ಚಿತ್ರದಿಂದ ಭರ್ಜರಿ ಆಫರ್ ಬಂದಿದೆ. ಮತ್ತೆ ರಶ್ಮಿಕಾ ಮಂದಣ್ಣ ಹಾಗೂ ತೃಪ್ತಿ ದಿಮ್ರಿ ಕಾಂಬಿನೇಷನ್ ಹೊಸ ಸಂಚಲನ ಸೃಷ್ಟಿಸಲು ರೆಡಿಯಾಗಿದೆ. 
 

ಭಾರಿ ಸಂಚಲನ ಸೃಷ್ಟಿಸಿದ ಆ್ಯನಿಮಲ್ ಚಿತ್ರ ಹಲವು ದಾಖಲೆ ಸೃಷ್ಟಿಸಿದೆ. ಈ ಚಿತ್ರದಲ್ಲಿ ಬೆತ್ತಲಾಗಿ ಬೋಲ್ಡ್ ದೃಶ್ಯಗಳಲ್ಲಿ ನಟಿಸಿದ ತೃಪ್ತಿ ದಿಮ್ರಿಗೆ ಇದೀಗ ಪುಷ್ಪಾ 2 ಚಿತ್ರದಿಂದಲೂ ಭರ್ಜರಿ ಆಫರ್ ಬಂದಿದೆ.

ಬಹುನಿರೀಕ್ಷಿತ ಅಲ್ಲು ಅರ್ಜುನ್ ಹಾಗೂ ರಶ್ಮಿಕಾ ಮಂದಣ್ಣ ಜೋಡಿಯ ಪುಷ್ಪಾ 2 ಚಿತ್ರ ತೆರೆಗೆ ಅಪ್ಪಳಿಸಲು ಸಜ್ಜಾಗಿದೆ. ಈ ಚಿತ್ರದಲ್ಲಿ ತೃಪ್ತಿ ದಿಮ್ರಿ ಹಾಟ್ ಆಗಿ ಕಾಣಿಸಿಕೊಳ್ಳಲಿದ್ದಾರೆ ಎಂದು ಮೂಲಗಳು ಹೇಳುತ್ತಿದೆ.
 

ಪುಷ್ಪಾ 2 ಚಿತ್ರದಲ್ಲಿನ ಸ್ಪೆಷಲ್ ಡ್ಯಾನ್ಸ್‌ಗೆ  ತೃಪ್ತಿ ದಿಮ್ರಿ ಆಯ್ಕೆಯಾಗಿದ್ದಾರೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿದೆ. ಪುಷ್ಪಾ 1ರಲ್ಲಿ ಇದೇ ರೀತಿ ಸ್ಪೆಷಲ್ ಅಪಿಯರನ್ಸ್‌ನಲ್ಲಿ ನಟಿ ಸಮಂತಾ ಕಾಣಿಸಿಕೊಂಡಿದ್ದರು.

ಪುಷ್ಪಾ 2ನಲ್ಲಿ ಸ್ಪೆಷಲ್ ಡ್ಯಾನ್ಸ್‌ಗಾಗಿ ಚಿತ್ರತಂಡ ಭಾರಿ ಸಂಚಲನ ಸೃಷ್ಟಿಸಿರುವ ತೃಪ್ತಿ ದಿಮ್ರಿ ಆಯ್ಕೆ ಮಾಡಿದೆ ಎಂದು ವರದಿ ಹೇಳುತ್ತಿದೆ. ಇದೀಗ ಅಭಿಮಾನಿಗಳ ಕುತೂಹಲ ಡಬಲ್ ಆಗಿದೆ.
 

ಅಲ್ಲು ಅರ್ಜುನ್ ಹಾಗೂ ತೃಪ್ತಿ ದಿಮ್ರಿ ಫೈಯರ್ ಡ್ಯಾನ್ಸ್ ಎಲ್ಲಾ ದಾಖಲೆ ಉಡೀಸ್ ಮಾಡುವ ಸಾಧ್ಯತೆ ಇದೆ. ಈ ಸ್ಪೆಷಲ್ ಡ್ಯಾನ್ಸ್‌ನಲ್ಲಿ ತೃಪ್ತಿ ದಿಮ್ರಿ ಕಾಸ್ಟ್ಯೂಮ್ ಕುರಿತು ಯಾವುದೇ ಮಾಹಿತಿ ಬಹಿರಂಗಗೊಂಡಿಲ್ಲ.

2022ರಲ್ಲಿ ಪುಷ್ಪಾ ಚಿತ್ರ ಬಿಡುಗಡೆಯಾಗಿತ್ತು. ಭಾರತದಲ್ಲಿ ಪುಷ್ಪಾ ಹೊಸ ಅಲೆ ಸೃಷ್ಟಿಸಿತ್ತು. ಹೀಗಾಗಿ ಪುಷ್ಪಾ 2 ಮೇಲಿನ ನಿರೀಕ್ಷೆಗಳು ಹೆಚ್ಚಾಗಿದೆ. ಇದರ ಬೆನ್ನಲ್ಲೇ ಚಿತ್ರಕ್ಕೆ ತೃಪ್ತಿ ದಿಮ್ರಿ ಸೇರಿಕೊಳ್ಳುತ್ತಿದ್ದಾರೆ ಅನ್ನೋ ಸುದ್ದಿ ಅಭಿಮಾನಿಗಳ ಸಂಭ್ರಮ ಡಬಲ್ ಮಾಡಿದೆ.

ಆ್ಯನಿಮಲ್ ಚಿತ್ರದಲ್ಲಿ ತೃಪ್ತಿ ಬೆತ್ತಲಾಗಿ ನಟಿಸಿದ್ದರು. ತೃಪ್ತಿ ಅಭಿನಯಕ್ಕೆ ಭಾರತವೇ ಫಿದಾ ಆಗಿತ್ತು. ಇದೀಗ ರಶ್ಮಿಕಾ ಮಂದಣ್ಣ ಹಾಗೂ ತೃಪ್ತಿ ದಿಮ್ರಿ ಕಾಂಬಿನೇಷನ್ ಮತ್ತೆ ತೆರೆ ಮೇಲೆ ಕಾಣಿಸಿಕೊಳ್ಳಲಿದೆ.
 

ಪುಷ್ಪಾ 2 ಚಿತ್ರದ ಶೂಟಿಂಗ್ ಅಂತಿಮ ಘಟ್ಟದಲ್ಲಿದೆ. ಪೋಸ್ಟ್ ಪ್ರೊಡಕ್ಷನ್ ಶೀಘ್ರದಲ್ಲೇ ಆರಂಭಗೊಳ್ಳಲಿದೆ. ಆಗಸ್ಟ್ 15ರಂದು ಪುಷ್ಪಾ 2 ದೇಶ ವಿದೇಶಗಳಲ್ಲಿ ಬಿಡುಗಡೆಯಾಗಲಿದೆ.

Latest Videos

click me!