ಪತಿಯ ಮಾಜಿ ಪ್ರೇಯಸಿ ದೀಪಿಕಾ ಪಡುಕೋಣೆ ಬೇಬಿ ಬಂಪ್ ಮತ್ತು ನಡಿಗೆ ಟ್ರೋಲ್ ಮಾಡಿದವರಿಗೆ ಆಲಿಯಾ ಭಟ್ ಕ್ಲಾಸ್!

First Published | May 23, 2024, 12:53 PM IST

ದೀಪಿಕಾ ಪಡುಕೋಣೆಯ ಮಾಜಿ ಪ್ರಿಯಕರ ರಣಬೀರ್ ಕಪೂರ್ ಪತ್ನಿಯಾಗಿದ್ದರೂ ಆಲಿಯಾ ಭಟ್, ದೀಪ್ಸ್‌ಳ ಬೇಬಿ ಬಂಪ್ ಟ್ರೋಲ್ ಮಾಡಿದವರಿಗೆ ಸರಿಯಾಗಿ ಕ್ಲಾಸ್ ತೆಗೆದುಕೊಂಡಿದ್ದಾಳೆ. 

ಸಾಮಾನ್ಯವಾಗಿ ಪತಿಯ ಮಾಜಿ ಲವರ್ ಎಂದರೆ ಆಕೆಯನ್ನು ಸಾಧ್ಯವಾದಷ್ಟು ದೂರವಿಟ್ಟು, ಮುಖ ನೋಡಿದ್ರೆ ಉರಿದು ಬೀಳೋ ಹೆಣ್ಮಕ್ಕಳೇ ಜಾಸ್ತಿ.

ಆದ್ರೆ ಇಲ್ಲಿ ನೋಡಿ, ಪತಿ ರಣಬೀರ್ ಕಪೂರ್ ಮಾಜಿಯಾಗಿದ್ದರೂ, ಆತ ಕೈಕೊಟ್ಟು ದೀಪಿಕಾ ಖಿನ್ನತೆಯನ್ನೆಲ್ಲ ಅನುಭವಿಸಿ ಗೆದ್ದಿದ್ದರೂ, ಆಲಿಯಾ ಭಟ್ ಮಾತ್ರ ದೀಪಿಕಾಳನ್ನು ಟ್ರೋಲ್ ಮಾಡಿದವರಿಗೆ ಉಗಿದು ಉಪ್ಪಿನಕಾಯಿ ಹಾಕಿ, ಪತಿಯ ಮಾಜಿ ಗೆಳತಿಯ ಪರ ನಿಂತಿದ್ದಾಳೆ. 

Tap to resize

ಹೌದು, ಈ ವಾರದ ಆರಂಭದಲ್ಲಿ ದೀಪಿಕಾ ಪಡುಕೋಣೆ ಪತಿ ರಣವೀರ್ ಸಿಂಗ್ ಜೊತೆ ಮತ ಚಲಾಯಿಸಲು ಮತಗಟ್ಟೆಗೆ ಬಂದಿದ್ದಳು. ಈ ಸಂದರ್ಭದಲ್ಲಿ ಆಕೆಯ ಬೇಬಿ ಬಂಪ್ ಮೊದಲ ಬಾರಿಗೆ ಎಲ್ಲರ ಕಣ್ಣಿಗೆ ಬಿತ್ತು. ಜೊತೆಗೆ, ಆಕೆ ಸಹಜವಾಗಿಯೇ ಗರ್ಭಿಣಿಯಾದ್ದರಿಂದ ವಿಭಿನ್ನವಾದ ನಡಿಗೆ ಹೊಂದಿದ್ದಳು. 

ಆದರೆ, ಅರೆ ತಿಳಿವಳಿಕೆಯ ಕೆಲ ನೆಟ್ಟಿಗರಿಗೆ ಇಷ್ಟೇ ಸಾಕಾಯಿತು. ಅವರು ದೀಪಿಕಾಳ ಬೇಬಿ ಬಂಪನ್ನೂ ಜೊತೆಗೆ ಆಕೆಯ ನಡಿಗೆ ಶೈಲಿಯನ್ನೂ ಆಡಿಕೊಳ್ಳತೊಡಗಿದರು. ಆ ಬಗ್ಗೆ ಹಲವು ಟ್ರೋಲ್‌ಗಳು ಹುಟ್ಟಿಕೊಂಡವು. 

ಸೋಷ್ಯಲ್ ಮೀಡಿಯಾದ ಈ ಅಸೂಕ್ಷ್ಮ ನಡತೆ ಸಾಮಾನ್ಯವೇ ಆಗಿದ್ದರೂ, ಈ ಬಾರಿ ಇದನ್ನೆಲ್ಲ ನೋಡಿಕೊಂಡು ಸುಮ್ಮನೆ ಇರಲು ಆಲಿಯಾ ಭಟ್ ಮನಸ್ಸು ಒಪ್ಪಿಲ್ಲ. 

ಗರ್ಭಿಣಿಯೊಬ್ಬಳನ್ನು ಟ್ರೋಲ್ ಮಾಡುವ ಕೀಳು ಮಟ್ಟದ ಮನಸ್ಥಿತಿ ಆಕೆಯನ್ನು ಕೆರಳಿಸಿದೆ. 'ಆತ್ಮೀಯ ಸಾಮಾಜಿಕ ಮಾಧ್ಯಮ, ದೀಪಿಕಾ ಪಡುಕೋಣೆ ತನ್ನ ಕರ್ತವ್ಯ ಮತ್ತು ಮತ ಚಲಾಯಿಸಲು ಹೊರ ಬಂದಿದ್ದಳು. ಆಕೆಯ ದೇಹ ಅಥವಾ ಆಕೆಯ ಗರ್ಭಧಾರಣೆಯ ಬಗ್ಗೆ ನಿಮ್ಮ ಪ್ರತಿಕ್ರಿಯೆಯನ್ನು ಅವಳು ಕೇಳಲಿಲ್ಲ. ಅವಳ ಜೀವನದ ಯಾವುದೇ ಅಂಶದ ಬಗ್ಗೆ ಪ್ರತಿಕ್ರಿಯಿಸಲು ನಿಮಗೆ ಯಾವುದೇ ಹಕ್ಕಿಲ್ಲ. ನಿಲ್ಲಿಸಿ. ಸರಿಯಾಗಿ ವರ್ತಿಸಿ' ಎಂದು ಕೋಪದಿಂದ ಟ್ರೋಲಿಗರಿಗೆ ಕ್ಲಾಸ್ ತೆಗೆದುಕೊಂಡಿದ್ದಾಳೆ.

ರಣಬೀರ್ ಕಪೂರ್ ಜೊತೆ ದೀಪಿಕಾ ಪಡುಕೋಣೆ, ಕತ್ರೀನಾ ಕೈಫ್ ಡೇಟಿಂಗ್ ಇತಿಹಾಸದ ಹೊರತಾಗಿಯೂ, ಆಲಿಯಾ ಭಟ್ ಅವರೊಂದಿಗೆ ಸೌಹಾರ್ದಯುತ ಬಾಂಧವ್ಯವನ್ನು ಉಳಿಸಿಕೊಂಡಿದ್ದಾರೆ. ಈ ಹಿಂದೆ ಕಾಫಿ ವಿತ್ ಕರಣ್ ಶೋದಲ್ಲಿ 'ನನ್ನ ಸಂಗಾತಿಯ ಮಾಜಿಗಳ ಜೊತೆ ಸ್ನೇಹಿತರಾಗಿ ಉಳಿಯುವುದು ಹೇಗೆ ಎಂದು ನನಗೆ ತಿಳಿದಿದೆ. ನಾನು ಅವನ ಮಾಜಿಗಳೊಂದಿಗೆ ತುಂಬಾ ಒಳ್ಳೆಯ ಸ್ನೇಹದಿಂದ ಇದ್ದೇನೆ. ನಾನು ಅವರಿಬ್ಬರನ್ನೂ ಪ್ರೀತಿಸುತ್ತೇನೆ' ಎಂದಿದ್ದರು. 

ಆಲಿಯಾಳ ಈ ನಡೆ ವ್ಯಾಪಕ ಮೆಚ್ಚುಗೆಗೆ ಪಾತ್ರವಾಗಿದೆ. ಎಲ್ಲ ಹೆಣ್ಣುಮಕ್ಕಳೂ ಹೀಗೆ ಒಬ್ಬರಿಗೊಬ್ಬರು ಬೆಂಬಲವಾಗಿ ನಿಂತರೆ ಸಮಾಜದ ಚಿತ್ರಣವೇ ಬದಲಾಗುತ್ತದೆ ಎಂದು ಸಾಕಷ್ಟು ಜನ ಹೇಳುತ್ತಿದ್ದಾರೆ. 

ಅಂದ ಹಾಗೆ ಫೆಬ್ರವರಿ 29, 2024 ರಂದು, ದೀಪಿಕಾ ಪಡುಕೋಣೆ ಮತ್ತು ರಣವೀರ್ ಸಿಂಗ್ ಅವರು ತಮ್ಮ ಐಜಿ ಹ್ಯಾಂಡಲ್‌‌ಗಳಲ್ಲಿ ತಾವು ಪೋಷಕರಾಗುತ್ತಿರುವುದನ್ನು ಘೋಷಿಸಿದ್ದರು. ಸೆಪ್ಟೆಂಬರ್ 2024 ರಲ್ಲಿ ತಮ್ಮ ಮಗು ಜಗತ್ತಿಗೆ ಕಾಲಿಡಲಿದೆ ಎಂದವರು ತಿಳಿಸಿದ್ದರು. 

Latest Videos

click me!