ಐಶ್ವರ್ಯಾ ರೈ ಬ್ಯೂಟಿಗೆ ಕಾರಣವಂತೆ ಕೇರಳ ಆಯುರ್ವೇದಿಕ್ ಪ್ರಾಡೆಕ್ಟ್?
First Published | May 27, 2020, 6:20 PM ISTಬಾಲಿವುಡ್‌ನ ನಟಿ ಐಶ್ವರ್ಯಾ ತನ್ನ ಸೌಂದರ್ಯದಿಂದನೇ ಹೆಚ್ಚು ಫೇಮಸ್. ಎವರ್‌ಗ್ರೀನ್ ಸುಂದರಿ ಐಶ್ವರ್ಯಾ ರೈಯ ಬ್ಯೂಟಿಗೆ ಮನಸೋಲದವರು ಯಾರು? ಈ ಭುವನ ಸುಂದರಿಯಂತೆ ಚೆಂದ ಕಾಣುವ ಕನಸು ಎಲ್ಲರಿಗೂ. ಕೊನೆಗೂ ಈ ಬೆಡಗಿಯ ಚೆಲುವಿನ ಗುಟ್ಟು ಬಯಲಾಗಿದೆ. ಐಶ್ವರ್ಯಾ ರೈ ಬ್ಯೂಟಿಗೆ ಕೇರಳದ ಆಯುರ್ವೇದ ಪ್ರಾಡೆಕ್ಟ್ ಕಾರಣ ಎಂಬ ವರದಿಯೊಂದು ಹೊರಬಿದ್ದಿದೆ.ಮುಂಬೈ ಮಿರರ್‌ನಲ್ಲಿ ಪ್ರಕಟವಾದ ವರದಿಯಲ್ಲಿ, ಐಶ್ವರ್ಯಾ ರೈ ಕೇರಳದಿಂದ ಆಯುರ್ವೇದ ಸ್ಲಿಮ್ಮಿಂಗ್ ಮತ್ತು ಟೋನಿಂಗ್ ತೈಲ ಉತ್ಪನ್ನಗಳನ್ನು ತುಂಬಿದ ಪೆಟ್ಟಿಗೆಯನ್ನು ರಹಸ್ಯವಾಗಿ ಆರ್ಡರ್ ಮಾಡುತ್ತಾರೆ ಎಂದು ಹೇಳಲಾಗಿದೆ.