ಸಂಬಳದ ಬದಲು ಪತ್ನಿಯ ತಾಳಿ ಕೊಟ್ಟ ನಿರ್ಮಾಪಕ : ಗಾಬರಿಯಾಗಿ ಇಳಯರಾಜ ಮಾಡಿದ್ದೇನು?

Published : Feb 02, 2025, 02:48 PM IST

ಸಿನಿಮಾ ಲೋಕವೇ ಹಾಗೆ, ಮಾಡಿದ ಸಿನಿಮಾ ಕೈ ಹಿಡಿಯಲಿಲ್ಸಂಲವೆಂದರೆ ಭಿಕ್ಷುಕನಾಗುವಂತಹ ಸ್ಥಿತಿಯೂ ಬರಬಹುದು. ಅದೇ ರೀತಿ ತಮಿಳಿನ ನಿರ್ಮಾಪಕರೊಬ್ಬರು ತಮ್ಮ ಸಿನಿಮಾಗೆ ಸಂಗೀತ ನೀಡಿದ್ದ  ಇಳಯರಾಜಾಗೆ ಸಂಬಳ ಕೊಡೋಕೆ ಕೈಯಲ್ಲಿ ದುಡ್ಡಿಲ್ಲದ್ದರಿಂದ ಹೆಂಡತಿಯ ತಾಳಿಯನ್ನೇ ಕೊಡೋಲು ಬಂದಿದ್ದರಂತೆ...

PREV
15
ಸಂಬಳದ ಬದಲು ಪತ್ನಿಯ ತಾಳಿ ಕೊಟ್ಟ ನಿರ್ಮಾಪಕ : ಗಾಬರಿಯಾಗಿ ಇಳಯರಾಜ ಮಾಡಿದ್ದೇನು?
ಸಂಗೀತ ಮಾಂತ್ರಿಕ ಇಳಯರಾಜಾ

ತಮಿಳಿನ ಅನ್ನಕಿಲಿ ಸಿನಿಮಾದಿಂದ ಶುರುವಾಗಿ, ತಮ್ಮ ಸಂಗೀತದಿಂದಲೇ 49 ವರ್ಷಗಳಿಂದ ತಮಿಳು ಸೇರಿದಂತೆ ವಿವಿಧ ಭಾಷೆಗಳ ಸಿನಿಮಾ ಪ್ರೇಕ್ಷಕರನ್ನು ಮೋಡಿ ಮಾಡ್ತಿರೋರು ಇಳಯರಾಜಾ. ಅವರ ಸಂಗೀತಕ್ಕೆ ಮರುಳಾಗದವರೇ ಇರೋಕೆ ಸಾಧ್ಯವಿಲ್ಲ. ಅವರ ಸಂಗೀತದ ಹಾಡುಗಳು ಕಾಲಾತೀತವಾಗಿ ಇಂದಿಗೂ ಕಿವಿಗೆ ಮುದ ನೀಡುತ್ತಾ ಈ ತಲೆಮಾರಿನ ಜನರು ಕೂಡ ಅದನ್ನು ಮೆಚ್ಚುತ್ತಿದ್ದಾರೆ. ಸಂಗೀತಕ್ಕಾಗಿಯೇ ತಮ್ಮ ಜೀವನವನ್ನೇ ಮುಡಿಪಾಗಿಟ್ಟವರು ಇಳಯರಾಜಾ ಅನ್ನೋದು ಸತ್ಯ.

25
ಸಂಬಳ ಪಡೆಯದೇ ಕೆಲಸ ಮಾಡಿದ ಇಳಯರಾಜ

ಆದರೆ ಇಳಯರಾಜಾ ಬಗ್ಗೆ ಹಲವು ಟೀಕೆಗಳು ಬಂದಿದ್ದರಿಂದ, ಅವರು ಮಾಡಿದ ಹಲವು ಒಳ್ಳೆಯ ಕೆಲಸಗಳು ಹೊರಗೆ ಗೊತ್ತಾಗ್ತಿಲ್ಲ. ಆ ಕಾಲದಲ್ಲಿ ಮುಂಚೂಣಿಯ ಸಂಗೀತ ನಿರ್ದೇಶಕರಾಗಿದ್ದ ಇಳಯರಾಜಾ, ಹಲವು ಸಿನಿಮಾಗಳಿಗೆ ಸಂಬಳವನ್ನೇ ಪಡೆಯದೆ ಸಂಗೀತ ಸಂಯೋಜಿಸಿದ್ದಾರೆ. ನಿರ್ಮಾಪಕರ ಕಷ್ಟಗಳನ್ನು ಅರ್ಥ ಮಾಡಿಕೊಂಡು ಉಚಿತವಾಗಿ ಸಂಗೀತ ನೀಡಿದ ಸಿನಿಮಾಗಳು ತುಂಬಾನೇ ಇವೆ. ಅದರಲ್ಲಿ ಒಂದು ಸಿನಿಮಾ ಬಗ್ಗೆ ಇತ್ತೀಚಿನ ಸಂದರ್ಶನದಲ್ಲಿ ಅವರೇ ಹೇಳಿದ್ದಾರೆ.

35
ಇಳಯರಾಜಾಗೆ ತಾಳಿ ಕೊಟ್ಟ ನಿರ್ಮಾಪಕ

ಇಳಯರಾಜಾ ಒಂದು ಮಲಯಾಳಂ ಸಿನಿಮಾಗೆ ಸಂಗೀತ ಸಂಯೋಜಿಸಿದ್ದರಂತೆ. ಆ ಸಿನಿಮಾ ಬಿಡುಗಡೆಯಾಗುವ ಸಮಯದಲ್ಲಿ, ಆ ಸಿನಿಮಾದ ನಿರ್ಮಾಪಕರು ಇಳಯರಾಜಾರನ್ನು ಭೇಟಿ ಮಾಡಿದ್ದರಂತೆ. ಅವರ ಬಳಿ 'ಏನೋ ಈ ಕಡೆ' ಬಂದಿದ್ದಿಯಾ ಅಂತ ಇಳಯರಾಜಾ ಕೇಳಿದ್ದಕ್ಕೆ, ನಿರ್ಮಾಪಕರು 'ಸರ್ ನನ್ನ ಸಿನಿಮಾ ಬಿಡುಗಡೆಯಾಗ್ತಿದೆ. ನಿಮಗೆ ಸಂಬಳ ಕೊಡೋಕೆ ನನ್ನ ಹತ್ರ ದುಡ್ಡಿಲ್ಲ. ಹಾಗಾಗಿ ಇದನ್ನು ಇಟ್ಕೊಳ್ಳಿ' ಅಂತ ಒಂದು ವಸ್ತುವನ್ನು ಕೊಟ್ಟರಂತೆ.

45
ನಿರ್ಮಾಪಕರಿಗೆ ಚೆನ್ನಾಗಿ ಬೈದ ಇಳಯರಾಜಾ

ಅದೇನಂತ ತೆರೆದು ನೋಡಿದ ತಕ್ಷಣ ಇಳಯರಾಜಾಗೆ ಟೆನ್ಷನ್ ಆಗಿಬಿಟ್ಟಿತಂತೆ. ಯಾಕಂದ್ರೆ, ಆ ನಿರ್ಮಾಪಕರು ತಮ್ಮ ಹತ್ರ ದುಡ್ಡಿಲ್ಲದ್ದರಿಂದ ಹೆಂಡತಿಯ ತಾಳಿಯನ್ನೇ ತಂದು ಕೊಟ್ಟಿದ್ದರಂತೆ. ಇದರಿಂದ ಕೋಪಗೊಂಡ ಇಳಯರಾಜಾ, 'ಮೊದಲು ಅದನ್ನು ತಗೊಂಡು ಇಲ್ಲಿಂದ ಹೊರಟು ಹೋಗು' ಅಂತ ಹೇಳಿದ್ರಂತೆ.

 

55

ಅದಕ್ಕೆ ಆ ನಿರ್ಮಾಪಕರು 'ಇದನ್ನು ಇಟ್ಕೊಳ್ಳಿ ಸರ್' ಅಂತ ಹೇಳಿದ ತಕ್ಷಣ 'ಹೊರಗೆ ಹೋಗು' ಅಂತ ಚೆನ್ನಾಗಿ ಬೈದು ಆ ನಿರ್ಕಮಾಪಕನನ್ನು ಅಲ್ಲಿಂದ ಕಳಿಸಿಬಿಟ್ಟರಂತೆ ಇಳಯರಾಜ, ಇತ್ತೀಚಿನ ಸಂದರ್ಶನವೊಂದಲ್ಲಿ ಇಳಯರಾಜ ಈ ವಿಚಾರವನ್ನು ನೆನೆದಿದ್ದಾರೆ. 

Read more Photos on
click me!

Recommended Stories