ನಯನತಾರ ಮಕ್ಕಳ ದಾದಿಯರಿಗೂ ನಿರ್ಮಾಪಕರು ಕೊಡ್ಬೇಕಂತೆ ಸಂಬಳ …. ಮತ್ತೊಂದು ವಿವಾದದಲ್ಲಿ ಲೇಡಿ ಸೂಪರ್ ಸ್ಟಾರ್!

First Published | Oct 9, 2024, 1:24 PM IST

ಸಿನಿಮಾರಂಗದ ಲೇಡಿ ಸೂಪರ್ ಸ್ಟಾರ್ ಎಂದೇ ಖ್ಯಾತಿ ಪಡೆದಿರುವ ನಯನತಾರ ವಿರುದ್ಧ ನಿರ್ಮಾಪಕರೊಬ್ಬರು ಗಂಭೀರ ಆರೋಪ ಮಾಡಿದ್ದು, ನಟಿ ಶೂಟಿಂಗ್ ಬರುವಾಗ ತಮ್ಮ ಜೊತೆ ಬರುವ ಮಕ್ಕಳ ದಾದಿಯರಿಗೂ ನಿರ್ಮಾಪಕರೇ ಸಂಬಳ ನೀಡಬೇಕೆಂದು ಬೇಡಿಕೆ ಇಡ್ತಾರಂತೆ. 
 

ಚಿತ್ರರಂಗದಲ್ಲಿ ಲೇಟಿ ಸೂಪರ್ ಸ್ಟಾರ್ (Lady Superstar) ಎಂದೇ ಖ್ಯಾತಿ ಪಡೆದಿರುವ ನಟಿ ನಯನತಾರಾ ಮತ್ತು ನಿರ್ದೇಶಕ ವಿಘ್ನೇಶ್ ಶಿವನ್ ಅವರ ವಿವಾಹದ ವೀಡಿಯೊವನ್ನು ನೆಟ್‌ಫ್ಲಿಕ್ಸ್‌ಗೆ 25 ಕೋಟಿ ರೂಪಾಯಿಗಳಿಗೆ ಮಾರಾಟ ಮಾಡಲಾಗಿದ್ದು, ಭಾರಿ ಸುದ್ದಿಯಾಗಿದ್ದು, ಇದೀಗ ಇನ್ನೊಂದು ವಿಷ್ಯ ಭಾರಿ ಸದ್ದು ಮಾಡ್ತಿದೆ. 
 

Nayanthara

ನಟಿ ನಯನತಾರಾಗೆ (Nayanthara) ವಿವಾದಗಳು ಹೊಸತೇನಲ್ಲ, ಹಲವು ವರ್ಷಗಳಿಂದ ಹಲವು ವಿವಾದಗಳಿಂದ ಸುತ್ತುವರಿದುಕೊಂಡೇ ಇದ್ದಾರೆ ನಯನತಾರ. ಸಿಂಬು ಜೊತೆಗಿನ ಲವ್ ಬ್ರೇಕ್ ಅಪ್ ವಿವಾದ, ಬಾಡಿಗೆ ತಾಯ್ತನದ ವಿವಾದ, ದೇವಸ್ಥಾನಕ್ಕೆ ಚಪ್ಪಲ್ ಧರಿಸಿದ ವಿವಾದ, ಸಿನಿಮಾ ಪ್ರಚಾರಕ್ಕೆ ಬಾರದೇ ಇರುವ ವಿವಾದ, ಅನ್ನಪೂರ್ಣೈ ಸಿನಿಮಾ ವಿವಾದ. ಹೀಗೆ ಹಲವಾರು ವಿವಾದಕ್ಕೆ ನಟಿ ಸಿಲುಕಿದ್ದಾರೆ. 
 

Tap to resize

ಇದೀಗ ತಮಿಳು ಸಿನಿಮಾ ನಿರ್ಮಾಪಕ ಹಾಗೂ ಯೂಟ್ಯೂಬರ್ ಅಂತನನ್ (Producer and Youtuber Ananthan) ನಯನತಾರ ಮೇಲೆ ಗರಂ ಆಗಿದ್ದು, ನಟಿಯ ವರ್ಕ್ ಲೈಫ್ ಬಗ್ಗೆ ಕಾಮೆಂಟ್ ಮಾಡಿದ್ದಾರೆ. ನಯನತಾರ ಶೂಟಿಂಗ್ ಸೆಟ್‌ಗೆ ಏಳೆಂಟು ಜನ ಸಹಾಯಕರನ್ನು ಕರೆದುಕೊಂಡು ಬರ್ತಾರೆ ಅವರಿಗೆಲ್ಲಾ ನಿರ್ಮಾಪಕರು ಸಂಭಾವನೆ ಕೊಡಬೇಕು ಎಂದು ಹಿಂದೆ ಹೇಳಿದ್ದರು. ಇದೀಗ ಅದೇ ರೀತಿಯ ಮತ್ತೊಂದು ಆರೋಪ ಮಾಡಿದ್ದಾರೆ. 
 

Nayanthara

ಸಂದರ್ಶನವೊಂದರಲ್ಲಿ ನಿರ್ಮಾಪಕ ಅಂತನನ್ ಮಾತನಾಡಿ ನಯನತಾರ ಸಿನಿಮಾ ಚಿತ್ರೀಕರಣದ ಸೆಟ್‌ಗೆ ತಮ್ಮ ಮಕ್ಕಳ ಜೊತೆ ಇಬ್ಬರು ದಾದಿಯರನ್ನು ಕರೆತರುತ್ತಾರೆ, ಇಬ್ಬರು ದಾದಿಯರಿಗೆ ನಿರ್ಮಾಪಕರೇ ಸಂಬಳ ಕೊಡಬೇಕು ಎಂದು ಒತ್ತಾಯಿಸುತ್ತಾರೆ. ಇದರಲ್ಲಿ ನ್ಯಾಯ ಇದ್ಯಾ? ಆಕೆ ತನ್ನ ಮಕ್ಕಳನ್ನು ನೋಡಿಕೊಳ್ಳಲು ದಾದಿಯರನ್ನು ಕರೆತಂದರೆ ಆಕೆ ಸಂಬಳ ಕೊಡಬೇಕು ಅಲ್ಲವೇ? ನಿರ್ಮಾಪಕರು ಯಾಕೆ ಕೊಡಬೇಕು?" ಎಂದು ಪ್ರಶ್ನಿಸಿದ್ದಾರೆ.
 

Nayanthara

ಅಷ್ಟೇ ಅಲ್ಲ ನಯನತಾರಾ ತನ್ನ ಜೀವನದ ವೈಯಕ್ತಿಕ ಅಂಶಗಳಿಗಾಗಿ ಹಣಗಳಿಸಿದ್ದಕ್ಕಾಗಿ ಕೂಡ ಅಂತನನ್ ಟೀಕಿಸಿದರು, ಅವರು ತಮ್ಮ ಸ್ವಂತ ಮದುವೆಯ ವಿಡೀಯೋವನ್ನು ನೆಟ್ ಫ್ಲಿಕ್ಸ್ ಗೆ ದೊಡ್ಡ ಮೊತ್ತಕ್ಕೆ ಮಾರಾಟ ಮಾಡಿರೋದಕ್ಕೂ ಅಂತನನ್ ಕಿಡಿಕಾರಿದ್ದಾರೆ. 
 

Nayanthara

ನಯನತಾರಾ ಎಲ್ಲವನ್ನೂ ವ್ಯವಹಾರವಾಗಿ ಪರಿವರ್ತಿಸಿದ್ದಾರೆ. ಅವರು ತನ್ನ ವೃತ್ತಿಜೀವನದಲ್ಲಿ ಗಮನಾರ್ಹ ಬೆಳವಣಿಗೆಯನ್ನು ಸಾಧಿಸಿದ್ದರೂ, ವಿಷಯಗಳು ಈಗ ರಿವರ್ಸ್ ಗೇರ್ ನಲ್ಲಿ ಚಲಿಸುತ್ತಿವೆ. ಅವರ ಇತ್ತೀಚಿನ ಯಾವುದೇ ಚಲನಚಿತ್ರಗಳು ಬಾಕ್ಸ್ ಆಫೀಸ್ ನಲ್ಲಿ ಸದ್ದು ಮಾಡ್ತಿಲ್ಲ. ಆದರೂ ಅವರ ಡಿಮಾಂಡ್ ಗಳು ಕಡಿಮೆಯಾಗಿಲ್ಲ ಎಂದಿದ್ದಾರೆ ಅಂತನನ್. 
 

ಹಲವು ವರ್ಷಗಳಿಂದ ಡೇಟಿಂಗ್ ಮಾಡುತ್ತಿದ್ದ ನಿರ್ದೇಶಕ ವಿಘ್ನೇಶ್ ಶಿವನ್ (Vignesh Sivan) ಮತ್ತು ನಟಿ ನಯನತಾರ  ಎರಡು ವರ್ಷಗಳ ಹಿಂದೆ, ಭಾರತೀಯ ಚಿತ್ರರಂಗದ ಗಣ್ಯರ ಸಮ್ಮುಖದಲ್ಲಿ ಅದ್ಧೂರಿಯಾಗಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು. ಇವರ ಮದುವೆ ವಿಡಿಯೋ ಈಗಾಗಲೇ ನೆಟ್ ಫ್ಲಿಕ್ಸ್ 25ಕೋಟಿಗೆ ಖರೀದಿಸಿದ್ದು, ಒಂದು ಗಂಟೆ 21 ನಿಮಿಷದ 'ನಯನತಾರ: ಬಿಯಾಂಡ್ ದಿ ಫೇರಿ ಟೇಲ್' ಡಾಕ್ಯುಮೆಂಟರಿ ಶೀಘ್ರದಲ್ಲೇ ನೆಟ್‌ಫ್ಲಿಕ್ಸ್‌ನಲ್ಲಿ ರಿಲೀಸ್ ಆಗಲಿದೆ. 
 

Latest Videos

click me!