ಇಶಾ ಅಂಬಾನಿಯವರ ಹೋಳಿ ಬ್ಯಾಷ್‌ನ ಗ್ಲಾಮರ್ ಹೆಚ್ಚಿಸಿದ ಬಾಲಿವುಡ್‌ ತಾರೆಯರು!

Published : Mar 16, 2024, 05:47 PM ISTUpdated : Mar 19, 2024, 12:55 PM IST

ಹೋಳಿ ಹಬ್ಬ ಹತ್ತಿರವಾಗಿದೆ ಹಾಗಾಗಿ ಬಿ-ಟೌನ್‌ನಲ್ಲಿ ಹೋಳಿ ಪೂರ್ವ ಪಾರ್ಟಿ ಶುರುವಾಗಿದೆ. ಜಿಯೋ ವರ್ಲ್ಡ್‌ನ ಬ್ಲಗರಿ ಸ್ಟೋರ್‌ನಲ್ಲಿ ಇಶಾ ಅಂಬಾನಿಯ ರೋಮನ್ ಥೀಮ್ ಹೋಳಿ ಪಾರ್ಟಿಯನ್ನು ಆಯೋಜಿಸಿದ್ದರು, ಇದರಲ್ಲಿ ಬಿ-ಟೌನ್‌ನ ಎಲ್ಲಾ ಸೆಲೆಬ್ರೆಟಿಗಳು ಭಾಗವಹಿಸಿದ್ದು ಈ ಪಾರ್ಟಿಯ ಫೋಟೋಗಳು ಸಖತ್‌ ವೈರಲ್‌ ಆಗಿವೆ.

PREV
113
 ಇಶಾ ಅಂಬಾನಿಯವರ ಹೋಳಿ ಬ್ಯಾಷ್‌ನ ಗ್ಲಾಮರ್ ಹೆಚ್ಚಿಸಿದ ಬಾಲಿವುಡ್‌ ತಾರೆಯರು!

ಪ್ರಿಯಾಂಕಾ ಚೋಪ್ರಾ, ಶಿಲ್ಪಾ ಶೆಟ್ಟಿ, ಮಾಧುರಿ ದೀಕ್ಷಿತ್ ಮತ್ತು ಮುಂತಾದ ಬಾಲಿವುಡ್‌ ತಾರೆಯರು ಜಿಯೋ ವರ್ಲ್ಡ್‌ನ ಬ್ಲಗರಿ ಸ್ಟೋರ್‌ನಲ್ಲಿ ನಡೆದ ಇಶಾ ಅಂಬಾನಿಯ ರೋಮನ್ ಥೀಮ್ ಹೋಳಿ ಪಾರ್ಟಿಯ ರೆಡ್ ಕಾರ್ಪೆಟ್ ಅನ್ನು ಅಲಂಕರಿಸಿದ್ದಾರೆ. 

213

ಇಶಾ ಅಂಬಾನಿಯವರ ಹೋಳಿ ಬಾಷ್‌ನಲ್ಲಿ ಭಾಗವಹಿಸಿದ ಪ್ರಿಯಾಂಕಾ ಚೋಪ್ರಾ ಆಧುನಿಕ ದೇಸಿ ಹುಡುಗಿಯ ಅವತಾರವನ್ನು ಧರಿಸಿದ್ದರು . ಈ ಸಮಯದಲ್ಲಿ  ಇಂಡೋ ವೆಸ್ಟರ್ನ್ ಗುಲಾಬಿ ಬಣ್ಣದ ಆಧುನಿಕ ಸೀರೆಯನ್ನು ಧರಿಸಿದ್ದ ಪ್ರಿಯಾಂಕಾ ಚೋಪ್ರಾ ತಮ್ಮ ಮೇಕ್ಅಪ್ ಅನ್ನು ಕನಿಷ್ಠವಾಗಿ ಇಟ್ಟುಕೊಂಡಿದ್ದಾರೆ.  ಆಕೆಯ ಉಡುಪನ್ನು ಗೌರವ್ ಗುಪ್ತಾ ಅವರು ಕಸ್ಟಮೈಜ್‌ ಮಾಡಿದ್ದರು

313

ಇಶಾ ಅಂಬಾನಿಯವರ ಹೋಳಿ ಬಾಷ್‌ನಲ್ಲಿ ಧಕ್‌ ಧಕ್‌ ಚೆಲುವೆ ಮಾಧುರಿ ದೀಕ್ಷಿತ್   ಗುಲಾಬಿ ಬಣ್ಣದ ಪ್ರಕಾಶಮಾನವಾದ ಪ್ಯಾಂಟ್‌ಸೂಟ್ ಧರಿಸಿದ್ದರು. ಮತ್ತು . ಅವರ ಪತಿ ಡಾ ಶ್ರೀರಾಮ್ ನೆನೆ ಟುಕ್ಸೆಡೊವನ್ನು ಆಯ್ಕೆ ಮಾಡಿದರು.

413

ಪಲಾಝೋ ಪ್ಯಾಂಟ್‌ನೊಂದಿಗೆ ಬೆಳ್ಳಿಯ ಮಿನುಗುವ ಬ್ಲೇಜರ್ ಧರಿಸಿದ್ದ ಸುನೀಲ್‌ ಶೆಟ್ಟಿ ಪುತ್ರಿ ಅಥಿಯಾ ಶೆಟ್ಟಿ ಸಖತ್‌ ಸ್ಟನ್ನಿಂಗ್‌ ಆಗಿ ಕಾಣಿಸಿಕೊಂಡರು. ಅವರ ಕಿವಿಯೋಲೆಗಳು ಬ್ಲಗರಿ ಬ್ರ್ಯಾಂಡ್‌ನಿಂದ ಆಯ್ಕೆ ಮಾಡಿಕೊಂಡಿದ್ದರು.

513

ಬಾಲಿವುಡ್‌ನ ಚೆಲುವೆ ಶಿಲ್ಪಾ ಶೆಟ್ಟಿ  ಹೋಳಿ ಪಾರ್ಟಿಗಾಗಿ ಡಾರ್ಕ್‌ ಪಚ್ಚೆ ಬಣ್ಣದ ಸ್ಕರ್ಟ್ ಅನ್ನು ಧರಿಸಿದ್ದರು ಮತ್ತು ತಮ್ಮ ಔಟ್‌ಫಿಟ್‌ ಅನ್ನು ಹೂವಿನ ಮುದ್ರಣದ ದೊಡ್ಡ ಕೇಪ್‌ ಜೊತೆ ಪೇರ್‌ ಮಾಡಿಕೊಂಡಿದ್ದರು.  

613

ನಟ ಆಯುಷ್ಮಾನ್ ಖುರಾನಾ ಬಿಳಿ ಪ್ಯಾಂಟ್ ಜೊತೆ ಅದೇ ಬಣ್ಣದ ರೇಷ್ಮೆ ಶರ್ಟ್ ಧರಿಸಿದ್ದರು. ಶರ್ಟ್ ಮೇಲೆ ಕಲರ್‌ಫುಲ್‌ ಪ್ರಿಂಟ್‌ಗಳನ್ನು ಮಾಡಲಾಗಿತ್ತು.

713

ಹೋಳಿ ಬ್ಯಾಷ್‌ಗಾಗಿ ಪಾಯಲ್ ಸಂಪೂರ್ಣ ಖಂಡ್ವಾಲಾ ಕಪ್ಪು ಡ್ರೆಸ್‌ ಆಯ್ಕೆ ಮಾಡಿಕೊಂಡಿದ್ದರು. ಡಿಸೈನರ್ ಆಗಿರುವ ಪಾಯಲ್ ಖಂಡ್ವಾಲಾ  ಕಲಾವಿದೆ  ಆಗಿ ಕೂಡ ಗುರುತಿಸಿಕೊಂಡಿದ್ದಾರೆ

813

 ಬಾಲಿವುಡ್‌ನ ಎಲ್ಲಾ ಪಾರ್ಟಿಗಳಲ್ಲೂ ಕಾಣಿಸಿಕೊಳ್ಳುವ ಓರ್ಹನ್ ಅವತ್ರಮಣಿ ಸಹ ಇಶಾ ಅಂಬಾನಿಯ ಹೋಳಿ ಬ್ಯಾಷ್‌ನಲ್ಲಿ ಭಾಗವಹಿಸಿದ್ದರು. ಈ ಪಾರ್ಟಿಯಲ್ಲೂ ಓರಿ ತನ್ನ ಟ್ರೇಡ್‌ಮಾರ್ಕ್ ಕಪ್ಪು ಔಟ್‌ಫಿಟ್‌ಗೆ ಅಂಟಿಕೊಂಡಿದ್ದರು

913

ಹೋಳಿ ಈವೆಂಟ್‌ಗಾಗಿ ಕಿಟ್ಚ್‌ನಿಂದ ಸ್ಫೂರ್ತಿ ಪಡೆದ ಶರ್ವರಿ ವಾಘ್ ಅವರು  ಮುದ್ರಿತ ಸ್ಕರ್ಟ್ ಅನ್ನು ಹೂವಿನ ಪ್ರಿಂಟ್ ಬಸ್ಟಿಯರ್‌ನೊಂದಿಗೆ ಪೇರ್‌ ಮಾಡಿಕೊಂಡಿದ್ದರು. 

1013

ರೋಮನ್ ಥೀಮ್‌ನ ಹೋಳಿ ಬ್ಯಾಷ್‌ನಲ್ಲಿ ಇಶಾ ಅಂಬಾನಿ ದೇಸಿ ಲುಕ್‌ಗೆ ಅಂಟಿಕೊಂಡಿದ್ದಾರೆ. ಇಶಾ ತಮ್ಮ ಪಾರ್ಟಿಗಾಗಿ ಬನಾರಸಿ ನೇಯ್ಗೆಯಿಂದ ಮಾಡಿದ ಗೌನ್ ಅನ್ನು ಆಯ್ಕೆ ಮಾಡಿಕೊಂಡರು. 

1113

ಮಲ್ಟಿ ಕಲರ್‌ಗಳನ್ನು ಹೊಂದಿದ್ದ ಪ್ರಕಾಶಮಾನವಾದ ಔಟ್‌ಫಿಟ್‌ ಅನ್ನು ಇಶಾ  ಅವರು ಬ್ಲಗರಿ ಬ್ರ್ಯಾಂಡ್‌ನ ಆಭರಣಗಳೊಂದಿಗೆ ಸಂಯೋಜಿಸಿದರು

1213

ನಿನ್ನೆ ಅಂದರೆ ಮಾರ್ಚ್‌ 15ರಂದು ಜಿಯೋ ವರ್ಲ್ಡ್‌ನ ಬ್ಲಗರಿ ಸ್ಟೋರ್‌ನಲ್ಲಿ ನಡೆದ ರೋಮನ್ ಥೀಮ್ ಹೋಳಿ ಪಾರ್ಟಿಯಲ್ಲಿ ತಮ್ಮಇಬ್ಬರು  ಅತ್ತಿಗೆಯರಾದ ರಾಧಿಕಾ ಮರ್ಚೆಂಟ್‌ ಮತ್ತು ಶ್ಲೋಕಾ ಅಂಬಾನಿ ಜೊತೆ ಪೋಸ್‌ ನೀಡಿದ ಇಶಾ ಅಂಬಾನಿ.

1313

ಪ್ರಿಯಾಂಕಾ ಹಾಗೂ ಇಶಾ ಇಬ್ಬರು ಬ್ರ್ಯಾಂಡ್‌ನ ಆಭರಣಗಳನ್ನು ಧರಿಸಿದ್ದರು. ಬ್ಲಗರಿ ಬ್ರಾಂಡ್‌  ಮುಖಗಳಲ್ಲಿ ಪ್ರಿಯಾಂಕಾ ಚೋಪ್ರಾ ಕೂಡ ಒಬ್ಬರು.  ಪ್ರಿಯಾಂಕಾ ಚೋಪ್ರಾ ಧರಸಿದ್ದ  ಕಲರ್ಸ್ ಟ್ರೆಷರ್ ನೆಕ್ಲೇಸ್‌ ಬ್ರ್ಯಾಂಡ್‌ನ ಉನ್ನತ ಭಾಗಗಳಲ್ಲಿ ಒಂದಾಗಿದೆ. ಇದು ಬರೊಕ್ ಕಲೆಯಿಂದ ಪ್ರೇರಿತವಾಗಿದೆ ಮತ್ತು ಸ್ಫಟಿಕ ಶಿಲೆಗಳನ್ನು ಹೊಂದಿದೆ. ಇದರ ಬೆಲೆ 403,000 ಯುರೋಗಳು ಎಂದು ಹೇಳಲಾಗಿದೆ. 

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories