ಅಭಿಷೇಕ್ ಜೊತೆಯ ಲಿಂಕ್-ಅಪ್ ಸುದ್ದಿ ಬಗ್ಗೆ ಪ್ರಿಯಾಂಕಾ ಚೋಪ್ರಾ ಹೇಳಿದ್ದಿಷ್ಟು!

First Published | Sep 8, 2021, 4:45 PM IST

ಹಿಂದೊಮ್ಮೆ ಪ್ರಿಯಾಂಕಾ ಚೋಪ್ರಾ ಅಭಿಷೇಕ್ ಬಚ್ಚನ್ ಜೊತೆ ಸಂಬಂಧ ಹೊಂದಿದ್ದಾರೆ ಎಂಬ ವದಂತಿಗಳು ಹಬ್ಬಿದ್ದವು. ಇದರ ಬಗ್ಗೆ ಪ್ರಿಯಾಂಕಾ ಚೋಪ್ರಾ ಹೇಗೆ ರಿಯಾಕ್ಟ್‌ ಮಾಡಿದ್ದರು ಮತ್ತು ಏನು ಹೇಳಿದ್ದರು ಗೊತ್ತಾ? ಇಲ್ಲಿದೆ ವಿವರ.

ಬಹಳ ಹಿಂದೆ, ಐಶಾ ಚೌಧರಿ ಅವರ ಜೀವನವನ್ನು ಆಧರಿಸಿದ ಸೋನಾಲಿ ಬೋಸ್ ನಿರ್ದೇಶನದ ದಿ ಸ್ಕೈ ಈಸ್ ಪಿಂಕ್ ಸಿನಿಮಾದಲ್ಲಿ ಅಭಿಷೇಕ್ ಬಚ್ಚನ್‌ಗೆ ಪಾತ್ರವೊಂದನ್ನು ನೀಡಲಾಗಿತ್ತು. ಪತಿಗೆ ನೀಡಿದ ಈ ಆಫರ್‌ ಬಗ್ಗೆ ಪತ್ನಿ ಐಶ್ವರ್ಯ ರೈ ಅತೃಪ್ತಿ ಹೊಂದಿದ್ದಾರೆ ಎಂದು ಕೆಲವು ವರದಿಗಳು ಬಂದಿದ್ದವು.
 

2019ರಲ್ಲಿ ಬಿಡುಗಡೆಯಾದ ಈ ಚಿತ್ರದಲ್ಲಿ ಅಭಿಷೇಕ್ ಅವರಿಗೆ ಆಯಿಷಾ ತಂದೆಯ ಪಾತ್ರವನ್ನು ನಿರ್ವಹಿಸಲು ಆಫರ್ ನೀಡಲಾಗಿತ್ತು, ನಂತರ ಅದನ್ನು ಫರ್ಹಾನ್ ಅಖ್ತರ್ ಮಾಡಿದರು. ಆಯಿಷಾ ತಾಯಿಯ ಪಾತ್ರದಲ್ಲಿ ಪ್ರಿಯಾಂಕಾ ಚೋಪ್ರಾ ನಟಿಸಿದ್ದಾರೆ.

Tap to resize

ಪ್ರಿಯಾಂಕಾ ಚೋಪ್ರಾ ಜೊತೆ ಅಭಿಷೇಕ್‌  ಕೆಲಸ ಮಾಡುವುದು ಐಶ್ವರ್ಯಾ  ರೈ ಇಷ್ಟ ಪಡಲಿಲ್ಲ ಎಂದು ಹಲವು ವರದಿಗಳು ಹೇಳಿವೆ. ಪ್ರಿಯಾಂಕಾ ಮತ್ತು ಅಭಿಷೇಕ್‌ ಸಂಬಂಧ ಹೊಂದಿದ್ದಾರೆ ಎಂಬ ವದಂತಿಗಳಿದ್ದವು.

ಪ್ರಿಯಾಂಕಾ ಅಭಿಷೇಕ್ ಜೊತೆಯ ರೋಮ್ಯಾಂಟಿಕ್‌ ರಿಲೆಷನ್‌ಶಿಪ್‌ನ ರೂಮರ್‌ ಹೊಂದಿದ್ದರು ಮತ್ತು ಇದರಿಂದ ಐಶ್ವರ್ಯಾ ಇನ್ಸೆಕ್ಯೂರ್‌ ಫೀಲ್‌ ಮಾಡಿದರು ಎಂಬ ವದಂತಿಗಳ ಬಗ್ಗೆ ಪಿಸಿ ಸಂದರ್ಶನವೊಂದರಲ್ಲಿ ಮಾತನಾಡಿದ್ದಾರೆ.

2006 ರಲ್ಲಿ ಸ್ಟಾರ್‌ಡಸ್ಟ್‌ಗೆ ನೀಡಿದ ಸಂದರ್ಶನದಲ್ಲಿ, ಬಾಲಿವುಡ್‌ನ ಎಲ್ಲಾ ಚಲನಚಿತ್ರ ನಿರ್ಮಾಪಕರಿಗೆ ಅಭಿಷೇಕ್ ತನ್ನ ಪತ್ನಿ ಐಶ್ವರ್ಯಾ ಹೆಸರನ್ನು ಸೂಚಿಸುವ ಬಗ್ಗೆ ಪ್ರಿಯಾಂಕಾರಿಗೆ  ಕೇಳಲಾಯಿತು.

ಅಭಿಷೇಕ್ ಸಿನಿಮಾಗಳಿಗೆ ಐಶ್ ಅನ್ನು ಶಿಫಾರಸು ಮಾಡುವ ಬಗ್ಗೆ ನನಗೆ ತೊಂದರೆ ಇಲ್ಲ. ಏಕೆಂದರೆ  ಐಶ್ವರ್ಯಾರಿಗೆ ಯಾರೊಂದಿಗೂ ಹೋಲಿಕೆ ಇಲ್ಲ. ಅವಳು ತುಂಬಾ ಪ್ರತಿಭಾನ್ವಿತ ಮತ್ತು ಆಕರ್ಷಕ ಎಂದು ನಾನು ಭಾವಿಸುತ್ತೇನೆ ಎಂದು ಹೇಳಿದ್ದಾರೆ.

Aishwarya caption

ಪ್ರಿಯಾಂಕಾ ಅಭಿಷೇಕ್ ಜೊತೆ  ಸಂಬಂಧ ಹೊಂದಿದ್ದ ಬಗ್ಗೆ ವದಂತಿಗಳ ಬಗ್ಗೆಯೂ ಮಾತನಾಡಿದ್ದಾರೆ; 'ಇಲ್ಲ, ಐಶ್ವರ್ಯಾಳಿಗೆ ನನ್ನ ಬಗ್ಗೆ ಯಾವುದೇ ಭಯವಿಲ್ಲ. ನಿಮ್ಮ ಈ ಮಾಹಿತಿಗೆ ವಿರುದ್ಧವಾಗಿ, ಆಶ್ ಮತ್ತು ಅಭಿ ಇಬ್ಬರೂ ಅವನ ಪಾರ್ಟಿಯಲ್ಲಿ ನನ್ನ ಜೊತೆ ಕಾಲ ಕಳೆದರು. ನಾನೆಂದರ ಅವಳಿಗೆ ಖುಷಿ ಎಂದು ನಾನು ಭಾವಿಸುತ್ತೇನೆ. ಅವಳಿಂದ ನನಗೆ ಯಾವುದೇ ನೆಗೆಟಿವ್‌ ವೈಬ್ಸ್ ಬಂದಿಲ್ಲ ಎಂದು ಹೇಳಿದ್ದಾರೆ.

ಪ್ರಿಯಾಂಕಾ ಚೋಪ್ರಾ ಮುಂದಿನ ದಿನಗಳಲ್ಲಿ Citadel and The Matrix: Resurrections ಹಾಗೂ  ಸೆಲೀನ್ ಡಿಯೋನ್ ಮತ್ತು ಸ್ಯಾಮ್ ಹೇಘನ್ ಜೊತೆ ಟೆಕ್ಸ್ಟ್‌ ಫಾರ್‌ ಯೂ ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. 

ಬಹಳ ದಿನಗಳ ನಂತರ ಪಿಗ್ಗಿ ಬಾಲಿವುಡ್ ಚಿತ್ರ ಜೀ ಲೆ ಜರಾದಲ್ಲಿ ಕತ್ರಿನಾ ಕೈಫ್ ಮತ್ತು ಆಲಿಯಾ ಭಟ್ ಕೆಲಸ ಮಾಡುತ್ತಿದ್ದಾರೆ. ಮತ್ತೊಂದೆಡೆ, ಐಶ್ವರ್ಯಾ ರೈ ಸದ್ಯ ಮಣಿರತ್ನಂ ಅವರ ಪೊನ್ನಿನ್ ಸೆಲ್ವನ್ ಚಿತ್ರದ
ಚಿತ್ರೀಕರಣದಲ್ಲಿ ನಿರತರಾಗಿದ್ದಾರೆ. 

Latest Videos

click me!