ಹ್ಯಾಪಿ ಲೈಫ್‌ನ ಮಂತ್ರ ರೀವಿಲ್‌ ಮಾಡಿದ ಅನನ್ಯಾ ಪಾಂಡೆ‌!

First Published | Sep 8, 2021, 4:26 PM IST

ಬಾಲಿವುಡ್‌ನ ಯಂಗ್‌ ಪ್ರಾಮಿಸ್ಸಿಂಗ್‌ ನಟಿ ಅನನ್ಯಾ ಪಾಂಡೆ ಹ್ಯಾಪಿ ಹಾಗೂ ಬೆಟರ್‌ ಲೈಫ್‌ಗಾಗಿ ತಮ್ಮ ಮಂತ್ರವನ್ನು ಹಂಚಿಕೊಂಡಿದ್ದಾರೆ. ಅವರು ಯಶಸ್ಸಿಗೆ ಅಂಟಿಕೊಳ್ಳುವ ಬದಲು ಕಲಿಯಲು, ತಪ್ಪುಗಳನ್ನು ಮಾಡಲು ಬಯಸುತ್ತಾರೆ ಎಂದು ಹೇಳಿದ್ದಾರೆ. ಸಂತೋಷ ಜೀವನಕ್ಕಾಗಿ ಅನನ್ಯಾರ ಮಂತ್ರ ಏನು ಗೊತ್ತಾ?

ಅನನ್ಯಾ ಪಾಂಡೆ ಸ್ಟೂಡೆಂಟ್ ಆಫ್ ದಿ ಇಯರ್ 2  ಮೂಲಕ ಬಾಲಿವುಡ್‌ಗೆ ಪಾದಾರ್ಪಣೆ ಮಾಡಿದರು. ನಂತರ ನಟಿ ಪಾಟಿ ಪಟ್ನಿ ಔರ್ ವೋಹ್ ಚಿತ್ರದಲ್ಲಿ ನಟಿಸಿದರು ಮತ್ತು ನಿಧಾನವಾಗಿ ಇಂಡಸ್ಟ್ರಿಯಲ್ಲಿ ಗುರುತಿಸಿಕೊಂಡರು. 

ಕಳೆದ ವರ್ಷ OTT ಬಿಡುಗಡೆಯಾದ ಅನನ್ಯಾ ಪಾಂಡೆಯ ಸಿನಿಮಾ ಖಾಲಿ ಪೀಲಿ, ಪ್ರೇಕ್ಷಕರನ್ನು ಮೆಚ್ಚಿಸುವಲ್ಲಿ ವಿಫಲವಾಗುದೆ. ನಟಿ ಈಗ ತಮ್ಮ ಪ್ಯಾನ್ ಇಂಡಿಯಾ ಬಿಡುಗಡೆ ಲಿಗರ್‌ಗೆ ರೆಡಿಯಾಗುತ್ತಿದ್ದಾರೆ ಮತ್ತು ಭವಿಷ್ಯದಲ್ಲಿ ಹೆಚ್ಚಿನ ಸಿನಿಮಾಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ. 

Tap to resize

ಹಿಂದೂಸ್ತಾನ್ ಟೈಮ್ಸ್ ಜೊತೆಗಿನ ಸಂಭಾಷಣೆಯಲ್ಲಿ, ಅನನ್ಯಾ ಪಾಂಡೆ ತಾನು ಫೇಲ್‌ ಆಗಲು ಅಥವಾ ತಪ್ಪುಗಳನ್ನು ಮಾಡಲು ಹೆದರುವುದಿಲ್ಲ ಎಂದಿದ್ದಾರೆ. ಬದಲಾಗಿ ಅವುಗಳನ್ನು ಸ್ವೀಕರಿಸಲು ಮತ್ತು ಮುಂದುವರಿಯಲು ಬಯಸುತ್ತಾರೆ ಎಂದು ಹೇಳಿಕೊಂಡಿದ್ದಾರೆ.

ಯಶಸ್ಸು ಮತ್ತು ವೈಫಲ್ಯಗಳು ಪ್ರಯಾಣದ ಒಂದು ಭಾಗ ಎಂದು ಅವರು ನಂಬುತ್ತಾರೆ ಮತ್ತು ಯಾವಾಗಲೂ ಏರಿಳಿತಗಳು ಇರುತ್ತವೆ. ನಟಿ ತನ್ನನ್ನು ತಾನು ಯಶಸ್ಸಿನಿಂದ ಬೇರ್ಪಡಿಸಿದ್ದೇನೆ ಮತ್ತು ತಪ್ಪುಗಳನ್ನು ಮಾಡಲು ಹೆದರುವುದಿಲ್ಲ ಎಂದು ಹೇಳುತ್ತಾರೆ.

ಅನನ್ಯಾ ಪಾಂಡೆಯ ಹ್ಯಾಪಿ ಲೈಫ್‌ನ  ಮುಖ್ಯ ಮಂತ್ರವೆಂದರೆ ಮೋಜು ಮಾಡುವುದು, ತಪ್ಪುಗಳನ್ನು ಮಾಡುವುದು ಮತ್ತು ನಗುವುದು ಎಂದು ಹೇಳಿದ್ದಾರೆ. ನಟಿ ಲಿಗರ್ ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ. 

ವಿಜಯ್ ದೇವರಕೊಂಡ ಮತ್ತು ಅನನ್ಯಾರ ನಡುವಿನ ಕೆಮಿಸ್ಟ್ರಿ ಅಭಿಮಾನಿಗಳಲ್ಲಿ ನಿರೀಕ್ಷೆಯನ್ನು ಹೆಚ್ಚಿಸಿದೆ. ಶಕುನ್ ಬಾತ್ರಾ ಅವರ ಮುಂದಿನ ಚಿತ್ರದಲ್ಲಿ ಸಿದ್ಧಾಂತ್ ಚತುರ್ವೇದಿ ಮತ್ತು ದೀಪಿಕಾ ಪಡುಕೋಣೆ ಜೊತೆ ಅನನ್ಯಾ ನಟಿಸಿದ್ದಾರೆ.

Latest Videos

click me!