ಬಾಲಿವುಡ್ ನಟಿ ಕತ್ರೀನಾ ಕೈಫ್ ತಮ್ಮ ಶಾಂತ ಸ್ವಭಾವ ಮತ್ತು ಮೃದು ಸ್ವಭಾವದ ನಡವಳಿಕೆಗೆ ಹೆಸರುವಾಸಿ. ಆದರೆ ಕತ್ರಿನಾ ಒಮ್ಮೆ ತಮ್ಮ ಟೆಂಪರ್ ಕಳೆದುಕೊಂಡು ಏರ್ ಹೋಸ್ಟೆಸ್ ಜೊತೆ ಮಿಸ್‌ಬಿಹೇವ್ ಮಾಡಿದ್ದರು.
ಹಿಂದೊಮ್ಮೆ ಕತ್ರೀನಾ ವಿಮಾನದಲ್ಲಿ ಪ್ರಯಾಣಿಸುವಾಗ ಸೀಟ್ ಬೆಲ್ಟ್ ಹಾಕಿಕೊಳ್ಳಲು ನಟಿಯನ್ನು ಎಬ್ಬಿಸಲು ಪ್ರಯತ್ನಿಸಿದಾಗ ಏರ್ ಹೋಸ್ಟೆಸ್ ಮೇಲೆ ಕೋಪಗೊಂಡರು. ಈ ಘಟನೆ 2012ರಲ್ಲಿ ನೆಡೆದಿದೆ ಮತ್ತು ಆಗ ಕತ್ರಿನಾ ಕೈಫ್ ತಮ್ಮ ಕೆರಿಯರ್‌ನ ಟಾಪ್‌ನಲ್ಲಿದ್ದರು. ಬ್ಯಾಕ್ ಟು ಬ್ಯಾಕ್ ಸಿನಿಮಾಗಳನ್ನು ನೀಡುತ್ತಿದ್ದರು ಹಾಗೂ ಉತ್ತಮ ಹಣ ಗಳಿಸುತ್ತಿದ್ದರು.
ಕಾಸ್ಮೊಪೊಲಿಶಿಯನ್ ವರದಿಯ ಪ್ರಕಾರ, ಕಿಕ್ ಫೇಮ್‌ನ ನಟಿ ಏರ್ ಹೋಸ್ಟೆಸ್ ಅನ್ನು ನಿಂದಿಸಿದರು. ಮೂಲಗಳ ಪ್ರಕಾರ, ಪ್ಯಾಸೆಂಜರ್ ಕತ್ರಿನಾ ಕೈಫ್ ಜೊತೆಗಿನ ತನ್ನ ವಿಮಾನ ಪ್ರಯಾಣದ ಅನುಭವದ ಬಗ್ಗೆ ಹೇಳಿದರು.
ಏರ್ ಹೋಸ್ಟೆಸ್ ಆಹಾರದ ಬಗ್ಗೆ ಅವರನ್ನು ಕೇಳಲು ಬಂದಾಗ, ಅವರು ಫ್ಲೈಟ್ ಅಟೆಂಡೆಂಟ್ ಜೊತೆ ಮಾತನಾಡುವ ಬದಲು ತನ್ನ ಮ್ಯಾನೇಜರ್ ಕಡೆಗೆ ತಿರುಗುತ್ತಿದ್ದರು, ಎಂದು ಮೂಲವು ಹೇಳಿದೆ. ನಟಿಗೆ ನೀರು ಬೇಕಾದರೂ ತಮ್ಮ ಮ್ಯಾನೇಜರ್‌ಗೆ ಹೇಳುತ್ತಾರೆ ಎಂದು ಬಹಿರಂಗ ಪಡಿಸಿದ್ದರು.
ಒಮ್ಮೆ ಕತ್ರಿನಾ ಏರ್ ಹೋಸ್ಟೆಸ್ ಜೊತೆ ಅನುಚಿತವಾಗಿ ವರ್ತಿಸಿದರು. ಏರ್ ಹೋಸ್ಟೆಸ್ ನಟಿಯನ್ನು ನಿದ್ರೆಯಿಂದ ಎಬ್ಬಿಸಿದರು ಮತ್ತು ಸೀಟ್ ಬೆಲ್ಟ್ ಅನ್ನು ಜೋಡಿಸುವಂತೆ ಕೇಳಿದರು. ನನ್ನನ್ನು ಮುಟ್ಟಲು ನಿನಗೆ ಎಷ್ಟು ಧೈರ್ಯ. ನೀನು ಕೇವಲ ಏರ್ ಹೋಸ್ಟೆಸ್,' ಎಂದು ಕತ್ರೀನಾ ಕಿರುಚಾಡಿದ್ದರು.
ನೀನು ಗಳಿಸುವ ಸಂಬಳವನ್ನು ನಾನು ಒಂದು ದಿನದಲ್ಲಿ ಖರ್ಚು ಮಾಡುತ್ತೇನೆ, ಎಂದು ಕತ್ರಿನಾ ಏರ್ ಹೋಸ್ಟೆಸ್‌ಗೆ ನಿಂದಿಸಿದ್ದರು. ಸಿಬ್ಬಂದಿಯೊಂದಿಗೆ ಅಸಭ್ಯವಾಗಿ ವರ್ತಿಸಿದ್ದಕ್ಕಾಗಿ ನಟಿಯನ್ನು ಜೆಟ್ ಏರ್‌ವೇಸ್ ನಿರ್ಬಂಧಿಸಿದೆ ಎಂದು ವರದಿಯಾಗಿತ್ತು.
ಕತ್ರಿನಾ ಸದ್ಯ ಟರ್ಕಿಯಲ್ಲಿ ಟೈಗರ್ 3 ಸಿನಿಮಾದ ಚಿತ್ರೀಕರಣದಲ್ಲಿದ್ದಾಳೆ. ಈ ಸಿನಿಮಾದಲ್ಲಿ ಸಲ್ಮಾನ್ ಜೊತೆ ಸ್ಕ್ರೀನ್ ಶೇರ್ ಮಾಡಿಕೊಳ್ಳಲಿದ್ದಾರೆ, ಇದರ ಜೊತೆಗೆ ನಟಿ ಮುಂದಿನ ದಿನಗಳಲ್ಲಿ ಫೋನ್ ಭೂತ್ ಮತ್ತು ಸೂರ್ಯವಂಶಂನಲ್ಲಿ ಕೂಡ ಕಾಣಿಸಿಕೊಳ್ಳಲಿದ್ದಾರೆ.