ಪ್ಯಾರಿಸ್ ನಲ್ಲಿ ಮಿರ ಮಿರ ಮಿಂಚಿದ ಪ್ರಿಯಾಂಕಾ ಚೋಪ್ರಾ; ಬಟ್ಟೆಯ ಬೆಲೆ ಕೇಳಿದ್ರೆ ಆಚ್ಚರಿ ಪಡುತ್ತೀರಿ

First Published | Jun 7, 2022, 3:24 PM IST

ಬಾಲಿವುಡ್ ನಟಿ ಪ್ರಿಯಾಂಕಾ ಚೋಪ್ರಾ ಸದ್ಯ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸದ್ದು ಮಾಡುತ್ತಿದ್ದಾರೆ. ಪ್ರಿಯಾಂಕಾ ಪತಿ ನಿಕ್ ಜೋನಸ್ ಜೊತೆ ಅಮೆರಿಕಾದಲ್ಲಿ ವಾಸವಾಗಿದ್ದಾರೆ. ಇತ್ತೀಚಿಗಷ್ಟೆ ಪ್ರಿಯಾಂಕಾ ದಂಪತಿ ಬಾಡಿಗೆ ತಾಯಿ ಮೂಲಕ ಹೆಣ್ಣು ಮಗುವನ್ನು ಸ್ವಾಗತಿಸಿದ್ದಾರೆ.

ಬಾಲಿವುಡ್ ನಟಿ ಪ್ರಿಯಾಂಕಾ ಚೋಪ್ರಾ ಸದ್ಯ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸದ್ದು ಮಾಡುತ್ತಿದ್ದಾರೆ. ಪ್ರಿಯಾಂಕಾ ಪತಿ ನಿಕ್ ಜೋನಸ್ ಜೊತೆ ಅಮೆರಿಕಾದಲ್ಲಿ ವಾಸವಾಗಿದ್ದಾರೆ. ಇತ್ತೀಚಿಗಷ್ಟೆ ಪ್ರಿಯಾಂಕಾ ದಂಪತಿ ಬಾಡಿಗೆ ತಾಯಿ ಮೂಲಕ ಹೆಣ್ಣು ಮಗುವನ್ನು ಸ್ವಾಗತಿಸಿದ್ದಾರೆ.

ಬಾಲಿವುಡ್ ನಿಂದ ಅಂತರ ಕಾಯ್ದುಕೊಂಡಿರುವ ನಟಿ ಪ್ರಿಯಾಂಕಾ ಹಾಲಿವುಡ್ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಪತಿ, ಮಗು, ಸಿನಿಮಾ ಅಂತ ಬ್ಯುಸಿಯಾಗಿರುವ ಪ್ರಿಯಾಂಕಾ ಇತ್ತೀಚಿಗಷ್ಟೆ ಪ್ಯಾರಿಸ್ ಈವೆಂಟ್ ಒಂದರಲ್ಲಿ ಕಾಣಿಸಿಕೊಂಡಿದ್ದಾರೆ.

Tap to resize

ಐಷಾರಾಮಿ ಬ್ರಾಂಡ್ ಒಂದರ ಜಾಹೀರಾತು ಚಿತ್ರೀಕರಣದಲ್ಲಿ ಪ್ರಿಯಾಂಕಾ ಕಾಣಿಸಿಕೊಂಡಿದ್ದರು. ಸಮಯದಲ್ಲಿ ಕ್ಲಿಕ್ಕಿಸಿದ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ.

ಪ್ರಿಯಾಂಕಾ ಖ್ಯಾತ ಹಾಲಿವುಡ್ ಸ್ಟಾರ್ಸ್ ಜೊತೆ ಕಾಣಿಸಿಕೊಂಡಿದ್ದಾರೆ. ಪ್ರಿಯಾಂಕಾ ಮಿರ ಮಿರ ಮಿಂಚುವ ಗೌನ್ ನಲ್ಲಿ ಮಿಂಚಿದ್ದಾರೆ. ಪ್ರಿಯಾಂಕಾ ಹೊಸ ಲುಕ್ ನೋಡಿ ಅಭಿಮಾನಿಗಳು ತರಹೇವಾರಿ ಕಾಮೆಂಟ್ ಮಾಡುತ್ತಿದ್ದಾರೆ.

ಪ್ರಿಯಾಂಕಾ ಚೋಪ್ರಾ ಬಾಲಿವುಡ್ ನಿಂದ ಅಂತರ ಕಾಯ್ದುಕೊಂಡಿದ್ದರೂ ಸಹ ಭಾರತೀಯ ಅಭಿಮಾನಿಗಳ ಹೃದಯ ಗೆಲ್ಲುತ್ತಿರುತ್ತಾರೆ. ಅಮೆರಿಕಾದಲ್ಲಿದ್ದರೂ ಭಾರತೀಯ ಸಂಸ್ಕೃತಿ ಅನುಸರಿಸುವ ಪ್ರಿಯಾಂಕಾ ಅಭಿಮಾನಿಗಳ ಹೃದಯ ಗೆಲ್ಲುತ್ತಿರುತ್ತಾರೆ.

ಪ್ರಿಯಾಂಕಾ ಕೊನೆಯದಾಗಿ ಮ್ಯಾಟ್ರಿಕ್ಸ್ ಮೂಲಕ ಅಭಿಮಾನಿಗಳ ಮುಂದೆ ಬಂದಿದ್ದರು. ಸದ್ಯ ಪ್ರಿಯಾಂಕಾ ಚೋಪ್ರಾ ಇಟ್ಸ್ ಆಲ್ ಕಮ್ಮಿಂಗ್ ಬ್ಯಾಕ್ ಟು ಮಿಯಲ್ಲಿ ಬ್ಯುಸಿಯಾಗಿದ್ದಾರೆ.

ಬಾಲಿವುಡ್ ನಲ್ಲಿ ಪ್ರಿಯಾಂಕಾ ಕೊನೆಯದಾಗಿ ದಿ ವೈಟ್ ಟೈಗರ್ ಮೂಲಕ ಭಾರತೀಯ ಅಭಿಮಾನಿಗಳ ಮುಂದೆ ಬಂದಿದ್ದರು. ಪ್ರಿಯಾಂಕಾ ಯಾವಾಗ ಮತ್ತೆ ಹಿಂದಿಯಲ್ಲಿ ಸಿನಿಮಾ ಮಾಡುತ್ತಾರೆ ಎಂದು ಭಾರತೀಯ ಅಭಿಮಾನಿಗಳು ಕಾಯುತ್ತಿದ್ದಾರೆ.

priyanka

ಪ್ರಿಯಾಂಕಾ ಚೋಪ್ರಾ ಮಗುವನ್ನು ಸ್ವಾಗತಿಸಿದ ಬಳಿಕ ಭಾರತಕ್ಕೆ ಬಂದಿಲ್ಲ. ಹಾಗಾಗಿ ಮಗಳಿಗೆ ಭಾರತವನ್ನು ಯಾವಾಗ ತೋರಿಸುತ್ತಾರೆ ಎಂದು ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ.

Latest Videos

click me!