ಈಗಾಗಲೇ ಸಾಕಷ್ಟು ತಡವಾಗಿದ್ದರಿಂದ, ರಾಜಮೌಳಿ ಶೀಘ್ರದಲ್ಲೇ ಚಿತ್ರೀಕರಣ ಆರಂಭಿಸಲು ಉತ್ಸುಕರಾಗಿದ್ದಾರೆ. ಇತ್ತೀಚೆಗೆ ಸಿನಿಮಾ ಲಾಂಚ್ ಕೂಡ ರಹಸ್ಯವಾಗಿ ನೆರವೇರಿದೆ. ಪ್ರಿಯಾಂಕಾ ಚೋಪ್ರಾ, ರಾಜಮೌಳಿ ಮತ್ತು ಮಹೇಶ್ ಬಾಬು ಅವರೊಂದಿಗೆ ಚಿತ್ರದ ಚರ್ಚೆಯಲ್ಲಿ ಭಾಗವಹಿಸಲು ಲಾಸ್ ಏಂಜಲೀಸ್‌ನಿಂದ ಹೈದರಾಬಾದ್‌ಗೆ ಬಂದಿದ್ದಾರೆ ಎಂದು ವರದಿಯಾಗಿದೆ.