Priyanka chopra: ನೋಡೋಕೆ ಸಿಂಪಲ್: ಪ್ರಿಯಾಂಕ ಧರಿಸಿದ ಜಾಕೆಟ್ ಬೆಲೆಗೆ 2 Macbook ಕೊಳ್ಬೋದು

Published : Nov 04, 2021, 12:17 PM ISTUpdated : Nov 04, 2021, 01:04 PM IST

ಪ್ರಿಯಾಂಕ ಚೋಪ್ರಾ(Priyanka Chopra) ಧರಿಸಿದ ದುಬಾರಿ ಜಾಕೆಟ್ ಬೆಲೆ ಗೊತ್ತಾ ? Priyanka chopra fashion ಪತಿ ನಿಕ್ ಜೊತೆ ಡೇಟ್‌ಗೆ ಹೋಗೋಕೆ ದುಬಾರಿ ಜಾಕೆಟ್

PREV
18
Priyanka chopra: ನೋಡೋಕೆ ಸಿಂಪಲ್: ಪ್ರಿಯಾಂಕ ಧರಿಸಿದ ಜಾಕೆಟ್ ಬೆಲೆಗೆ 2 Macbook ಕೊಳ್ಬೋದು

ನಟಿ ಪ್ರಿಯಾಂಕಾ ಚೋಪ್ರಾ(Priyanka chopra)ಅವರು ಯುನೈಟೆಡ್ ಸ್ಟೇಟ್ಸ್‌ಗೆ ಮರಳಿದ್ದಾರೆ. ಇತ್ತೀಚೆಗೆ ತಮ್ಮ ಪತಿ ನಿಕ್ ಜೋನಾಸ್ ಅವರೊಂದಿಗೆ ಡೇಟ್ ಆನಂದಿಸಿದ್ದಾರೆ. ತನ್ನ ಅಮೆಜಾನ್ ಪ್ರೈಮ್ ಸಿರೀಸ್ ಸಿಟಾಡೆಲ್‌ನ ಸ್ಪೇನ್ ಶೆಡ್ಯೂಲ್ ಮುಗಿಸಿದ ನಂತರ ನಟಿ ಯುಎಸ್‌ಗೆ ಮರಳಿದ್ದಾರೆ.

28

ಬಾಲಿವುಡ್ ದೇಸಿ ಗರ್ಲ್ ಲಾಸ್ ಏಂಜಲೀಸ್‌ನಲ್ಲಿ ನಿಕ್ ಅವರೊಂದಿಗೆ ಡೇಟಿಂಗ್‌ಗೆ ಹೋಗಿದ್ದರು. ಅವರ ಡೇಟಿಂಗ್ ಫೋಟೋಗಳು ಆನ್‌ಲೈನ್‌ನಲ್ಲಿ ಓಡಾಡುತ್ತಿವೆ.

38

ಲಾಸ್ ಏಂಜಲೀಸ್‌ನ ಬೀದಿಗಳಲ್ಲಿ ನಿಕ್ ಜೊತೆ ಕೈಜೋಡಿಸಿಕೊಂಡು ಹೆಜ್ಜೆ ಹಾಕಿದ್ದಾರೆ. ಪ್ರಿಯಾಂಕಾ ಸ್ಕಿನ್ನಿ ಡೆನಿಮ್‌ನೊಂದಿಗೆ ಅಮೇರಿಕನ್ ವಾರ್ಸಿಟಿ ಜಾಕೆಟ್ ಅನ್ನು ಧರಿಸಿದ್ದರು. ಕಪ್ಪು ಬಣ್ಣದ ಉಡುಪಿನಲ್ಲಿ ನಿಕ್ ಸ್ಟೈಲಾಗಿ ಕಾಣುತ್ತಿದ್ದರು.

48

ಕೊರೋನಾದ ಮಧ್ಯೆ ಸುರಕ್ಷಿತವಾಗಿರಲು ಸೆಲೆಬ್ರಿಟಿ ದಂಪತಿ ನಗರದಾದ್ಯಂತ ಮಾಸ್ಕ್ ಧರಿಸಿಕೊಂಡೇ ಓಡಾಡಿರುವುದನ್ನು ಫೋಟೋದಲ್ಲಿ ಕಾಣಬಹುದು.

58

ಪ್ರಿಯಾಂಕಾ ಅವರ ಬಿಳಿ ಮತ್ತು ಹಸಿರು ಜಾಕೆಟ್ ಫ್ರೆಂಚ್ ರೆಡಿ-ಟು-ವೇರ್ ಐಷಾರಾಮಿ ಲೇಬಲ್ ಸೆಲೀನ್‌ನ ಪ್ರಾಡಕ್ಟ್. ಇದನ್ನು ನಟಿ ತನ್ನ ಪತಿಯ ಕ್ಲೋಸೆಟ್ನಿಂದ ಕದ್ದಿದ್ದಾರೆ.

68

ಇದಕ್ಕೂ ಮೊದಲು, ನಿಕ್ ಜೋನಾಸ್ ರಿಯಾಲಿಟಿ ಶೋ, ದಿ ವಾಯ್ಸ್‌ನಲ್ಲಿ ಕಾಣಿಸಿಕೊಂಡಾಗ ಅದನ್ನು ಧರಿಸಿದ್ದರು. ಪ್ರಿಯಾಂಕಾ ಮತ್ತು ನಿಕ್ ಅವರ ಬ್ಯೂಟಿಫುಲ್ ಜಾಕೆಟ್ ಬೆಲೆ ಎಷ್ಟು ಗೊತ್ತಾ ?

78

ಹಸಿರು ಉಣ್ಣೆ ಮಿಶ್ರಿತ ಮೆಟೀರಿಯಲ್‌ನಲ್ಲಿ ವಿನ್ಯಾಸಗೊಳಿಸಲಾದ ಸೆಲೀನ್ ವಾರ್ಸಿಟಿ ಲೋಗೋ ಜಾಕೆಟ್ ಧರಿಸಿ ಪ್ರಿಯಾಂಕಾ ಲಾಸ್ ಏಂಜಲೀಸ್‌ನಲ್ಲಿ ಹೆಜ್ಜೆ ಹಾಕಿದ್ದಾರೆ. ಇದು ಕ್ರೀಮ್ ಲೆದರ್ ಸ್ಲೀವ್‌ಗಳು ಮತ್ತು ಸ್ಟ್ರೈಪ್ಡ್ ರಿಬ್ಬಡ್ ಟ್ರಿಮ್‌ಗಳೊಂದಿಗೆ ಬರುತ್ತದೆ.

88

ಪ್ರಿಯಾಂಕಾ ಅವರ ಜಾಕೆಟ್‌ ಬೆಲೆ ನೋಡುವುದಾದರೆ ಇದರ ಮೌಲ್ಯ ₹1,90,255 ರೂಪಾಯಿ. ಇದು ಸೆಲಿನ್ ವೆಬ್‌ಸೈಟ್‌ನಲ್ಲಿ ಮಾರಾಟವಾಗಿದೆ. 

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories