ನಿಕ್ ಜೋನಸ್ ಕೈಯಲ್ಲಿ ಮಾಲ್ತಿ; ಮಗಳ ಮುದ್ದಾದ ಫೋಟೋ ಹಂಚಿಕೊಂಡ ಪ್ರಿಯಾಂಕಾ

First Published | Jun 20, 2022, 3:01 PM IST

ಬಾಲಿವುಡ್‌ನಿಂದ ಅಂತರ ಕಾಯ್ದುಕೊಂಡಿರುವ ನಟಿ ಪ್ರಿಯಾಂಕಾ ಇದೀಗ ಹಾಲಿವುಡ್ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಪತಿ, ಮಗು, ಸಿನಿಮಾ ಅಂತ ಬ್ಯುಸಿಯಾಗಿರುವ ಪ್ರಿಯಾಂಕಾ ಇತ್ತೀಚಿಗಷ್ಟೆ ಮಗಳ ಸುಂದರ ಫೋಟೋ ಹಂಚಿಕೊಂಡಿದ್ದಾರೆ. 

ಬಾಲಿವುಡ್ ನಟಿ ಪ್ರಿಯಾಂಕಾ ಚೋಪ್ರಾ ಸದ್ಯ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸದ್ದು ಮಾಡುತ್ತಿದ್ದಾರೆ. ಪ್ರಿಯಾಂಕಾ ಪತಿ ನಿಕ್ ಜೋನಸ್ ಜೊತೆ ಅಮೆರಿಕಾದಲ್ಲಿ ವಾಸವಾಗಿದ್ದಾರೆ. ಇತ್ತೀಚಿಗಷ್ಟೆ ಪ್ರಿಯಾಂಕಾ ದಂಪತಿ ಬಾಡಿಗೆ ತಾಯಿ ಮೂಲಕ ಹೆಣ್ಣು ಮಗುವನ್ನು ಸ್ವಾಗತಿಸಿದ್ದರು.

ಬಾಲಿವುಡ್‌ನಿಂದ ಅಂತರ ಕಾಯ್ದುಕೊಂಡಿರುವ ನಟಿ ಪ್ರಿಯಾಂಕಾ ಇದೀಗ ಹಾಲಿವುಡ್ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಪತಿ, ಮಗು, ಸಿನಿಮಾ ಅಂತ ಬ್ಯುಸಿಯಾಗಿರುವ ಪ್ರಿಯಾಂಕಾ ಇತ್ತೀಚಿಗಷ್ಟೆ ಮಗಳ ಸುಂದರ ಫೋಟೋ ಹಂಚಿಕೊಂಡಿದ್ದಾರೆ. 

Tap to resize

ನಟಿ ಪ್ರಿಯಾಂಕಾ ಮತ್ತು ಜೋನಸ್ ದಂಪತಿ 2022, ಜನವರಿಯಲ್ಲಿ ಮೊದಲ ಮಗು ಸ್ವಾಗತಿಸಿದರು. ಮಗಳಿಗೆ ಮಾಲ್ತಿ ಮೇರಿ ಚೋಪ್ರಾ ಜೋನಸ್ ಎಂದು ಹೆಸರಿಟ್ಟಿದ್ದಾರೆ. ಇದೀಗ ಮೊದಲ ಬಾರಿಗೆ ಮಾಲ್ತಿ ಪಾದರ್ಸ್ ಡೇ ಆಚರಣೆ ಮಾಡಿದ್ದಾರೆ. ಇದುವರೆಗೂ  ಪ್ರಿಯಾಂಕಾ ಮಗಳ ಮುಖವನ್ನು ಎಲ್ಲಿಯೂ ತೋರಿಸಿಲ್ಲ.  ಸದ್ಯ ಶೇರ್ ಮಾಡಿರುವ ಫೋಟೊದಲ್ಲಿಯೂ ಮಗಳ ಬೆನ್ನಿನ ಫೋಟೋ ಹಂಚಿಕೊಂಡಿದ್ದಾರೆ. 

ನಿಕ್ ಜೋನಸ್ ಮಗಳನ್ನು ಕೈಯಯಲ್ಲಿ ಹಿಡಿದುಕೊಂಡು ನಡೆಸುತ್ತಿರುವ ಫೋಟೋ ಹಂಚಿಕೊಂಡಿದ್ದಾರೆ. ಫೋಟೋದಲ್ಲಿ ಮಾಲ್ತಿ ಕೆಂಪು ಬಣ್ಣದ ಮುದ್ದಾದ ಬಟ್ಟೆ ಧರಿಸಿದ್ದಾಳೆ. ಕ್ಯೂಟ್ ಆಗಿರುವ ಫೋಟೋಗೆ ಅಭಿಮಾನಿಗಳಿಂದ ಸಿಕ್ಕಾಪಟ್ಟೆ ಲೈಕ್ಸ್ ಮತ್ತು ಕಾಮೆಂಟ್ ಹರಿದುಬಂದಿದೆ

ಫೋಟೋ ಶೇರ್ ಮಾಡಿ ಪ್ರಿಯಾಂಕಾ, 'ನನ್ನ ಪ್ರೀತಿಗೆ ಮೊದಲ ಫಾದರ್ಸ್ ಡೇ ಶುಭಾಶಯಗಳು. ನನ್ನ ಪುಟ್ಟ ಮಗಳ ಜೊತೆ ನಿನ್ನನ್ನು ನೋಡುವುದು ತುಂಬಾ ಸಂತೋಷವಾಗಿದೆ. ಮನೆಗೆ ಬಂದಿರುವುದು ಎಂಥ ಅದ್ಭುತ ದಿನ' ಎಂದಿದ್ದಾರೆ. 

ನಿಕ್ ಜೋನಸ್ ಕೂಡ ಮಗಳ ಮುದ್ದಾದ ಫೋಟೋ ಶೇರ್ ಮಾಡಿದ್ದಾರೆ. ಫೋಟೋ ಜೊತೆಗೆ ಪ್ರಿಯಾಂಕಾಗೆ ಧನ್ಯವಾದ ತಿಳಿಸಿದ್ದಾರೆ. ಜೊತೆಗೆ ಮಗಳಿಗೆ ಫಾದರ್ಸ್ ಡೇ ಶುಭಾಶಯ ತಿಳಿಸಿದ್ದಾರೆ. 

ಪ್ರಿಯಾಂಕಾ ಸಿನಿಮಾ ವಿಚಾರಕ್ಕೆ ಬರುವುದಾದರೆ  ಕೊನೆಯದಾಗಿ ಮ್ಯಾಟ್ರಿಕ್ಸ್ ಮೂಲಕ ಅಭಿಮಾನಿಗಳ ಮುಂದೆ ಬಂದಿದ್ದರು. ಸದ್ಯ ಪ್ರಿಯಾಂಕಾ ಚೋಪ್ರಾ ಇಟ್ಸ್ ಆಲ್ ಕಮ್ಮಿಂಗ್ ಬ್ಯಾಕ್ ಟು ಮಿಯಲ್ಲಿ ಬ್ಯುಸಿಯಾಗಿದ್ದಾರೆ.
 

ಬಾಲಿವುಡ್ ನಲ್ಲಿ ಪ್ರಿಯಾಂಕಾ ಕೊನೆಯದಾಗಿ ದಿ ವೈಟ್ ಟೈಗರ್ ಮೂಲಕ ಭಾರತೀಯ ಅಭಿಮಾನಿಗಳ ಮುಂದೆ ಬಂದಿದ್ದರು. ಪ್ರಿಯಾಂಕಾ ಯಾವಾಗ ಮತ್ತೆ ಹಿಂದಿಯಲ್ಲಿ ಸಿನಿಮಾ ಮಾಡುತ್ತಾರೆ ಎಂದು ಭಾರತೀಯ ಅಭಿಮಾನಿಗಳು ಕಾಯುತ್ತಿದ್ದಾರೆ.
 

Latest Videos

click me!