ಕರಾವಳಿ ಸುಂದರಿ ಪೂಜಾ ಹೆಗ್ಡೆ ದಕ್ಷಿಣ ಭಾರತ ಮತ್ತು ಬಾಲಿವುಡ್ ಎರಡು ಕಡೆ ಬ್ಯುಸಿ ಇರುವ ನಟಿ. ಪೂಜಾ ನಟನೆಯ ಸಿನಿಮಾಗಳು ಸರಣಿ ಸೋಲು ಕಂಡಿವೆ. ಆದರೂ ಪೂಜಾಗೆ ಬೇಡಿಕೆ ಕಡಿಮೆಯಾಗಿಲ್ಲ.
ಭಾರಿ ಬೇಡಿಕೆಯ ನಟಿಯಾಗಿರುವ ಪೂಜಾ ಸದ್ಯ ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ಆಕ್ಟೀವ್ ಆಗಿರುವ ನಟಿ ಪೂಜಾ ಆಗಾಗ ಸುಂದರ ಫೋಟೋಗಳನ್ನು ಶೇರ್ ಮಾಡುತ್ತಿರುತ್ತಾರೆ. ಇದೀಗ ಪೂಜಾ ಮತ್ತಷ್ಟು ಫೋಟೊಗಳನ್ನು ಹಂಚಿಕೊಂಡಿದ್ದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಪೂಜಾ ಕಲರ್‌ಫುಲ್ ಆಗಿ ಮಿಂಚಿದ್ದಾರೆ. ಹೌದು, ಬೀಸ್ಟ್ ಸುಂದರಿ ಹಳದಿ, ಕೇಸರಿ, ನೀಲಿ ಹೀಗೆ ಬಹು ಬಣ್ಣದ ಬಟ್ಟೆ ಧರಿಸಿ ಕ್ಯಾಮರಾಗೆ ಪೋಸ್ ನೀಡಿದ್ದಾರೆ. ಪೂಜಾ ಸುಂದರ ಫೋಟೋಗಳನ್ನು ಶೇರ್ ಮಾಡಿ ಮೆಸ್ ಎಂದ ಕ್ಯಾಪ್ಷನ್ ನೀಡಿದ್ದಾರೆ.
ಪೂಜಾ ಹೆಗ್ಡೆ ಫೋಟೋಗೆ ಅಭಿಮಾನಿಗಳಿಂದ ಸಿಕ್ಕಾಪಟ್ಟೆ ಲೈಕ್ಸ್ ಮತ್ತು ಕಾಮೆಂಟ್ ಹರಿದುಬಂದಿದೆ. ಅಭಿಮಾನಿಗಳು ಹಾರ್ಟ್ ಮತ್ತು ಬೆಂಕಿ ಇಮೋಜಿ ಹಾಕಿ ಪೂಜಾ ಮೇಲಿನ ಪ್ರೀತಿ ವ್ಯಕ್ತಪಡಿಸುತ್ತಿದ್ದಾರೆ.
ಇನ್ನು ಸಿನಿಮಾ ವಿಚಾರಕ್ಕೆ ಬಂದರೆ ಪೂಜಾ ಕೊನೆಯದಾಗಿ ಆಚಾರ್ಯ ಸಿನಿಮಾ ಮೂಲಕ ಅಭಿಮಾನಿಗಳ ಮುಂದೆ ಬಂದಿದ್ದರು. ಆದರೆ ಈ ಸಿನಿಮಾ ಬಾಕ್ಸ್ ಆಫೀಸ್ ನಲ್ಲಿ ಹೀನಾಯ ಸೋಲು ಕಂಡಿತ್ತು. ಬೀಸ್ಟ್, ರಾಧೆ ಶ್ಯಾಮ್ ಸಿನಿಮಾಗಳು ಸಹ ಸೋಲು ಕಂಡಿವೆ.
ಸದ್ಯ ಪೂಜಾ ಬಾಲಿವುಡ್‌ನಲ್ಲಿ ಸರ್ಕಸ್ ಮತ್ತು ಸಲ್ಮಾನ್ ಖಾನ್ ಜೊತೆ ಕಭಿ ಈದ್ ಕಭಿ ದಿವಾಲಿ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಇನ್ನು ತೆಲುಗಿನಲ್ಲಿ ಜನ ಗಣ ಮನ ಸಿನಿಮಾದಲ್ಲಿ ನಟಿಸುತ್ತಿದ್ದಾರೆ.