ಇಂಗ್ಲೆಂಡ್‌ನಲ್ಲಿ ಎರಡು ದಿನ ಬೈಕ್‌ ರೈಡ್ ಹೊರಟ ನಟ ಅಜಿತ್!

First Published | Jun 20, 2022, 11:59 AM IST

ವಿದೇಶದಲ್ಲಿ ಬೈಕ್ ರೈಡ್‌ ಹೊರಟ ನಟ ಅಜಿತ್ ಕುಮಾರ್. ನಟನ ದುಬಾರಿ ಬೈಕ್ ಆಂಡ್ ಕೂಲ್‌ ಲುಕ್‌ಗೆ ನೆಟ್ಟಿಗರು ಫಿದಾ. 

ಕಾಲಿವುಡ್ ತಲಾ ಅಜಿತ್ ಕುಮಾರ್ ಲಂಡನ್ ಪ್ರವಾಸದಲ್ಲಿ ಸಖತ್ ಬ್ಯುಸಿಯಾಗಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಅಜಿತ್ ಬೈಕ್ ಸವಾರಿ ಫೋಟೋ ವೈರಲ್ ಆಗುತ್ತಿದೆ.

'ಅಜಿತ್ ಕಳೆದ ನಾಲ್ಕೈದು ದಿನಗಳಿಂದ ಲಂಡನ್‌ನಲ್ಲಿ ಇದ್ದಾರೆ. ಇದೊಂದು ಸಣ್ಣ ಪ್ರವಾಸ ಆಗಲಿದ್ದು, ಅಲ್ಲಿನ ಬೈಕರ್ ಸ್ನೇಹಿತರನ್ನು ಭೇಟಿ ಮಾಡಿರುವ ಕಾರಣ ಇಂಗ್ಲಾಂಡ್‌ಗೆ ಬೈಕ್ ರೈಡ್ ಹೊರಟಿದ್ದಾರೆ' ಎಂದು ಅಜಿತ್ ಆಪ್ತರೊಬ್ಬರು ಖಾಸಗಿ ಮಾಧ್ಯಮಕ್ಕೆ ಹೇಳಿದ್ದಾರೆ. .

Tap to resize

 #AK61 ಸಿನಿಮಾ ಚಿತ್ರೀಕರಣ ಮುಗಿಯುತ್ತಿದ್ದಂತೆ ಅಜಿತ್ ವಿದೇಶ ಪ್ರವಾಸ ಮಾಡುಲು ಸಜ್ಜಾಗುತ್ತಾರೆ. ಆದರೆ ನಿರ್ದೇಶಕ ವಿಘ್ನೇಶ್ ಶಿವಣ್ಣ ಜೊತೆ ಸಿನಿಮಾ ಮಾತುಕಥೆ ಮಾಡುತ್ತಿದ್ದ ಕಾರಣ ದಿನ ಮುಂದೂಡುತ್ತಿದ್ದರು. 
 

'ಆಗಸ್ಟ್‌ ಅಥವಾ ಸಪ್ಟೆಂಬರ್‌ ತಿಂಗಳಿನಲ್ಲಿ ನಟ ಅಜಿತ್‌ ಮತ್ತೊಂದು ವಿದೇಶ ಪ್ರವಾಸ ಮಾಡಲಿದ್ದಾರೆ. ಹೈದರಾಬಾದ್‌ನಲ್ಲಿ ಚಿತ್ರೀಕರಣ ಮಾಡುತ್ತಿರುವ ಸಿನಿಮಾದಿಂದ ಬ್ರೇಕ್‌ ತೆಗೆದುಕೊಂಡು ಲಂಡನ್ ಪ್ರಯಾಣ ಮಾಡಿದ್ದಾರೆ. ಜುಲೈ ಮೊದಲ ವಾರದಲ್ಲಿ ಚಿತ್ರೀಕರಣ ಆರಂಭಿಸಲಿದ್ದಾರೆ' ಎಂದು ಹೇಳಲಾಗಿದೆ. 

ಸದ್ಯ ಅಜಿತ್ ಕುಮಾರ್ belgiumನಲ್ಲಿ ಇದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ. ಬೈಕರ್ ಲುಕ್‌ನಲ್ಲಿ ಸೂಪರ್ ಆಗಿ ಕಾಣಿಸಿಕೊಂಡಿದ್ದಾರೆ.

Latest Videos

click me!