Priyanka chopra
ಮಹಾಲಕ್ಷ್ಮಿ ಪೂಜೆಯ ಬಹಳಷ್ಟು ಫೋಟೋಗಳನ್ನು ಹಂಚಿಕೊಂಡಿದ್ದಾರೆ ಪ್ರಿಯಾಂಕಾ 'ಮಹಾಲಕ್ಷ್ಮಿ ಆಶೀರ್ವಾದದೊಂದಿಗೆ, ನಾವು ಅವರ ಅನುಗ್ರಹ ಮತ್ತು ಸಮೃದ್ಧಿಯನ್ನು ನಮ್ಮ ಮನೆಗೆ ಆಹ್ವಾನಿಸುತ್ತೇವೆ. ಎಲ್ಲರಿಗೂ ದೀಪಾವಳಿ ಹಬ್ಬದ ಶುಭಾಶಯಗಳು' ಎಂದು ಪೋಟೋದೊಂದಿಗೆ ಬರೆದಿದ್ದಾರೆ.
Priyanka chopra
ಪ್ರಿಯಾಂಕಾ ಹಳದಿ ಬಣ್ಣದ ಸೀರೆಯನ್ನು ಉಟ್ಟಿರುವುದು ಫೋಟೋಗಳಲ್ಲಿ ಕಾಣಬಹುದು. ಅವರು ಪತಿ ನಿಕ್ ಜೋನಾಸ್ ಅವರ ಕೈ ಹಿಡಿದು ಲಕ್ಷ್ಮಿಯನ್ನು ಪೂಜಿಸಿದರು. ಪೂಜೆಯ ವೇಳೆ ಪ್ರಿಯಾಂಕಾ ಚೋಪ್ರಾ ಮೇಕಪ್ ಇಲ್ಲದೆ ಕಾಣಿಸಿಕೊಂಡಿದ್ದರು. ಪ್ರಿಯಾಂಕಾ ತುಂಬಾ ಸಿಂಪಲ್ ಲುಕ್‌ನಲ್ಲಿ ಕಾಣಿಸಿಕೊಂಡಿದ್ದು, ತಲೆಯ ಮೇಲೆ ಸಿಂಧೂರವನ್ನು ಧರಿಸಿದ್ದರು ಮತ್ತು ಕೂದಲು ತೆರೆದಿತ್ತು ಹಾಗೂ ವಜ್ರದ ಕಿವಿಯೋಲೆಗಳನ್ನು ಧರಿಸಿದ್ದರು.
Priyanka chopra
ಪ್ರಿಯಾಂಕಾ ಚೋಪ್ರಾ ದೀಪಾವಳಿಯ ಸಂದರ್ಭದಲ್ಲಿ ಲಾಸ್ ಏಂಜಲೀಸ್‌ನ ತಮ್ಮ ಮನೆಯಲ್ಲಿ ಪೂರ್ಣ ಆಚರಣೆಗಳೊಂದಿಗೆ ಲಕ್ಷ್ಮಿ ದೇವಿಯನ್ನು ಪೂಜಿಸಿದರು. ಈ ಸಂದರ್ಭದಲ್ಲಿ ಅವರ ಪತಿ ನಿಕ್ ಜೋನಾಸ್ ಕೂಡ ಅವರ ಜೊತೆ ಪೂಜೆಯಲ್ಲಿ ಕುಳಿತಿದ್ದರು.
Priyanka chopra
ಲಕ್ಷ್ಮಿ ಪೂಜೆಗೆ ಮುನ್ನ, ಪ್ರಿಯಾಂಕಾ ಚೋಪ್ರಾ ಮತ್ತು ನಿಕ್ ಜೋನಾಸ್ ತಾವೇ ಸ್ವತಃ ಎಲ್ಲಾ ಸಿದ್ಧತೆಗಳನ್ನು ಮಾಡಿಕೊಂಡರು. ಈ ಸಮಯದಲ್ಲಿ, ನಿಕ್ ಬಿಳಿ ಕುರ್ತಾ-ಪೈಜಾಮಾವನ್ನು ಧರಿಸಿದ್ದರು. ಇಂಡಿಯನ್ ಔಟ್‌ಫಿಟ್‌ನ್ಲಲಿ ತುಂಬಾ ಸುಂದರವಾಗಿ ಕಾಣುತ್ತಿದ್ದರು.
Priyanka chopra
ಪೂಜೆಯ ನಂತರ, ಪ್ರಿಯಾಂಕಾ ಚೋಪ್ರಾ ಮತ್ತು ನಿಕ್ ಜೋನಾಸ್ ಆರತಿ ತಟ್ಟೆಯನ್ನು ಅಲಂಕರಿಸಿ ಅದರಲ್ಲಿ ದೀಪವನ್ನು ಬೆಳಗಿಸಿದರು. ಈ ಸಂದರ್ಭದಲ್ಲಿ, ಪ್ರಿಯಾಂಕಾ ತನ್ನ ತಲೆ ಮೇಲೆ ಸೆರಗು ಹೊದ್ದುಕೊಂಡಿರುವುದು ಕಂಡುಬಂದಿದೆ. ಈ ದಂಪತಿಗಳು ಒಟ್ಟಿಗೆ ತಟ್ಟೆ ಹಿಡಿದು ಮಹಾ ಲಕ್ಷ್ಮಿಯ ಆರತಿ ಮಾಡಿದರು.
ಪೂಜೆಯ ಸಮಯದಲ್ಲಿ ನಿಕ್ ಜೋನಾಸ್ ಮತ್ತು ಪ್ರಿಯಾಂಕಾ ಚೋಪ್ರಾ ತುಂಬಾ ಸಂತೋಷದಿಂದ ಕಾಣುತ್ತಿದ್ದರು. ಈ ವೇಳೆ ಅಲ್ಲಿದ್ದ ಕುಟುಂಬಸ್ಥರು ಇಬ್ಬರ ಮೇಲೆ ಹೂವನ್ನು ಸುರಿದಾಗ ಪ್ರಿಯಾಂಕಾಗೆ ನಗು ತಡೆಯಲಾಗಲಿಲ್ಲ.
Priyanka Chopra
ಪ್ರಿಯಾಂಕಾ ಚೋಪ್ರಾ ದೀಪಾವಳಿಯ ಮೊದಲು ಪ್ರೀ ದಿವಾಳಿ ಬ್ಯಾಷ್ ಆಚರಣೆಯನ್ನು ಮಾಡಿದರು. ಈ ಸಂದರ್ಭದಲ್ಲಿ ಅವರು ತಮ್ಮ ಸ್ನೇಹಿತರೊಂದಿಗೆ ಸಾಕಷ್ಟು ಎಂಜಾಯ್ ಮಾಡಿದರು. ದೀಪಾವಳಿ ಪ್ರೀ ಸೆಲೆಬ್ರೆಷನ್‌ನಲ್ಲಿ ಪ್ರಿಯಾಂಕಾ ಚೋಪ್ರಾ ಡ್ಯಾನ್ಸ್ ಮಾಡಿದ್ದಾರೆ. ಈ ಸಂದರ್ಭದಲ್ಲಿ ಪ್ರಿಯಾಂಕಾ ಬಿಳಿ ಬಣ್ಣದ ಲೆಹೆಂಗಾ ಧರಿಸಿದ್ದರು.