'ಮುಸ್ತಾಫ್ ಜೊತೆ ಮದುವೆಯಾಗಿದ್ದಕ್ಕೆ ನಮ್ಮ ಮಕ್ಕಳು ಭಯೋತ್ಪಾದಕರಾಗ್ತಾರೆ ಅಂತ ಹೇಳಿದ್ರು': ಆ ದಿನಗಳ ಬಗ್ಗೆ ಪ್ರಿಯಾಮಣಿ ಮಾತು

Published : Oct 06, 2024, 11:18 AM ISTUpdated : Oct 07, 2024, 08:02 AM IST

ನಟಿ ಪ್ರಿಯಾಮಣಿ ತನ್ನ ಬಹುಕಾಲದ ಗೆಳೆ ಮುಸ್ತಫಾ ರಾಜ್ ಜೊತೆ ಅಂತರ್ಧರ್ಮಿಯ ವಿವಾಹ ಬಳಿಕ ಟ್ರೋಲ್‌ಗಳಿಗೆ ಗುರಿಯಾದ ಬಗ್ಗೆ ಓಪನ್ ಆಗಿ ಮಾತನಾಡಿದ್ದಾಳೆ. ಮುದುವೆ ಬಳಿಕ ಅವಳ ಮಕ್ಕಳು ಭಯೋತ್ಪಾದಕರಾಗುತ್ತಾರೆ ಎಂದು ಟ್ರೋಲ್ ಮಾಡಲಾಗಿತ್ತು

PREV
17
'ಮುಸ್ತಾಫ್ ಜೊತೆ ಮದುವೆಯಾಗಿದ್ದಕ್ಕೆ ನಮ್ಮ ಮಕ್ಕಳು ಭಯೋತ್ಪಾದಕರಾಗ್ತಾರೆ ಅಂತ ಹೇಳಿದ್ರು': ಆ ದಿನಗಳ ಬಗ್ಗೆ ಪ್ರಿಯಾಮಣಿ ಮಾತು

ಮುಂಬೈ: ನಟಿ ಪ್ರಿಯಾಮಣಿ ಮತ್ತು ಮುಸ್ತಫಾ ರಾಜ್ 2017 ರಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಬೆಂಗಳೂರಿನಲ್ಲಿ ನಡೆದ ಐಪಿಎಲ್ ಪಂದ್ಯದ ವೇಳೆ ಭೇಟಿಯಾದ ಇವರಿಬ್ಬರು ಸ್ನೇಹಿತರಾಗಿ ಪ್ರೇಮಿಗಳಾಗಿ ಕೊನೆಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಆದರೆ ಮದುವೆಯ ನಂತರ ತಾನು ಎದುರಿಸಿದ ಸೈಬರ್ ದಾಳಿಯ ಬಗ್ಗೆ ಪ್ರಿಯಾಮಣಿ ಬಾಯ್ಬಿಟ್ಟಿದ್ದಾರೆ.
 

27
ಪ್ರಿಯಾಮಣಿ

ತನಗೂ ಮತ್ತು ಮುಸ್ತಫಾಗೂ ಹುಟ್ಟುವ ಮಕ್ಕಳು "ಭಯೋತ್ಪಾದಕರು" ಆಗುತ್ತಾರೆ ಎಂದು ಕೆಲವರು ಹೇಳಿದ್ದರು. ಟ್ರೋಲ್ ಮಾಡಿದ್ದರು ಎಂದು ಪ್ರಿಯಾಮಣಿ ಹೇಳಿದ್ದಾರೆ. ಮದುವೆ ಘೋಷಣೆಯಾದಾಗಿನಿಂದಲೂ ಪ್ರಾರಂಭವಾದ ಈ ದ್ವೇಷ ಅಭಿಯಾನ ಮದುವೆಯ ನಂತರವೂ ಮುಂದುವರೆಯಿತು ಎಂದು ನಟಿ ಹೇಳಿದ್ದಾರೆ. ಇತ್ತೀಚೆಗೆ ನೀಡಿದ ಸಂದರ್ಶನವೊಂದರಲ್ಲಿ ತನ್ನ ಧಾರ್ಮಿಕ ನಂಬಿಕೆಯನ್ನೇ ಪ್ರಶ್ನಿಸುವ ರೀತಿಯಲ್ಲಿ ಈ ಸೈಬರ್ ದಾಳಿ ಮುಂದುವರೆದಿದೆ ಎಂದು ಪ್ರಿಯಾಮಣಿ ಹೇಳಿದ್ದಾರೆ. 

37

ಫಿಲ್ಮ್‌ಫೇರ್‌ಗೆ ನೀಡಿದ ಸಂದರ್ಶನದಲ್ಲಿ ತಮ್ಮ ಮದುವೆ ಘೋಷಣೆಯ ನಂತರ ತನಗೆ ಬಂದ ಪ್ರತಿಕ್ರಿಯೆಯನ್ನು ಪ್ರಿಯಾಮಣಿ ನೆನಪಿಸಿಕೊಂಡರು. ಫೇಸ್‌ಬುಕ್‌ನಲ್ಲಿ ನಿಶ್ಚಿತಾರ್ಥವನ್ನು ಘೋಷಿಸುತ್ತಾ ಕುಟುಂಬದ ಸಮ್ಮತಿಯೊಂದಿಗೆ ಜಂಟಿ ಹೇಳಿಕೆಯನ್ನು ಪೋಸ್ಟ್ ಮಾಡಿದ್ದೆವು. ಬಹಳ ಸಂತೋಷದಿಂದ ಆ ಘೋಷಣೆ ಮಾಡಿದೆವು. ಆದರೆ ನಂತರ ದ್ವೇಷದಿಂದ ತುಂಬಿದ ಕಾಮೆಂಟ್‌ಗಳು ಬಂದವು. "ಜಿಹಾದಿ, ಮುಸ್ಲಿಂ, ನಿಮ್ಮ ಮಕ್ಕಳು ಭಯೋತ್ಪಾದಕರಾಗಲಿದ್ದಾರೆ" ಎಂದು ಜನರು ನನಗೆ ಸಂದೇಶ ಕಳುಹಿಸುತ್ತಿದ್ದರು" ಎಂದು ಪ್ರಿಯಾಮಣಿ ನೆನಪಿಸಿಕೊಂಡರು. 

47

ಇದು ತನ್ನನ್ನು ನಿಜವಾಗಿಯೂ ದುರ್ಬಲಗೊಳಿಸಿದೆ ಎಂದು ಪ್ರಿಯಾಮಣಿ ಒಪ್ಪಿಕೊಂಡರು. “ಇದು ನಿರಾಶಾದಾಯಕವಾಗಿತ್ತು. ಅಂತರ್-ಧರ್ಮ ದಂಪತಿಗಳಾದ ನಮ್ಮನ್ನು ಏಕೆ ಗುರಿಯಾಗಿಸಲಾಗುತ್ತಿದೆ? ಜಾತಿ ಮತ್ತು ಧರ್ಮವನ್ನು ಮೀರಿ ಮದುವೆಯಾದ ಅನೇಕ ಪ್ರಮುಖ ತಾರೆಯರಿದ್ದಾರೆ. ಅವರು ಒಂದು ಧರ್ಮವನ್ನು ಮಾತ್ರ ಅನುಸರಿಸಬೇಕು ಅಥವಾ ಸ್ವೀಕರಿಸಬೇಕು ಎಂದೇನಿಲ್ಲ. ಅವರು ಧರ್ಮ ನೋಡದೆ ಪ್ರೀತಿಸಿದರು. ಹಾಗಾದರೆ ಇಂತಹ ವಿಷಯದಲ್ಲಿ ಇಷ್ಟೊಂದು ದ್ವೇಷ ಏಕೆ ಎಂದು ನನಗೆ ಅರ್ಥವಾಗುತ್ತಿಲ್ಲ” ಎಂದು ಪ್ರಿಯಾಮಣಿ ಹೇಳಿದರು.
 

57
ಪ್ರಿಯಾಮಣಿ

ಇತ್ತೀಚೆಗೆ ನಡೆದ ಒಂದು ಘಟನೆಯನ್ನು ಪ್ರಿಯಾಮಣಿ ಹಂಚಿಕೊಂಡಿದ್ದಾರೆ, ಈದ್ ದಿನದಂದು ಶುಭಾಶಯಗಳನ್ನು ಕೋರಿ ಫೋಟೋ ಪೋಸ್ಟ್ ಮಾಡಿದ್ದೆ, ನಂತರ ನಾನು ಇಸ್ಲಾಂಗೆ ಮತಾಂತರಗೊಂಡಿದ್ದೇನೆ ಎಂಬ ಪ್ರಚಾರ ಶುರುವಾಯಿತು. "ನಾನು ಮತಾಂತರಗೊಂಡಿದ್ದೇನೆ ಎಂದು ಅವರಿಗೆ ಹೇಗೆ ತಿಳಿಯುತ್ತದೆ? ನಾನು ಹಿಂದುವಾಗಿ ಜನಿಸಿದೆ, ಯಾವಾಗಲೂ ಆ ನಂಬಿಕೆಯನ್ನು ಪಾಲಿಸುತ್ತೇನೆ, ನಾವು (ಪ್ರಿಯಾಮಣಿ ಮತ್ತು ಪತಿ) ಪರಸ್ಪರ ನಂಬಿಕೆಗಳನ್ನು ಗೌರವಿಸುತ್ತೇವೆ, ಯಾವುದೇ ಒತ್ತಡವಿಲ್ಲ" ಎಂದು ಪ್ರಿಯಾಮಣಿ ಸ್ಪಷ್ಟಪಡಿಸಿದರು.
 

67

“ಈದ್‌ಗೆ ಪೋಸ್ಟ್ ಮಾಡಿದಾಗ ನಾನು ನವರಾತ್ರಿಗೆ ಏಕೆ ಪೋಸ್ಟ್ ಮಾಡಲಿಲ್ಲ ಎಂದು ಕೆಲವರು ಕೇಳಿದರು. ಹೇಗೆ ಪ್ರತಿಕ್ರಿಯಿಸಬೇಕೆಂದು ನನಗೆ ತಿಳಿದಿರಲಿಲ್ಲ, ಆದರೆ ಇನ್ನು ಮುಂದೆ ಇದ್ಯಾವುದೂ ನನ್ನ ಮೇಲೆ ಪರಿಣಾಮ ಬೀರುವುದಿಲ್ಲ. ಅಂತಹ ನಕಾರಾತ್ಮಕತೆಗೆ ಗಮನ ಕೊಡಬಾರದು ಎಂದು ನಾನು ನಿರ್ಧರಿಸಿದ್ದೇನೆ" ಎಂದು ನಟಿ ಹೇಳಿದರು.

77

ಇದೀಗ ಪ್ರಿಯಾಮಣಿ ವಿಜಯ್ ನಾಯಕತ್ವದ ದಳಪತಿ 69 ಚಿತ್ರದಲ್ಲಿ ನಟಿಸುತ್ತಿದ್ದಾರೆ. ಹೆಚ್. ವಿನೋದ್ ನಿರ್ದೇಶನದ ಈ ಚಿತ್ರದಲ್ಲಿ ಪ್ರಿಯಾಮಣಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗಿದೆ. ಚೆನ್ನೈನಲ್ಲಿ ನಡೆದ ಚಿತ್ರದ ಪೂಜೆಯಲ್ಲಿ ಪ್ರಿಯಾಮಣಿ ಭಾಗವಹಿಸಿದ್ದರು. 

Read more Photos on
click me!

Recommended Stories